ಮಗುವನ್ನು ಕಾಪಾಡಿದ್ದಕ್ಕಾಗಿ ಬಂದ ಬಹುಮಾನದ ಹಣವನ್ನು ರೈಲ್ವೆ ಉದ್ಯೋಗಿ ಮಾಡಿದ್ದೇನು ಎಂದು ತಿಳಿದರೆ ಎದ್ದು ನಿಂತು ಸಲ್ಯೂಟ್ ಮಾಡುತ್ತೀರಾ.

ನಮಸ್ಕಾರ ಸ್ನೇಹಿತರೇ ರೈಲ್ವೆ ನಿಲ್ದಾಣದಲ್ಲಿ ಕ್ಷಣ ಮಾತ್ರದಲ್ಲಿ ತಡವಾಗಿದ್ದರೂ ಕೂಡ ನಡೆಯ ಬಾರದ ಘಟನೆ ನಡೆಯುತ್ತಿತ್ತು. ಆದರೆ ದೇವರೇ ಸ್ವತಹ ಮಯೂರ್ ಅವರನ್ನು ಕಳುಹಿಸಿದ್ದ ಎಂದು ಕಾಣುತ್ತದೆ. ಯಾಕೆಂದರೆ ರೈಲ್ವೆ ಹಳಿಯ ಮೇಲೆ ಇದ್ದ ಮಗುವನ್ನು ಕ್ಷಣ ಮಾತ್ರದಲ್ಲಿ ಕಾಪಾಡುವ ಮೂಲಕ ಮಯೂರ್ ಎಂಬ ರೈಲ್ವೆ ಉದ್ಯೋಜಿ ಇದೀಗ ಅಕ್ಷರಸಹ ಮಗುವಿನ ಪಾಲಿಗೆ ನಿಜವಾದ ಹೀರೋ ಆಗಿದ್ದಾರೆ. ಇವರ ಈ ಕಾರ್ಯಕ್ಕೆ ದೇಶದ ಎಲ್ಲೆಡೆಯಿಂದ ಪ್ರಶಂಶೆಯ ಸುರಿ ಮಳೆಯಾಗಿದೆ. ದಿಗ್ಗಜರಿಂದ ಹಿಡಿದು ಎಲ್ಲರೂ ಕೂಡ ಗ್ರೇಟ್ ಎನ್ನುತ್ತಿದ್ದಾರೆ.

ತಮ್ಮ ಪ್ರಾಣವನ್ನು ಕೂಡ ಕಿಂಚಿತ್ತೂ ಆಲೋಚನೆ ಮಾಡದೆ ರೈಲು ಬರುತ್ತದೆ ಎಂದು ತಿಳಿದರೂ ಕೂಡ ರೈಲ್ವೆ ಹಳಿಯ ಮೇಲೆ ಸಾಕಷ್ಟು ಮೀಟರ್ಗಳ ಅಂತರವನ್ನು ಚಲಿಸಿ ರೈಲು ಬರುವ ಸ್ವಲ್ಪ ದೂರದಲ್ಲಿಯೇ ಮಗುವನ್ನು ಪ್ಲಾಟ್ಫಾರ್ಮ್ ಮೇಲೆ ಹತ್ತಿಸಿ ತಾವು ಕೂಡ ದೇವರ ದಯೆಯಿಂದ ಮತ್ತೆ ಪ್ಲಾಟ್ಫಾರ್ಮ್ ಮೇಲೆ ಹತ್ತಿದ್ದಾರೆ.

ಈ ವಿಡಿಯೋ ಬಹುಶಹ ನೀವೆಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುತ್ತೀರಾ ಆದರೆ ಇದೀಗ ಮತ್ತೊಮ್ಮೆ ಮಯೂರ್ ಅವರು ಎಲ್ಲರ ಮನ ಗೆದ್ದಿದ್ದಾರೆ, ಹೌದು ಸ್ನೇಹಿತರೇ ಇವರ ಈ ಮಹಾನ್ ಕಾರ್ಯಕ್ಕಾಗಿ ವಿಶೇಷವಾದ ಗೌರವ ಸಲ್ಲಿಸಲು ಮುಂದಾದ ರೈಲ್ವೆ ಇಲಾಖೆಯು 50 ಸಾವಿರ ರೂಪಾಯಿಗಳನ್ನು ಮಯೂರ್ ರವರಿಗೆ ಬಹುಮಾನವಾಗಿ ಘೋಷಣೆ ಮಾಡಿತ್ತು. ಜೊತೆಗೆ ಜಾವಾ ಬೈಕ್ ಅನ್ನು ಕೂಡ ಜಾವಾ ಸಂಸ್ಥೆ ನೀಡುತ್ತಿದೆ. ಆದರೆ ಇದೀಗ ಮತ್ತೊಮ್ಮೆ ಮಾನವೀಯತೆ ಮೆರೆದಿರುವ ಮಯೂರ್ ರವರ ಮಗುವಿನ ಕುರಿತು ತಿಳಿದಾಗ ಮನೆಯಲ್ಲಿ ಬಡತನ ಇದೆ ಎಂಬ ಕಾರಣಕ್ಕೆ ಆ ಮಗುವಿನ ಶಿಕ್ಷಣಕ್ಕಾಗಿ 25 ಸಾವಿರ ರೂಪಾಯಿಗಳನ್ನು ನೀಡುವ ಮೂಲಕ ಮಯೂರ್ ರವರು ಮತ್ತೊಮ್ಮೆ ದೇಶದ ಎಲ್ಲರ ಮನಗೆದ್ದಿದ್ದಾರೆ.