ಮೇಘನಾ ರಾಜ್, ಚಿರು ಸರ್ಜಾ ಮಗುವಿಗೆ ವಿಶೇಷ ಹೆಸರಿಟ್ಟ ಅರ್ಜುನ್ ಸರ್ಜಾ, ಹೆಸರು ಕೇಳಿ ಅಭಿಮಾನಿಗಳು ಫಿದಾ. ಏನಂತೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಸ್ಯಾಂಡಲ್ ವುಡ್ ನ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಸರ್ಜಾ ದಂಪತಿಯ ಮಗುವಿನ ಬಗ್ಗೆ ಎಲ್ಲರಿಗೂ ತಿಳಿದಿದೆ. ಮಗು ಜನಿಸಿದಿ ದಿನದಿಂದ ಹಿಡಿದು ಇಲ್ಲಿಯವರೆಗೂ ಜೂನಿಯರ್ ಚಿರು ಬಗ್ಗೆ ಎಲ್ಲರಿಗೂ ಒಂದು ರೀತಿಯ ಅಕ್ಕರೆ, ಪ್ರೀತಿ ಮಮಕಾರ. ಮುದ್ದು ಮದ್ದಾಗಿ ಗುಂಡನ ತರಹ ಇರುವ ಮಗುವಿನ ಫೋಟೋವನ್ನ ಮೊದಲೆರೆಡು ತಿಂಗಳು ಸಾರ್ವಜನಿಕರಿಗೆ ತೋರಿಸಿರಲಿಲ್ಲ. ಆದರೇ ತಾಯಿ ಮೇಘನಾ ರಾಜ್ ಫೆಬ್ರವರಿ 14 ರಂದು ಜೂನಿಯರ್ ಚಿರುವಿನ ಪುಟ್ಟ ಫೋಟೋಶೂಟ್ ಮಾಡಿಸಿ ಜೂನಿಯರ್ ಚಿರುವಿನ ದರ್ಶನವನ್ನು ಎಲ್ಲರಿಗೂ ಮಾಡಿಸಿದ್ದರು.

ಈ ವೇಳೆ ಜೂನಿಯರ್ ಚಿರುಗೆ ಹೆಸರು ಏನಿಡಬಹುದೆಂದು ಚರ್ಚೆಗಳು ಆರಂಭವಾಗಿದ್ದವು. ಚಿರಂಜೀವಿ ಸರ್ಜಾರ ಮಾವ, ಅರ್ಜುನ್ ಸರ್ಜಾ, ಜೂನಿಯರ್ ಚಿರುವಿಗೋಸ್ಕರ ಬೆಳ್ಳಿಯ ತೊಟ್ಟಿಲೊಂದನ್ನ ಗಿಫ್ಟ್ ಮಾಡಿದ್ದಾರಂತೆ. ಆ ತೊಟ್ಟಿಲಿನಲ್ಲಿಯೇ ಮಲಗಿಸಿ ಜೂನಿಯರ್ ಚಿರುವಿಗೆ ನಾಮಕರಣ ಮಾಡುತ್ತಾರೆಂದು ಹೇಳಲಾಗುತ್ತಿದೆ. ಈ ಮಧ್ಯೆ ತಾತ ಅರ್ಜುನ್ ಸರ್ಜಾ ಜೂನಿಯರ್ ಚಿರುವಿಗೆ ಈಗ ಪುಟ್ಟ ಹೆಸರೊಂದನ್ನ ಸೂಚಿಸಿದ್ದಾರಂತೆ. ಆ ಹೆಸರು ಕೇಳಿ ಮೇಘನಾ ರಾಜ್ ರವರ ಕಣ್ಣಾಲಿಗಳಲ್ಲಿ ಕೊಂಚ ನೀರು ಬಂತಂತೆ‌.

ಅಷ್ಟಕ್ಕೂ ಜೂನಿಯರ್ ಚಿರುಗೆ ಅರ್ಜುನ್ ಸರ್ಜಾ ಸಿಂಬಾ ಎಂಬ ಹೆಸರಿಟ್ಟು ಕರೆದರಂತೆ. ಸಿಂಬ ಎಂಬುದು ಚಿರಂಜೀವಿ ಸರ್ಜಾ ಅಭಿನಯದ ಸಿನಿಮಾವಾಗಿತ್ತು. ಹಾಗೆಯೇ ಮೇಘನಾ ರಾಜ್ ಸಹ ಜೂನಿಯರ್ ಚಿರುಗೆ ಚಿಂಟು ಎಂಬ ಪೆಟ್ ನೇಮ್ ನಿಂದ ಕರೆಯುತ್ತಾರೆ. ಇನ್ನು ಜೂನಿಯರ್ ಚಿರು ಚಿಕ್ಕಪ್ಪ ಧ್ರುವ ಸರ್ಜಾರಂತೂ ಲೇ ಜೂನಿಯರ್ ಎಂದು ಮಗುವನ್ನ ಕರೆದು ಮುದ್ದಿಸುತ್ತಾರಂತೆ.

ಇತ್ತಿಚಿಗಷ್ಟೇ ಜೂನಿಯರ್ ಚಿರು ತನ್ನ ತಂದೆಯ ಫೋಟೋ ನೋಡಿ ಮಾತನಾಡುವ ವಿಡಿಯೋವೊಂದನ್ನು ಮೇಘನಾ ರಾಜ್ ಪೋಸ್ಟ್ ಮಾಡಿದ್ದರು. ಅದು ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಸಹ ಆಗಿತ್ತು. ಕೋರೋನಾ ಕೊಂಚ ಇಳಿಮುಖವಾದ ನಂತರ ಆಗಸ್ಟ್ ನಲ್ಲಿ ಜೂನಿಯರ್ ಚಿರುಗೆ ನಾಮಕರಣ ಸಂಭ್ರಮ ನಡೆಯುವ ಸಾಧ್ಯತೆ ಇದೆ ಎಂದು ಸರ್ಜಾ ಕುಟುಂಬದ ಮೂಲಗಳಿಂದ ಮಾಹಿತಿ ಬಂದಿದೆ. ಜೂನಿಯರ್ ಚಿರುಗೆ ಯಾವ ಹೆಸರು ಇಡಬೇಕೆಂದು ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.