ಕೊರೊನ ಇಂದ ಇಹಲೋಕ ತ್ಯಜಿಸಿದ ಐಪಿಎಲ್ ನಲ್ಲಿ ಡೆಲ್ಲಿ ತಂಡದ ಸ್ಟಾರ್ ಆಟಗಾರ. ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಈ ಕೊರೊನ ಬಡವರನ್ನು ಅಷ್ಟೇ ಅಲ್ಲ ಯಾರನ್ನು ಕೂಡ ಬಿಡುತ್ತಿಲ್ಲ, ಎಷ್ಟೇ ಹಣ ವಿದ್ದರೇನು ಕೊರೊನ ಬಂದರೆ ಆಸ್ಪತ್ರೆಗೆ ಹೋದರೆ ವಾಪಸ್ಸು ಬರುತ್ತಾರೆ ಎನ್ನುವ ನಂಬಿಕೆ ಕಡಿಮೆ, ಶೇಕಡಾ ನೂರರಲ್ಲಿ 99 ಜನ ಗುಣಮುಖರಾಗಿ ವಾಪಸ್ಸು ಬರುತ್ತಾರೆ, ಆದರೆ ಆ ಉಳಿದ ಒಬ್ಬರು ಯಾರು ಎಂಬುದನ್ನು ಹೇಳಲು ಸಾಧ್ಯವಾಗುವುದಿಲ್ಲ, ಶ್ರೀಮಂತನಾಗಿರಲಿ ಬಡವನಾಗಿರಲಿ, ಸೆಲೆಬ್ರೆಟಿಯಾಗಿರಲಿ ಯಾರೇ ಆಗಲಿ ಕೊಂಚ ಯಾಮಾರಿದರೂ ಉಳಿಸುವುದು ಕಷ್ಟ.

ಈಗಾಗಲೇ ದೇಶದಲ್ಲಿ ಹಲವಾರು ಸೆಲೆಬ್ರೆಟಿಗಳು ಸೇರಿದಂತೆ ದಿಗ್ಗಜರನ್ನು ಕೂಡ ಈ ಕೊರೊನ ಇಹಲೋಕ ತ್ಯಜಿಸುವಂತೆ ಮಾಡಿದೆ, ಹೀಗಿರುವಾಗ ಇದೀಗ ವಿಶ್ವದ ಪ್ರತಿಷ್ಠಿತ ಐಪಿಎಲ್ ತುಣಿಯಲ್ಲಿ ಭಾಗವಹಿಸಿದ ಆಟಗಾರರೊಬ್ಬರು ಇಹಲೋಕ ತ್ಯಜಿಸಿದ್ದಾರೆ. ಇವರು ಕ್ರಿಕೆಟ್ ನಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ಹೌದು ಸ್ನೇಹಿತರೇ, ಇದೀಗ ಡೆಲ್ಲಿ ಐಪಿಎಲ್ ತಂಡದ ಮಾಜಿ ಆಟಗಾರ ಹಾಗೂ ರಾಜಸ್ಥಾನ ರಾಜ್ಯದ ರಣಜಿ ಆಟಗಾರ ವಿವೇಕ್ ಯಾದವ್ ರವರು, ತಮ್ಮ ಕ್ಯಾನ್ಸರ್ ಮೂಲದ ತೆರಪಿ ಪಡೆಯಲು ಆಸ್ಪತ್ರೆಗೆ ತೆರಳಿದಾಗ ಕೊರೊನ ಇರುವುದು ದೃಢ ಪಟ್ಟಿದೆ, ಕೂಡ ಎಚ್ಚೆತ್ತುಕೊಂಡು ಚಿಕಿತ್ಸೆ ಪಡೆದುಕೊಂಡರು ಕೂಡ ಹಾಗೂ ಹೆಚ್ಚಿನ ಅನುಕೂಲತೆಗಾಗಿ ಜೈಪುರದ ಆಸ್ಪತ್ರೆಗೆ ಕರೆದುಕೊಂಡು ಹೋದರು ಕೂಡ ವಿಧಿಯಾಟದಂತೆ ವಿವೇಕ್ ಯಾದವ್ ರವರು, ಇಹಲೋಕ ತ್ಯಜಿಸಿದ್ದಾರೆ. ಪ್ರಥಮ ದರ್ಜೆಯ ಕ್ರಿಕೆಟ್ ನಲ್ಲಿ 57 ವಿಕೆಟ್ ಗಳಿಸಿರುವ ಇವರು ರಣಜಿ ಫೈನಲ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲ ಡೆಲ್ಲಿ ಐಪಿಎಲ್ ತಂಡದಲ್ಲಿಯೂ ಕೂಡ ಸ್ಥಾನ ಪಡೆದಿದ್ದರು.