ಕೆಜಿಫ್, ಸಲಾರ್ ಬಳಿಕ ಪ್ರಶಾಂತ್ ನೀಲ್ ರವರ ಚಿತ್ರ ಯಾವ ನಟನ ಜೊತೆ ಗೊತ್ತಾ?? ರೆಕಾರ್ಡ್ಗಳು ಉಡೀಸ್ ಪಕ್ಕ.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕೆಜಿಎಫ್ ನಿರ್ದೇಶಕ ಪ್ರಶಾಂತ ಅವರಿಗೆ ಇದೀಗ ಕೇವಲ ಕನ್ನಡದಲ್ಲಷ್ಟೇ ಅಲ್ಲದೆ ಇತರ ಭಾಷೆಗಳಲ್ಲಿಯೂ ಕೂಡ ಬೇಡಿಕೆ ಹೆಚ್ಚಾಗಿದೆ, ಅದೇ ಕಾರಣಕ್ಕಾಗಿ ಕೆಜಿಎಫ್ ಚಿತ್ರದ ನಂತರ ಸ್ವತಹ ಪ್ರಭಾಸ್ ರವರು ಪ್ರಶಾಂತ್ ನೀಲ್ ರವರ ಜೊತೆ ಸಿನಿಮಾ ಮಾಡಲು ಒಪ್ಪಿ ಕೊಂಡಿದ್ದಾರೆ, ಇನ್ನು ದಕ್ಷಿಣ ಭಾರತದ ಖ್ಯಾತ ನಟರಾಗಿರುವ ಅಲ್ಲು ಅರ್ಜುನ್ ರವರು ಕೂಡ ಇತ್ತೀಚೆಗೆ ಪ್ರಶಾಂತ್ ನೀಲ್ ರವರ ಕದ ತಟ್ಟಿದ್ದಾರೆ.

ಅಷ್ಟೇ ಅಲ್ಲಾ ತೆಲುಗು ಚಿತ್ರರಂಗದ ಖ್ಯಾತ ನಟರಾಗಿರುವ ಎನ್ಟಿಆರ್ ಅವರು ಕೂಡ ಪ್ರಶಾಂತ್ ನೀಲ್ ರವರ ಜೊತೆ ಸಿನಿಮಾ ಮಾಡಲು ತುದಿಗಾಲಲ್ಲಿ ಕಾದು ನಿಂತಿದ್ದಾರೆ, ಇಂತಹ ಸಂದರ್ಭದಲ್ಲಿ ಇದೀಗ ಪ್ರಶಾಂತ್ ನೀಲ್ ರವರ ಸಲರ್ ಸಿನಿಮಾದ ಬಳಿಕ ಮುಂದಿನ ಚಿತ್ರ ಯಾರ ಜೊತೆ ಎಂಬುದರ ಕುರಿತು ಭಾರೀ ಚರ್ಚೆ ನಡೆಯುತ್ತಿದೆ.

ಇಂತಹ ಸಂದರ್ಭದಲ್ಲಿ ಮತ್ತೊಂದು ಸುದ್ದಿ ಕೇಳಿ ಬಂದಿದ್ದು, ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ನಟರಾಗಿರುವ ದಳಪತಿ ಎಂದೇ ಖ್ಯಾತಿ ಪಡೆದು ಕೊಂಡಿರುವ ವಿಜಯ್ ಜೋಸೆಫ್ ಅವರ ಜೊತೆ ಪ್ರಶಾಂತ್ ನೀಲ್ ಅವರು ಸಿನಿಮಾ ಮಾಡುತ್ತಾರೆ ಎಂಬ ಮಾಹಿತಿ ಸಿಕ್ಕಿದೆ, ಈ ಸಿನಿಮಾಗೆ ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕರಾಗಿರುವ ದಿಲ್ ರಾಜುರವರು ಬಂಡವಾಳ ಹೂಡಲಿದ್ದಾರೆ ಈಗಾಗಲೇ ಮಾತುಕತೆ ಮುಗಿದಿದ್ದು ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ ಎಂಬುದು ತಿಳಿದು ಬಂದಿದೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.