ಬಿಗ್ ಬಾಸ್ ನಿಂತು ಹೋಗಲು ಅಸಲಿ ಕಾರಣವೇ ಬೇರೆ ! ಕೊರೊನ ಲಾಕ್ ಡೌನ್ ಅಂದು ಕೊಂಡಿರಾ?? ಅಲ್ಲವೇ ಅಲ್ಲ.

ನಮಸ್ಕಾರ ಸ್ನೇಹಿತರೇ, ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಹಾಗೂ ಪ್ರಖ್ಯಾತ ಟಾಪ್ ರಿಯಾಲಿಟಿ ಶೋ ಇದೀಗ ನೂರು ದಿನಗಳನ್ನು ಪೂರೈಸಲು ಸಾಧ್ಯವಾಗಿಲ್ಲ. ಬಿಗ್ ಬಾಸ್ ಕಾರ್ಯಕ್ರಮದ ಇತಿಹಾಸದಲ್ಲಿಯೇ ಇದು ಮೊದಲು. ಹೀಗೆ ನಡೆಯುತ್ತದೆ ಎಂದು ಯಾರು ಊಹೆ ಮಾಡಲು ಸಾಧ್ಯವೇ ಇರಲಿಲ್ಲ. ಯಾಕೆಂದರೆ ಯಾವುದೇ ಸಮಯದಲ್ಲಿಯೂ ಕೂಡ ಈ ರೀತಿಯ ಘಟನೆಗಳು ನಡೆದಿಲ್ಲ.

ಇದೇ ಮೊಟ್ಟ ಮೊದಲ ಬಾರಿಗೆ ಈ ರೀತಿ ನಡೆದಿರುವ ಕಾರಣ ಪ್ರೇಕ್ಷಕರಿಗೆ ಕೂಡ ಬಾರಿ ನಿರಾಸೆಯಾಗಿದೆ. ಮನೆಯಲ್ಲಿ ಇದ್ದಾಗ ಮನರಂಜನೆ ನೀಡುತ್ತಿದ್ದ ಒಂದೇ ಒಂದು ಕಾರ್ಯಕ್ರಮವು ಕೂಡ ಇದೀಗ ನಿಂತು ಹೋಗಿದೆ. ಹೀಗಿರುವಾಗ ಎಲ್ಲರೂ ಕೋರೋಣ ಇಂದ ಹಾಗೂ ಲಾಕ್ ಡೌನ್ ಸಮಯದಲ್ಲಿ ಶೋ ನಡೆಸಲು ಸಾಧ್ಯವಿಲ್ಲ, ಎಂದು ಎಲ್ಲರೂ ಅಂದುಕೊಂಡಿದ್ದಾರೆ, ಹಾಗೂ ಎಲ್ಲ ಸಿಬ್ಬಂದಿಗಳನ್ನು ಒಂದೆಡೆ ಸೇರಿಸಿಸಲು ಅನುಮತಿ ಇಲ್ಲ ಎಂಬ ಕಾರಣಕ್ಕೆ ಈ ನಿರ್ಧಾರವಾಗಿರಬಹುದು ಎಂದು ಕೊಂಡಿದ್ದಾರೆ.

ಆದರೆ ಇದ್ಯಾವುದು ಬಿಗ್ ಬಾಸ್ ಕಾರ್ಯಕ್ರಮ ನಿಲ್ಲಿಸಲು ಸಾಧ್ಯವಿಲ್ಲ. ಹೌದು ಸ್ನೇಹಿತರೇ, ಈಗಾಗಲೇ ಮನೆಯಲ್ಲಿ ಎಲ್ಲ ಕ್ಯಾಮೆರಾಗಳು ಸಿದ್ಧತೆಗೊಂಡಿರುವ ಕಾರಣ ಮನೆಯಲ್ಲಿಯೇ ಬಹತೇಕ ಸಿಬ್ಬಂದಿ ಕೆಲಸ ಮಾಡಬಹುದಾಗಿತ್ತು, ಇದು ಮಾಡುವುದು ದೊಡ್ಡ ವಿಷಯವೇನಲ್ಲ. ಆದರೆ ಕಾರ್ಯಕ್ರಮ ನಿಲ್ಲಿಸಲು ಬೇರೆ ಕಾರಣವೇ ಇದೇ. ಹೌದು ಸ್ನೇಹಿತರೇ, ಮೊದಲನೆಯದಾಗಿ ಕುಟುಂಬದ ಜೊತೆ ಈ ದಿನಗಳನ್ನು ಸ್ಪರ್ದಿಗಳು ಕಳೆಯಲಿ ಎಂಬುದು ಹಾಗೂ ಪ್ರಮುಖವಾಗಿ ರಾಜ್ಯ ಚಲನಚಿತ್ರ ಮಂಡಳಿಯು ಇನ್ನು 15 ದಿನಗಳ ಕಾಲ ಯಾವುದೇ ಚಿತ್ರೀಕರಣ ಮಾಡುವಂತಿಲ್ಲ ಎಂಬ ಆದೇಶವೇ ಬಿಗ್ ಬಾಸ್ ನಿಲ್ಲಲು ಕಾರಣ ಎಂಬ ಮಾಹಿತಿ ತಿಳಿದು ಬಂದಿದೆ.