ಬಾಹುಬಲಿ ನಂಬಿ 100 ಕೋಟಿ ಕಳೆದುಕೊಂಡರೂ ಬುದ್ಧಿ ಕಲಿಯದ ನೆಟ್ ​ಫ್ಲಿಕ್ಸ್ ಮಾಡಲು ಹೊರಟಿರುವುದು ಏನು ಗೊತ್ತಾ??

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗು ತಿಳಿದಿರುವಂತೆ ವಿಶ್ವದ ಚಿತ್ರರಂಗ ಭಾರತದ ಚಿತ್ರರಂಗದ ಕಡೆ ತಿರುಗಿ ನೋಡುವಂತೆ ಮಾಡಿತ್ತು ಬಾಹುಬಲಿ ಚಿತ್ರ. ನಿರ್ದೇಶಕ ರಾಜಮೌಳಿ ಅವರು ನಿರ್ದೇಶನ ಮಾಡಿದ ಈ ಚಿತ್ರ ಕೇವಲ ಭಾರತದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲೂ ಕೂಡ ಭರ್ಜರಿಯಾಗಿ ಕಲೆಕ್ಷನ್ ಮಾಡಿತ್ತು‌. ಈ ಚಿತ್ರ ಯಾವುದೇ ಸ್ಟಾರ್ ನಟರ ಹೆಸರಿನಿಂದ ಇದು ಯಶಸ್ಸು ಕಾಣಲಿಲ್ಲ ಬದಲಾಗಿ ಪ್ರೇಕ್ಷಕರನ್ನು ಪದೇ ಪದೇ ಚಿತ್ರವನ್ನು ನೋಡುವಂತಹ ಕತೆಯಿಂದ ನಿರ್ಮಾಣವಾದ ಕಾರಣ ಯಶಸ್ಸು ಗಳಿಸಿತ್ತು.

ಅದೇ ಕಾರಣಕ್ಕಾಗಿ ಬಿಡುಗಡೆಗೊಂಡ ಎರಡು ಭಾಗಗಳು ಬಾಕ್ಸಾಫೀಸ್ ನಲ್ಲಿ ಸದ್ದು ಮಾಡುವಲ್ಲಿ ಯಶಸ್ವಿಯಾಗಿದ್ದವು, ಇದನ್ನು ಕಂಡ ಪ್ರತಿಷ್ಠಿತ ಆನ್ಲೈನ್ ಚಿತ್ರ ಸಂಸ್ಥೆ ನೆಟ್ಫ್ಲಿಕ್ಸ್ ಸಂಸ್ಥೆಯ ಬಾಹುಬಲಿ ಮೊದಲನೆ ಭಾಗ ಹಾಗೂ ಎರಡನೇ ಭಾಗದ ಕುರಿತು ಎಲ್ಲರಿಗೂ ತಿಳಿದಿದೆ. ಆದರೆ ಬಾಹುಬಲಿ ಚಿತ್ರಕ್ಕೂ ಮುನ್ನ ಏನು ನಡೆಯುತ್ತದೆ ಎಂಬುದನ್ನು ತೋರಿಸಲು ನಿರ್ಧಾರ ಮಾಡಿ ಬರೋಬ್ಬರಿ 100 ಕೋಟಿ ವೆಚ್ಚದಲ್ಲಿ ವೆಬ್ ಸಿರೀಸ್ ನಿರ್ಮಾಣ ಮಾಡಲು ‌ ಮುಂದಾಗಿ ನಿರ್ಮಾಣ ಮಾಡಿತ್ತು.

ಆದರೆ ಈ ವೆಬ್ಸೇರಿಸ್ ಪ್ರೇಕ್ಷಕರ ಮನಗೆಲ್ಲುವಲ್ಲಿ ವಿಫಲವಾಗಿದೆ ಎಂಬುದು ತಿಳಿದು ಬಂದಿರುವ ಕಾರಣ ಈಗಾಗಲೇ ಚಿತ್ರೀಕರಣ ಮಾಡಿರುವ ಎಲ್ಲಾ ದೃಶ್ಯಗಳನ್ನು ಹಾಗೂ ಎಪಿಸೋಡುಗಳನ್ನು ಪಕ್ಕಕ್ಕೆ ಎಸೆದು ಮತ್ತೊಮ್ಮೆ 200 ಕೋಟಿ ಬಜೆಟ್ ಹಾಕಿ ಮರು ನಿರ್ಮಾಣ ಮಾಡಲು ನಿರ್ಧಾರ ಮಾಡಿದೆ ಎಂಬುದು ತಿಳಿದು ಬಂದಿದೆ. ಒಮ್ಮೆ ಪ್ರೇಕ್ಷಕರಿಗೆ ಇಷ್ಟವಾಗದ ಕಥೆ ಮತ್ತಷ್ಟು ಹೆಚ್ಚಿನ ಹಣ ಹೂಡಿಕೆ ಮಾಡಿದರೇ ಇಷ್ಟವಾಗುತ್ತದೆಯೇ ಎಂಬ ಪ್ರಶ್ನೆ ಎಲ್ಲರನ್ನು ಕಾಡತೊಡಗಿದೆ