ನಿಶ್ಚಿತಾರ್ಥದ ಬೆನ್ನೆಲ್ಲೆ ಸಿಹಿಸುದ್ದಿ ಹಂಚಿಕೊಂಡ ಚಂದನ್ ಹಾಗೂ ಕವಿತಾ ಗೌಡ ಜೋಡಿ ! ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಕಿರುತೆರೆಯ ಖ್ಯಾತ ಜೋಡಿಗಳಲ್ಲಿ ಒಂದಾಗಿದ್ದ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಜೋಡಿ ಚಂದನ್ ಹಾಗೂ ಕವಿತಾ ಗೌಡ ರವರು ಇದೀಗ ನಿಶ್ಚಿತಾರ್ಥ ಮಾಡಿಕೊಂಡು ಕೊನೆಗೂ ಹಲವಾರು ವರ್ಷಗಳ ಪ್ರೀತಿಗೆ ಮದುವೆಯೆಂಬ ಎಂಬ ಗಂಟನ್ನು ಹಾಕಲು ತಯಾರಾಗಿದ್ದಾರೆ. ಕುಟುಂಬದ ಆಪ್ತರ ಜೊತೆ ನಡೆದ ನಿಶ್ಚಿತಾರ್ಥ ಸಮಾರಂಭದಲ್ಲಿ ಉಂಗುರಗಳನ್ನು ಬದಲಾಯಿಸಿಕೊಂಡಿರುವ ಜೋಡಿ ತಮ್ಮ ನಿಶ್ಚಿತಾರ್ಥಕ್ಕೆ ಕೆಲವೇ ಕೆಲವು ಸೆಲೆಬ್ರಿಟಿಗಳನ್ನು ಮಾತ್ರ ಆಹ್ವಾನ ಮಾಡಿದ್ದರು.

ಇನ್ನು ಈ ಮೂಲಕ ಅಧಿಕೃತವಾಗಿ ಹಲವಾರು ವರ್ಷಗಳ ಪ್ರೀತಿಗೆ ಮದುವೆ ಎಂಬ ಮುದ್ರೆ ಒತ್ತಿದ್ದಾರೆ, ಹಲವಾರು ವರ್ಷಗಳಿಂದ ಒಟ್ಟಿಗೆ ಕಾಣಿಸಿಕೊಂಡರೂ ಕೂಡ ಎಲ್ಲಿಯೂ ನಾವು ಪ್ರೀತಿಸುತ್ತಿದ್ದೇವೆ ಎಂದು ಹೇಳದೆ ಕೇವಲ ನಾವಿಬ್ಬರೂ ಸ್ನೇಹಿತರು ಎಂದು ಜೋಡಿ ಓಡಾಡಿಕೊಂಡಿತ್ತು, ಆದರೆ ಯಾರು ಈ ಮಾತನ್ನು ನಂಬಿರಲಿಲ್ಲ.

ಇನ್ನು ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡ ಎರಡೇ ಎರಡು ದಿನಗಳಲ್ಲಿ ಸಿಹಿ ಸುದ್ದಿಯನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ, ಹೌದು ಸ್ನೇಹಿತರೇ ಕುಟುಂಬದ ಕೆಲವು ಮೂಲಗಳಿಂದ ತಿಳಿದು ಬಂದರೂ ಕೂಡ ನಿಶ್ಚಿತಾರ್ಥ ಮುಗಿದ ಮೇಲೆ ನಾಲ್ಕೈದು ತಿಂಗಳಾದ ಮೇಲೆ ಮದುವೆಯಾಗುತ್ತಾರೆ ಎಂಬ ಸುದ್ದಿ ಕೇಳಿ ಬಂದಿತ್ತು ಆದರೆ ಇದೀಗ ಮೇ 13 ಹಾಗೂ 14ರಂದು ಮದುವೆಯಾಗುತ್ತೇವೆ ಎಂಬುದನ್ನು ಖಚಿತ ಪಡಿಸಿದ್ದಾರೆ, ಬೆಂಗಳೂರಿನಲ್ಲಿ ಇವರಿಬ್ಬರ ವಿವಾಹ ನಡೆಯಲಿದ್ದು ಎರಡೂ ಕುಟುಂಬದವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿಸಿದ್ದಾರೆ.