ಮತ್ತೆ ಬರುತ್ತಿದೆ ಟಿ.ಎನ್. ಸೀತಾರಾಮನ್ ರವರ ಕನ್ನಡದ ಸಾರ್ವಕಾಲಿಕ ಟಾಪ್ ಧಾರವಾಹಿ. ಎಲ್ಲಿ ಮತ್ತು ಯಾವಾಗ ಗೊತ್ತಾ?

ನಮಸ್ಕಾರ ಸ್ನೇಹಿತರೇ ಚಿತ್ರರಂಗದಲ್ಲಿ ಇದೀಗ ವೆಬ್ ಸಿರೀಸ್ ಹೆಚ್ಚಾಗಿ ಮಹತ್ವವನ್ನು ಪಡೆಯುತ್ತಿದೆ. ಅದು ಈಗಾಗಲೇ ಸಾಕಷ್ಟು ವಿವಿಧ ರೀತಿಯ ವೆಬ್ ಸಿರೀಸ್ ಬಿಡುಗಡೆಯಾಗಿದ್ದು, ಜನರು ಮೆಚ್ಚಿಕೊಂಡಿದ್ದಾರೆ. ಇನ್ನು ಕನ್ನಡದಲ್ಲಿ ಕೂಡ ಸಾಕಷ್ಟು ವೆಬ್ ಸೀರೀಸ್ ಗಳನ್ನು ನಾವು ಕಾಣಬಹುದು. ಕಳೆದ ವರ್ಷದಿಂದ ಕರುನಾ ಹೆಚ್ಚಾಗಿರುವುದರಿಂದ ಸಾಕಷ್ಟು ಚಿತ್ರಮಂದಿರಗಳು ಮುಚ್ಚಿದ್ದವು. ಹೀಗಾಗಿ ಯಾವ ಸಿನಿಮಾಗಳು ಕೂಡ ಬಿಡುಗಡೆಯಾಗಲಿಲ್ಲ.

ಆಗ ವೆಬ್ ಸಿರೀಸ್ ಗಳು ಸಾಕಷ್ಟು ಪ್ರಮಾಣದಲ್ಲಿ ಬಿಡುಗಡೆಯಾದವು. ಜನರು ಕೂಡ ಅವುಗಳನ್ನು ಹೆಚ್ಚಾಗಿ ವೀಕ್ಷಿಸಲು ಪ್ರಾರಂಭಿಸಿದರು. ಆದ್ದರಿಂದ ಇದೀಗ ಚಿತ್ರರಂಗದ ಸಾಕಷ್ಟು ನಟ-ನಟಿಯರು ವೆಬ್ ಸಿರಿಸ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಕನ್ನಡದ ಹಳೆಯ ಧಾರಾವಾಹಿಯೊಂದು ವೆಬ್ ಸಿರಿಸಿ ರೂಪದಲ್ಲಿ ಜನರ ಮುಂದೆ ಬರಲಿದೆ. ಹೌದು ಸುಮಾರು 1998ರಲ್ಲಿ ಪ್ರಸಾರವಾದ ಧಾರವಾಹಿ ಇದೀಗ ವೆಬ್ ಸಿರೀಸ್ ಸ್ವರೂಪ ಪಡೆದು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಲಿದೆ.

ಹೌದು ಸುಮಾರು 1998ರಲ್ಲಿ ದೂರದರ್ಶನದಲ್ಲಿ ಪ್ರಸಾರವಾದ ಧಾರವಾಹಿಯೊಂದು ಸಾಕಷ್ಟು ಮೆಚ್ಚುಗೆಯನ್ನು ಪಡೆದುಕೊಂಡಿತ್ತು. ಅಷ್ಟೇ ಅಲ್ಲದೇ ಅದೇ ಧಾರಾವಾಹಿಯನ್ನು 2014ರಲ್ಲಿ ಜೀ ಕನ್ನಡ ವಾಹಿನಿ ಮರುಪ್ರಸಾರ ಮಾಡಿತ್ತು. ಇದೀಗ ಧಾರವಾಹಿ ವೆಬ್ ಸಿರೀಸ್ ರೂಪದಲ್ಲಿ ಬರಲಿದೆ. ಧಾರವಾಹಿ ಮತ್ಯಾವುದು ಅಲ್ಲ ‘ಮಾಯಾಮೃಗ’. ಹೌದು ಟಿ.ಎನ್. ಸೀತಾರಾಮನ್ ಅವರ ನಿರ್ದೇಶನದಲ್ಲಿ ಮೂಡಿಬಂದ ಮಾಯಾಮೃಗ ಧಾರಾವಾಹಿ ಎರಡು ಬಾರಿ ಕಿರುತೆರೆಯಲ್ಲಿ ಪ್ರಸಾರ ಮಾಡಲಾಗಿತ್ತು.

ಆಗ ಜನರು ಇದನ್ನು ತುಂಬಾ ಮೆಚ್ಚಿಕೊಂಡಿದ್ದು ಇದೀಗ ವೆಬ್ ಸಿರೀಸ್ ರೂಪದಲ್ಲಿ ಮತ್ತೆ ಜನರ ಮುಂದೆ ಕಾಣಿಸಲಿದೆ. ಇನ್ನು ಇದು ಸಾಮಾಜಿಕ ಜಾಲತಾಣ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗುವುದು ಎಂದು ಹೇಳಲಾಗಿದೆ. ಇನ್ನು ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟನ್ನು ಹಂಚಿಕೊಂಡ ನಿರ್ದೇಶಕ ಟಿ.ಎನ್. ಸೀತಾರಾಮನ್ ಅವರು, ಮಾಯಾಮೃಗ ಧಾರಾವಾಹಿ ಕನ್ನಡದ ಶ್ರೇಷ್ಠ ಧಾರವಾಹಿಗಳಲ್ಲಿ ಒಂದಾಗಿದೆ.

ಅದೊಂದು ದಂತಕಥೆ. ಅಂಥ ಧಾರವಾಹಿ ಇನ್ನೊಂದು ವಾರದಲ್ಲಿ ನಿಮ್ಮ ಮುಂದೆ ವೆಬ್ ಸಿರೀಸ್ ರೂಪದಲ್ಲಿ ಬರಲಿದೆ ಎಂದು ಬರೆದುಕೊಂಡಿದ್ದಾರೆ. ಇನ್ನು ಇದು ಭೂಮಿಕಾ ಟಾಕೀಸ್ ಯೂಟ್ಯೂಬ್ ನಲ್ಲಿ ಪ್ರಸಾರವಾಗಲಿದೆ. ಇನ್ನು 1998ರಲ್ಲಿ ಪ್ರಸಾರವಾದ ಈ ಧಾರಾವಾಹಿಯಲ್ಲಿ ಎಚ್.ಜಿ. ದತ್ತಾತ್ರೇಯ, ಮಾಳವಿಕಾ ಅವಿನಾಶ್, ಮಂಜುಭಾಷಿಣಿ, ಎಂ.ಡಿ. ಪಲ್ಲವಿ, ಮುಖ್ಯಮಂತ್ರಿ ಚಂದ್ರು, ವೈಶಾಲಿ ಕಾಸರವಳ್ಳಿ, ಅವಿನಾಶ್, ಜಯಶ್ರೀ, ಲಕ್ಷ್ಮಿ ಚಂದ್ರಶೇಖರ್ ಹೀಗೆ ಮುಂತಾದ ಕಲಾವಿದರು ಹಲವಾರು ಪಾತ್ರಗಳನ್ನು ನಿರ್ವಹಿಸಿದ್ದರು. ಇದೀಗ ವೆಬ್ ಸಿರೀಸ್ ರೂಪ ಪಡೆದಿರುವ ಮಾಯಾಮೃಗ ಧಾರಾವಾಹಿ ಮತ್ತೆ ಜನರನ್ನು ಹೇಗೆ ಆಕರ್ಷಿಸಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.