ಮನೆಯಲ್ಲಿ ಇರುವೆ ಕಾಟನಾ?? ಜಸ್ಟ್ ಹೀಗೆ ಮಾಡಿ ಸಾಕು, ಒಂದು ಇರುವೆ ಇರುವುದಿಲ್ಲ. ಮನೆ ಟಿಪ್ಸ್

ನಮಸ್ಕಾರ ಸ್ನೇಹಿತರೇ, ಕೇವಲ 3 ಪದಾರ್ಥಗಳನ್ನು ನಾವು ಹೇಳುವ ರೀತಿಯಲ್ಲಿ ಉಪಯೋಗಿಸಿದರೆ ನಿಮ್ಮ ಮನೆಯಲ್ಲಿ ಒಂದು ಇರುವೆಯು ಸಹ ಕಾಣಿಸುವುದಿಲ್ಲ. ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲೂ ಇರುವೆಗಳು ಇದ್ದೇ ಇರುತ್ತದೆ. ಅದರಲ್ಲಿಯೂ ಅಡಿಗೆ ಮನೆಯಲ್ಲಿ ಯಾವುದೇ ಒಂದು ರೀತಿಯ ಸಿಹಿಯನ್ನು ಇಟ್ಟರೆ ಅದಕ್ಕೆ ತಕ್ಷಣ ಇರುವೆಗಳು ಬರುತ್ತದೆ. ಇನ್ನು ಕೆಲವು ಮನೆಗಳಲ್ಲಿ ಮಕ್ಕಳಿದ್ದರೆ ಸಾಕು ಮಕ್ಕಳು ಚೆಲ್ಲುವ ತಿಂಡಿಗಳಿಗೆ ತಕ್ಷಣ ಇರುವೆಗಳು ಬರುತ್ತವೆ. ಹೆಚ್ಚಾಗಿ ಬೇಸಿಗೆಕಾಲದಲ್ಲಿ ಮನೆಯಲ್ಲಿ ಇರುವೆಗಳು ಕಂಡುಬರುತ್ತವೆ. ಬೇಗ ಇರುವೆಗಳು ಬರುವುದು ಸಕ್ಕರೆ ಡಬ್ಬಕ್ಕೆ.

ಈ ಟಿಪ್ಸ್ ನನ್ನು ಅನುಸರಿಸುವುದಕ್ಕೆ ನಿಮಗೆ 2 ಚಮಚ ಪುಡಿ ಉಪ್ಪು, 1 ನಿಂಬೆಹಣ್ಣು ಹಾಗೂ 10 ಲವಂಗ ಬೇಕಾಗುತ್ತದೆ. ಮೊದಲಿಗೆ ನಿಂಬೆ ಹಣ್ಣಿನ ಸಿಪ್ಪೆಯನ್ನು ತುರಿದುಕೊಳ್ಳಿ. ನಂತರ ಒಂದು ಕುಟಾಣಿಗೆ 2 ಚಮಚ ಪುಡಿ ಉಪ್ಪು, ತುರಿದ ನಿಂಬೆಹಣ್ಣಿನ ಸಿಪ್ಪೆಯನ್ನು ಹಾಕಿಕೊಳ್ಳಿ. ನಂತರ ಇದಕ್ಕೆ 10 ಲವಂಗವನ್ನು ಹಾಕಿಕೊಂಡು ತರಿ ತರಿಯಾಗುವಂತೆ ಕುಟ್ಟಿಕೊಳ್ಳಿ. ಮತ್ತೊಂದು ಕಡೆ ಒಂದು ಪಾತ್ರೆಗೆ 2 ಲೀಟರ್ ನೀರನ್ನು ಹಾಕಿಕೊಳ್ಳಿ. ನಂತರ ಇದಕ್ಕೆ ಕುಟ್ಟಿದ ಪುಡಿಯನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇರುವೆ ಬರುವ ಜಾಗಗಳಲ್ಲಿ ಈ ನೀರನ್ನು ಉಪಯೋಗಿಸಿಕೊಂಡು ಒರೆಸಿಕೊಳ್ಳಿ. ಇದರಲ್ಲಿ ಬರುವ ಪರಿಮಳದಿಂದ ಮನೆಯಲ್ಲಿ ಇರುವೆಗಳು ಬರುವುದಿಲ್ಲ. ಈ ಟಿಪ್ಸ್ ಅನ್ನು ಪ್ರತಿದಿನವೂ ಸಹ ಮಾಡಬಹುದು ಅಥವಾ ಮನೆ ಒರೆಸುವಾಗ ಈ ಪುಡಿಯನ್ನು ನೀರಿಗೆ ಮಿಕ್ಸ್ ಮಾಡಿಕೊಳ್ಳಬಹುದು. ಇನ್ನೂ ಸಕ್ಕರೆ ಡಬ್ಬಕ್ಕೆ ಇರುವೆಗಳು ಬರಬಾರದು ಎಂದರೆ ಅದಕ್ಕೆ ಒಂದೆರಡು ಲವಂಗವನ್ನು ಹಾಕಿ ಇಡುವುದರಿಂದ ಇರುವೆಗಳು ಸಕ್ಕರೆ ಡಬ್ಬದ ಬಳಿ ಸುಳಿಯುವುದಿಲ್ಲ.