ಸೈಲೆಂಟಾಗಿದ್ದು ಸೇಫ್ ಆಟವಾಡುತ್ತಿರುವ ವೈಷ್ಣವಿ ರವರ ಸಂಭಾವನೆ ಎಷ್ಟು ಗೊತ್ತಾ,??

ನಮಸ್ಕಾರ ಸ್ನೇಹಿತರೇ ಕಿರುತೆರೆಯಲ್ಲಿ ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕ ಇಡೀ ಕರ್ನಾಟಕದ ಎಲ್ಲೆಡೆ ಜನಪ್ರಿಯತೆಯನ್ನು ಪಡೆದು ಕೊಂಡು ಮನೆ ಮಾತಾಗಿದ್ದ ಸನ್ನಿಧಿ ಪಾತ್ರದಾರಿ ವೈಷ್ಣವಿ ಗೌಡ ರವರು ಬಿಗ್ ಬಾಸ್ ಗೆ ಮನೆಗೆ ತೆರಳುವಲ್ಲಿ ಯಶಸ್ವಿಯಾಗಿದ್ದಾರೆ. ಬಿಗ್ ಬಾಸ್ ಮನೆಗೆ ಇವರು ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಪ್ರಸಾರವಾದಾಗ ಸಂದರ್ಶನದಲ್ಲಿ ಪಾಲ್ಗೊಂಡು ಬಿಗ್ ಬಾಸ್ ಹೋಗುವುದಿಲ್ಲ ಎಂದಿದ್ದ ವೈಷ್ಣವಿ ರವರು ಇದೀಗ ಬಿಗ್ ಬಾಸ್ ಮನೆಗೆ ತೆರಳಿದ್ದಾರೆ.

ಹೀಗೆ ಸದ್ದು ಮಾಡಿದ್ದ ಬಳಿಕ ಬಿಗ್ ಬಾಸ್ ಮನೆಗೆ ಹೋದ ಮೇಲೆ ಮಾತ್ರ ವೈಷ್ಣವಿ ರವರು ಸೈಲೆಂಟ್ ಆಟಕ್ಕೆ ಮೊರೆ ಹೋಗಿದ್ದಾರೆ, ಬಹುಶಹ ವೈಷ್ಣವಿ ರವರು ನಿಜ ಜೀವನದಲ್ಲಿ ಕೂಡ ಸೈಲೆಂಟಾಗಿ ಇದ್ದರೂ ಕೂಡ ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡಿದರೇ ಮಾತ್ರ ಹೆಚ್ಚು ದಿನ ಉಳಿಯ ಬಹುದು ಎಂಬುದು ಮೊದಲಿನಿಂದಲೂ ಬಂದಿರುವ ಲೆಕ್ಕಾಚಾರ.

ಹೀಗೆ ಸೈಲೆಂಟಾಗಿ ಇದ್ದರೂ ಕೂಡ ವೈಷ್ಣವಿ ರವರು ಪಡೆಯುತ್ತಿರುವ ಸಂಭಾವನೆ ಮಾತ್ರ ಹೆಚ್ಚಾಗಿದೆ, ಸಂಭಾವನೆ ಜನಪ್ರಿಯತೆ ಹಾಗೂ ಮೊದಲೇ ಮಾಡಿಕೊಂಡ ಒಪ್ಪಂದದಂತೆ ನೀಡುವುದಾದರೂ ಕೂಡ ವೈಷ್ಣವಿ ರವರು ಉತ್ತಮ ಸಂಭಾವನೆಯನ್ನು ಪಡೆಯುತ್ತಿದ್ದಾರೆ. ಹೌದು ಸ್ನೇಹಿತರೇ ಕಿರುತೆರೆಯ ಮೂಲಗಳ ಪ್ರಕಾರ ವೈಷ್ಣವಿ ಗೌಡ ರವರು ಒಂದು ವಾರಕ್ಕೆ ಬರೋಬ್ಬರಿ 60 ಸಾವಿರ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆಯುತ್ತಾರೆ‌. ಇದು ಅಲ್ಲಿರುವ ಹಲವಾರು ಸ್ಪರ್ಧಿಗಳಿಗಿಂತ ಹೆಚ್ಚಿನ ಸಂಭಾವನೆ ಯಾಗಿದೆ ಎಂಬುದು ತಿಳಿದು ಬಂದಿದೆ.