ಚಿತ್ರರಂಗದ ಜೊತೆ ಬಿಗ್ ಬಾಸ್ ರಾಜೀವ್ ರವರು ಹೊಂದಿರುವ ಉದ್ಯಮ ಯಾವುದು ಗೊತ್ತೆ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಇದೀಗ ಒಂದು ವರ್ಷಗಳ ಬ್ರೇಕ್ ನ ನಂತರ ಆರಂಭಗೊಂಡಿರುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಹಲವಾರು ಸ್ಪರ್ಧಿಗಳು ಉತ್ತಮವಾಗಿ ಆಟ ಹಾಡುತ್ತಿದ್ದಾರೆ, ಹೀಗೆ ಉತ್ತಮವಾಗಿ ಆಟ ಆಡುತ್ತಿರುವ ಸ್ಪರ್ಧಿಗಳಲ್ಲಿ ತಾರೆಯರ ಕ್ರಿಕೆಟ್ ಲೀಗ್ ಗಳ ಮೂಲಕ ಹೆಚ್ಚಿನ ಜನಪ್ರಿಯತೆಯನ್ನು ಪಡೆದು ಕೊಂಡಿರುವ ರಾಜೀವ್ ರವರು ಕೂಡ ಬಹಳ ಅದ್ಭುತವಾಗಿ ಬಿಗ್ ಬಾಸ್ ಮನೆಯಲ್ಲಿ ಆಟವಾಡುತ್ತಿದ್ದು ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನು ಇವರ ವೈಯಕ್ತಿಕ ಜೀವನದ ಕುರಿತು ಹೇಳುವುದಾದರೆ ತಾವು ಏಳನೇ ಕ್ಲಾಸಿನಲ್ಲಿ ಇದ್ದಾಗಲೇ ವಿವಿಧ ಸ್ಪೋರ್ಟ್ಸ್ ಗಳಲ್ಲಿ ತಂಡದ ಕ್ಯಾಪ್ಟನ್ ಆಗಿದ್ದ ರಾಜೀವ್ ರವರು ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಆಲ್-ರೌಂಡರ್ ಕ್ರಿಕೆಟರ್ ಆಗಿ ಮಿಂಚುತ್ತಾರೆ, ಬೆಂಗಳೂರಿನಲ್ಲಿ ತಮ್ಮ ಶಾಲಾ ವಿದ್ಯಾಭ್ಯಾಸ ಹಾಗೂ ಕಾಲೇಜು ವಿದ್ಯಾಭ್ಯಾಸವನ್ನು ಮುಗಿಸಿರುವ ರಾಜೀವ್ ರವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿಯೇ.

ಇನ್ನು ಇವರ ಮದುವೆಯ ಕುರಿತು ಮಾತನಾಡುವುದಾದರೆ 2018 ರ ನವಂಬರ್ ನಲ್ಲಿ ಮೇಕಪ್ ಆರ್ಟಿಸ್ಟ್ ಆಗಿರುವ ರೇಷ್ಮಾ ರವರ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡ ರಾಜೀವ್ ರವರು, 2019 ಫೆಬ್ರವರಿ 15 ನೇ ತಾರೀಖಿನಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ, ಇನ್ನು ತಮ್ಮದೇ ಆದ ಸ್ವಂತ ಹೋಟೆಲ್ ಹೊಂದಿರುವ ರಾಜೀವ್ ರವರು ಬೆಂಗಳೂರಿನಲ್ಲಿ ದೊನ್ನೆ ಬಿರಿಯಾನಿ ಮನೆ ಎಂಬ ಹೋಟೆಲ್ ನಡೆಸುತ್ತಿದ್ದಾರೆ, ಕ್ರೀಡೆ ಚಿತ್ರರಂಗದ ಜೊತೆ ಹೋಟೆಲ್ ಉದ್ಯಮಿಯಾಗಿ ರಾಜೀವ್ ರವರ ಜೀವನ ಸಾಗಿಸುತ್ತಿದ್ದಾರೆ.