ಟಾಪ್ ನಟಿಯಾಗಿ, ಅದ್ಬುತ ನಟನೆಯ ಮೂಲಕ ಮಿಂಚುತ್ತಿರುವ ನನ್ನರಸಿ ರಾಧೆ ಇಂಚರ ರವರು ಎಷ್ಟು ಚಿಕ್ಕ ವಯಸ್ಸಿನವರು ಗೊತ್ತೇ??

ನಮಸ್ಕಾರ ಸ್ನೇಹಿತರೇ ನನ್ನರಸಿ ರಾಧೆ ಸದ್ಯ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಧಾರವಾಹಿ. ಈ ಧಾರವಾಹಿಯ ಇಂಚರಾಳ ಪಾತ್ರ ಬಹಳ ಜನಪ್ರಿಯವಾಗಿದೆ. ಧಾರವಾಹಿ ಪ್ರಸಾರಕ್ಕಿಂತ ಮುಂಚೆ ಬಿಟ್ಟ ಟ್ರೈಲರ್ ನಲ್ಲಿ ನಂದು ಎಲ್ಲಾ ವಿಷಯದಲ್ಲಿಯೂ ಫೇಲ್ ಎಂಬ ಇಂಚರಾಳ ಡೈಲಾಗ್ ಆಗ ಸಿಕ್ಕಾಪಟ್ಟೆ ಟ್ರೋಲಾಗಿತ್ತು. ಇದು ಪರೋಕ್ಷವಾಗಿ ಧಾರವಾಹಿ ಉಚಿತ ರೀತಿಯಲ್ಲಿ ಪ್ರಮೋಷನ್ ಆಗಿತ್ತು.

ಅಂದ ಹಾಗೆ ಇಂಚರಾ ಪಾತ್ರಧಾರಿಯ ನಿಜವಾದ ಹೆಸರು ಕೌಸ್ತುಭಾ ಮಣಿ ಎಂದು. ಈ ನಟಿ ಫೇಸ್ ಬುಕ್ ಹಾಗೂ ತಮ್ಮ ಇನ್ಸ್ಟಾ ಖಾತೆಯಲ್ಲಿ ಸದಾ ಕಾಲ ಆಕ್ಟಿವ್ ಆಗಿರುತ್ತಾರೆ. ಅಭಿಮಾನಿಗಳಿಗಾಗಿ ಹೊಸ ಹೊಸ ರೀಲ್ಸ್ ಗಳನ್ನ ಪೋಸ್ಟ್ ಮಾಡುತ್ತಿರುತ್ತಾರೆ. ಅಂದ ಹಾಗೆ ಕೌಸ್ತುಭಾ ಮಣಿ, ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ. ನಂತರ ಅವರ ಪೋಷಕರು ಬೆಂಗಳೂರಿಗೆ ವಲಸೆ ಬಂದ ಕಾರಣ ಬಾಲ್ಯ ಹಾಗೂ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪೂರೈಸಿದರು.

ಇನ್ನು ಶಿಕ್ಷಣದ ನಂತರ ಬೆಂಗಳೂರಿನ ಖಾಸಗಿ ಕಂಪನಿ ಜೆಪಿ ಮಾರ್ಗನ್ ನಲ್ಲಿ ಕೆಲಸ ಮಾಡುತ್ತಿದ್ದ ಕೌಸ್ತುಭಾ ಅಚಾನಕ್ ಆಗಿ ಆಡಿಷನ್ ಗೆ ಹೋಗುತ್ತಾರೆ. ಅಲ್ಲಿ ಆಶ್ಚರ್ಯಕರ ರೀತಿಯಲ್ಲಿ ಸೀರಿಯಲ್ ನ ಇಂಚರಾ ಪಾತ್ರಕ್ಕೆ ಆಯ್ಕೆಯಾಗುತ್ತಾರೆ. ಅಲ್ಲಿಂದ ಕನ್ನಡ ಕಿರುತೆರೆಯಲ್ಲಿ ಇಂಚರಾ ಆಗಿ ಮಿಂಚುತ್ತಿದ್ದಾರೆ. ಅಂದ ಹಾಗೆ ಕೌಸ್ತುಭಾ ಜನಿಸಿದ್ದು 1999 ರ ಡಿಸೆಂಬರ್ 25 ರಂದು. ಈ ಚಿಕ್ಕ ವಯಸ್ಸಿನಲ್ಲಿಯೇ ಇಷ್ಟೊಂದು ಅಭಿಮಾನಿಗಳನ್ನ ಸಂಪಾದಿಸಿರುವ ಕೌಸ್ತುಭ ಮುಂದಿನ ದಿನಗಳಲ್ಲಿ ಚಲನಚಿತ್ರಗಳಲ್ಲಿಯೂ ಮಿಂಚಲಿ ಎಂಬುದು ಅಭಿಮಾನಿಗಳ ಹಾರೈಕೆ. ಇನ್ನು ಇವರ ನಟನೆಯ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯ ಬೇಡಿ.