ಎಂಗೇಜ್ಮೆಂಟ್ ಆಯಿತು, ಕವಿತಾ-ಚಂದನ್ ರವರ ಮದುವೆ ದಿನಾಂಕ ಯಾವುದು ಗೊತ್ತಾ??

ನಮಸ್ಕಾರ ಸ್ನೇಹಿತರೇ ಲಕ್ಷ್ಮೀ ಬಾರಮ್ಮ ಧಾರವಾಹಿ ಮೂಲಕ ಖ್ಯಾತಿಯನ್ನು ಪಡೆದು ಕೊಂಡ ಚಿನ್ನು ಪಾತ್ರದಾರಿ ಕವಿತಾ ಹಾಗೂ ಚಂದನ್ ರವರು ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಎಂಗೇಜ್ಮೆಂಟ್ ಮಾಡಿ ಕೊಂಡಿದ್ದಾರೆ, ಇವರು ಇಂದು ಎಂಗೇಜ್ಮೆಂಟ್ ಎಂದು ಹೇಳದೇ ಕೇವಲ ನಾವು ಒಂದಾಗುತ್ತಿದ್ದೇವೆ ಎಂದು ಪೋಸ್ಟ್ ಮಾಡಿದ ಕಾರಣ ಎಲ್ಲರೂ ಇವತ್ತು ಮದುವೆ ಎಂದು ಕೊಂಡಿದ್ದರು.

ಆದರೆ ಇಂದು ಕೇವಲ ಎಂಗೇಜ್ಮೆಂಟ್ ಮಾತ್ರ ನಡೆದಿದೆ, ಈ ಮೂಲಕ ಚಂದನ್ ರವರ ಬಾಳಿನಲ್ಲಿ ಕವಿತ ಗೌಡ ರವರು ಲಕ್ಷ್ಮಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಕೊನೆಗೂ ಸಾಕಷ್ಟು ವರ್ಷಗಳಿಂದ ಕಾದಿದ್ದ ಅಭಿಮಾನಿಗಳಿಗೆ ಈ ಜೋಡಿ ಸಿಹಿ ಸುದ್ದಿ ನೀಡಿದೆ. ಹಲವಾರು ವರ್ಷಗಳಿಂದ ಸ್ನೇಹಿತರು ಎಂದು ಹೇಳಿ ಕೊಳ್ಳುತ್ತಿದ್ದ ಈ ಜೋಡಿ ಕೊನೆಗೂ ಮದುವೆಯಾಗುವ ಕ್ಷಣಗಳು ಹತ್ತಿರ ಬಂದಿದೆ.

ಇಂದು ಅದ್ದೂರಿಯಾಗಿ ನಡೆದ ನಿಶ್ಚಿತಾರ್ಥ ಸಮಾರಂಭದಲ್ಲಿ ಉಂಗುರಗಳನ್ನು ಬದಲಾಯಿಸಿ ಕೊಂಡಿರುವ ಈ ಜೋಡಿ ಮದುವೆಗೆ ಕೂಡ ದಿನಾಂಕ ನಿಗದಿ ಮಾಡಿದಂತೆ ಕಾಣುತ್ತಿದೆ, ಆದರೆ ಎಲ್ಲಿಯೂ ಸರಿಯಾದ ದಿನಾಂಕ ಹೇಳದೆ ಈ ಜೋಡಿಯು ಮೇ ತಿಂಗಳಿನಲ್ಲಿ ಮದುವೆ ಯಾಗುತ್ತೇವೆ ಎಂಬುದನ್ನು ಮಾತ್ರ ಖಚಿತ ಪಡಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಒಟ್ಟಿನಲ್ಲಿ ಮುಂದಿನ ತಿಂಗಳಲ್ಲಿ ಈ ಜೋಡಿ ಸಪ್ತಪದಿ ತುಳಿಯುವುದು ಖಚಿತ. ಈ ಜೋಡಿಗಳಿಗೆ ಶುಭವಾಗಲಿ ಎಂದು ನಮ್ಮ ತಂಡದ ಪರವಾಗಿ ಶುಭ ಹಾರೈಸುತ್ತೇವೆ.