ಐಪಿಎಲ್ ನಂತರ ಬಿಗ್ ಬಾಸ್ ಗೆ ಕೂಡ ಶಾಕ್ ನೀಡುತ್ತಿದೆ ಕೊರೊನ. ನಡೆಯುತ್ತಿರುವುದಾದರೂ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇಂದು ಇಡೀ ದೇಶವೇ ಮನೆಯಲ್ಲಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ, ಎಲ್ಲಿ ನೋಡಿದರೂ ಕೊರೊನ ಕೊರೊನ. ಇಂತಹ ಸಮಯದಲ್ಲಿ ನಮಗೆ ಟಿವಿ ಯು ಬಹುಮುಖ್ಯ ಪಾತ್ರ ವಹಿಸುತ್ತದೆ, ಯಾಕೆಂದರೆ ಮನೆಯಲ್ಲಿಯೇ ಕೂತು ಹೊರಗಿನ ಪ್ರಪಂಚ ಮರೆಯಲು ನಮಗೆ ಮನರಂಜನೆ ಅತ್ಯಗತ್ಯ. ಹೀಗಿರುವಾಗ ನಮಗೆ ಪ್ರತಿ ದಿನವೂ ಮನರಂಜನೆ ನೀಡುತ್ತಿದ್ದ ಐಪಿಎಲ್ ಟೂರ್ನಿಯು ಇದೀಗ ಕೊರೊನ ಕಾರಣದಿಂದ ನಿಂತು ಹೋಗಿದೆ, ಸಂಪೂರ್ಣವಾಗಿ ನಿಂತು ಹೋಗದೆ ಇದ್ದರೂ ಖಂಡಿತಾ ಸದ್ಯಕ್ಕಂತೂ ನಡೆಯುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ.

ಹೀಗಿರುವಾಗ ನಮಗೆ ಧಾರವಾಹಿ ಹಾಗೂ ಬಿಗ್ಬೋಸ್ ಪ್ರಮುಖ ಪಾತ್ರವನ್ನು ವಹಿಸುತ್ತದೆ, ಸಂಜೆ ಆದರೆ ನಮಗೆ ಮನರಂಜನೆ ನೀಡುವುವು ಇವು ಮಾತ್ರ. ಆದರೆ ಕೊರೊನ ಹೀಗೆ ಮುಂದುವರೆದರೆ ಖಂಡಿತಾ ಧಾರಾವಾಹಿಗಳ ಚಿತ್ರೀಕರಣ ನಡೆಯಲು ಸಾಧ್ಯವೇ ಇಲ್ಲ. ಆದ ಕಾರಣ ನಮ್ಮ ಸಂಜೆಯ ಮನರಂಜನೆ ಬಹುತೇಕ ಬಿಗ್ ಬಾಸ್ ಕಾರ್ಯಕ್ರಮದ ಮೇಲೆ ನಿಂತಿದೆ ಎಂದರೆ ತಪ್ಪಗಾಲಾರದು. ಅದು ನಾಲ್ಕು ಗೋಡೆಗಳ ನಡುವೆ ನಡೆಯುವ ಕಾರ್ಯಕ್ರಮವಾಗಿರುವ ಕಾರಣ ಕಾರ್ಯ ಕ್ರಮ ನಿಲ್ಲಲ್ಲು ಸಾಧ್ಯವೇ ಇಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು.

ಆದರೆ ಇದೆ ಸಮಯದಲ್ಲಿ ಬಿಗ್ ಬಾಸ್ ಮನೆಗೆ ಕೂಡ ಶಾಕ್ ನೀಡುವತ್ತ ಕೊರೊನ ಹೆಜ್ಜೆ ಹಾಕಿದೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಯಾವುದೇ ಚಿತ್ರೀಕರಣ ನಡೆಯಲು ಸಾಧ್ಯವಿಲ್ಲದ ಸಮಯದಲ್ಲಿ ಕಿಚ್ಚ ಸುದೀಪ್ ರವರು ತೆರಳಿ ಕಾರ್ಯಕ್ರಮ ನಡೆಸುವುದು ಅಸಾಧ್ಯದ ಮಾತು. ಹಾಗೂ ಅದೇ ಸಮಯದಲ್ಲಿ ಬಿಗ್ ಬಾಸ್ ಮನೆಯ ಒಳಗಡೆ ನಡೆಯುವುದು ಮಾತ್ರ ಅಲ್ಲ ಈ ಎಲ್ಲ ಕಾರ್ಯಕ್ರಮವನ್ನು ಆಯೋಜಿಸುವುದರ ಹಿಂದೆ ಒಂದು ದೊಡ್ಡ ತಂಡವೇ ಇರುತ್ತದೆ ಆದ ಕಾರಣ ನೂರಾರು ಮಂದಿ ದಿನವೂ ವಾಹಿನಿ ಸ್ಟುಡಿಯೋ ಗಳಿಗೆ ಭೇಟಿ ನೀಡಬೇಕಾಗುತ್ತದೆ ಆದರೆ ಇದೀಗ ಅದು ಕೂಡ ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗೆ ಮುಂದು ವರೆದರೆ ಕಾರ್ಯಕ್ರಮ ಅರ್ಧಕ್ಕೆ ನಿಲ್ಲಿಸಬೇಕಾಗುತ್ತದೆ. ಒಂದು ವೇಳೆ ಅದೇ ನಡೆದಲ್ಲಿ ನಿಜಕ್ಕೂ ನಮಗೆಲ್ಲರಿಗೂ ಮನೆಯಲ್ಲಿ ಕೂರಲು ಕಷ್ಟಸಾಧ್ಯ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.