ಜೊತೆ ಜೊತೆಯಲಿ ಅನು ಸ್ನೇಹಿತೆ ರಮ್ಯ ಪಾತ್ರದಲ್ಲಿರುವ ನಟಿ ನಿಜ ಜೀವನದಲ್ಲಿ ಯಾರು ಗೊತ್ತಾ? ಕೇಳಿದರೆ ಶಾಕ್ ಆಗ್ತೀರಾ.

ನಮಸ್ಕಾರ ಸ್ನೇಹಿತರೇ ಇದೀಗ ಕಿರುತೆರೆಯ ಧಾರವಾಹಿಗಳು ಜನರಿಗೆ ಮನರಂಜನೆ ನೀಡುವುದರಲ್ಲಿ ಸಿನಿಮಾಗಳಷ್ಟೆ ಪ್ರಮುಖ ಪಾತ್ರವನ್ನು ವಹಿಸುತ್ತಿವೆ. ಹೌದು ಇದೀಗ ಕರುನಾ ಕಾರಣದಿಂದಾಗಿ ಲಾಕ್ ಡೌನ್ ಆಗಿದ್ದು ಇದೀಗ ಜನರು ಕಿರುತೆರೆಯ ಕಡೆಗೆ ಮುಖ ಮಾಡಿದ್ದಾರೆ. ಇನ್ನು ಇದೀಗ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಟಾಪ್ ಧಾರಾವಾಹಿ ಎಂದರೆ ಅದು ಜೊತೆ ಜೊತೆಯಲಿ.

ಹೌದು ಈ ಧಾರಾವಾಹಿಯಲ್ಲಿ ನಟ ಅನಿರುದ್ಧ್ ಅವರು ಆರ್ಯವರ್ಧನ್ ಪಾತ್ರದಲ್ಲಿ ಅಭಿನಯಿಸಿದ್ದು, ನಟಿ ಮೇಘ ಶೆಟ್ಟಿ ಅವರು ಅನು ಸಿರಿಮನೆ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೆ ಇದು 40ವರ್ಷದ ಆರ್ಯವರ್ಧನ್ ಹಾಗೂ ಹದಿಹರೆಯದ ಅನು ನಡುವಿನ ಪ್ರೀತಿಯ ಕಥೆಯಾಗಿದೆ. ಹೀಗಾಗಿ ವಿಶೇಷವಾದ ಕಥೆಯುಳ್ಳ ಧಾರಾವಾಹಿಗೆ ಹೆಚ್ಚಿನ ವೀಕ್ಷಕರು ವೀಕ್ಷಣೆ ಮಾಡುತ್ತಿದ್ದಾರೆ. ಇನ್ನು ಈ ಧಾರಾವಾಹಿಯಲ್ಲಿ ಅನುಸಿರಿಮನೆ ಗೆಳತಿಯಾಗಿ ರಮ್ಯಾ ಪಾತ್ರದಲ್ಲಿ ನಟಿಸಿರುವ ನಟಿ ನಿಜ ಜೀವನದಲ್ಲಿ ಯಾರು ಗೊತ್ತಾ? ಹಾಗಿದ್ದರೆ ಇದನ್ನೊಮ್ಮೆ ಓದಿ.

ಇನ್ನು ಈ ಧಾರಾವಾಹಿಯಲ್ಲಿ ಅನು ಹಾಗೂ ಆರ್ಯವರ್ಧನ್ ಪಾತ್ರಗಳಂತೆ ಪುಷ್ಪ, ರಮ್ಯಾ ಹಾಗೂ ಸುಬ್ಬು ಸೇರಿದಂತೆ ಸಾಕಷ್ಟು ಪಾತ್ರಗಳು ಜನರಿಗೆ ಅಚ್ಚುಮೆಚ್ಚಿನ ಪಾತ್ರಗಳಾಗಿವೆ. ಇನ್ನು ಅನು ಸಿರಿಮನೆಯ ಗೆಳತಿಯಾಗಿ ರಮ್ಯಾ ಪಾತ್ರದಲ್ಲಿ ನಟಿಸುತ್ತಿರುವ ನಟಿಯ ಹೆಸರು ಪ್ರಿಯದರ್ಶಿನಿ. ಇನ್ನು ಮೇಘ ಶೆಟ್ಟಿ ಹಾಗೂ ಪ್ರಿಯದರ್ಶಿನಿ ಅವರು ಕೇವಲ ಪರದೆ ಮೇಲೆ ಅಷ್ಟೇ ಅಲ್ಲದೆ ನಿಜ ಜೀವನದಲ್ಲಿ ಕೂಡ ಆಪ್ತ ಸ್ನೇಹಿತೆಯರು. ಇನ್ನು ಇವರಿಬ್ಬರು ಒಟ್ಟಾಗಿ ವಿದ್ಯಾಭ್ಯಾಸ ಮುಗಿಸಿದ ಬಹು ವರ್ಷದಿಂದ ಸ್ನೇಹಿತರಾಗಿದ್ದಾರೆ.

ಇನ್ನು ಧಾರಾವಾಹಿಯಲ್ಲಿ ಕೂಡ ಅವರು ಒಳ್ಳೆಯ ಸ್ನೇಹಿತರ ಪಾತ್ರಗಳಲ್ಲಿ ಅಭಿನಯಿಸಿದರು ಇವರ ಮಾತುಗಳು ಪ್ರೇಕ್ಷಕರಿಗೆ ತುಂಬಾ ಮಜಾ ಕೊಡುತ್ತವೆ. ಅಷ್ಟಲ್ಲದೆ ಇವರಿಬ್ಬರು ಆಗಾಗ ಐಸ್ ಕ್ರೀಮ್ ಪಾರ್ಟಿ ಕೂಡ ಮಾಡುತ್ತಾರಂತೆ. ರಮ್ಯಾ ಪಾತ್ರದಲ್ಲಿ ನಟಿಸುತ್ತಿರುವ ಪ್ರಿಯದರ್ಶಿನಿ ಅವರಿಗೆ ಇದು ಮೊದಲ ಧಾರವಾಹಿ. ಈ ಧಾರಾವಾಹಿಗಿಂತ ಮುಂಚೆ ಅವರು ಎಲ್ಲಿಯೂ ಕೂಡ ನಟಿಸಿಲ್ಲ. ಇದು ಅವರಿಗೆ ನಟನಾ ಕ್ಷೇತ್ರದಲ್ಲಿ ಮೊದಲ ಅನುಭವ.ಇನ್ನು ಇವರು ನಟಿಸಿದ್ದು ಮೊದಲ ಬಾರಿಯಾದರೂ ಕೂಡ ಇವರ ನಟನೆ ಮೆಚ್ಚುವಂತದ್ದು. ಎಷ್ಟು ವರ್ಷಗಳಿಂದ ಅನುಭವ ಇರುವವರ ಹಾಗೆ ಇವರು ಒಂದು ಹವಾಯಿಯಲ್ಲಿ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಹೀಗೆ ಮೇಘ ಶೆಟ್ಟಿ ಹಾಗೂ ಪ್ರಿಯದರ್ಶಿನಿಯವರು ನಿಜಜೀವನದಲ್ಲಿಯೂ ಒಳ್ಳೆಯ ಸ್ನೇಹಿತರು ಹಾಗೂ ಪರದೆ ಮೇಲೆ ಕೂಡ ಒಳ್ಳೆಯ ಸ್ನೇಹಿತರಾಗಿದ್ದಾರೆ. ಇನ್ನು ಇವರ ಮಧ್ಯೆ ಇರುವ ಈ ಆಪ್ತ ಸ್ನೇಹ ಬಾಂಧವ್ಯ ಧಾರಾವಾಹಿಯಲ್ಲಿ ಉತ್ತಮವಾಗಿ ಮೂಡಿಬಂದಿದೆ. ಇನ್ನು ಇವರಿಬ್ಬರು ನಿಜಜೀವನದಲ್ಲಿ ಸ್ನೇಹಿತರಾಗಿರುವ ವಿಚಾರ ಯಾರಿಗೂ ಸಹ ಅಷ್ಟೊಂದು ತಿಳಿದಿಲ್ಲ. ಇನ್ನು ಬಾಲ್ಯದಿಂದಲೂ ಕೂಡ ಉತ್ತಮ ಸ್ನೇಹಿತರಾಗಿ ಒಂದು ಜೋಡಿ ಮುಂದಿನ ದಿನಗಳಲ್ಲಿ ಕೂಡ ಅದೇ ರೀತಿಯ ಬಾಂಧವ್ಯವನ್ನೂ ಬೆಳೆಸಿಕೊಂಡು ಹೋಗಲಿ ಎಂದು ನಾವು ಈ ಮೂಲಕ ಹಾರೈಸೋಣ.