ಶ್ರೀಲಂಕನ್ ಚೆಲುವೆ ಬಾಲಿವುಡ್ ನ ಟಾಪ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಒಟ್ಟು ಆಸ್ತಿ ಎಷ್ಟು ಗೊತ್ತಾ??

ನಮಸ್ಕಾರ ಸ್ನೇಹಿತರೇ ಪ್ರಸ್ತುತ ಬಾಲಿವುಡ್ ನಟಿಯರು , ನಟರಿಗಿಂತಲೂ ಹೆಚ್ಚು ಬ್ಯುಸಿ ಇರುತ್ತಾರೆಂದರೇ ತಪ್ಪಾಗಲಾರದು. ಸಿನಿಮಾ, ಇವೆಂಟ್, ಜಾಹೀರಾತು ಚಿತ್ರೀಕರಣ, ರಿಯಾಲಿಟಿ ಶೋ ಜಡ್ಜ್, ಅವಾರ್ಡ್ ಫಂಕ್ಷನ್ ಗಳು, ಮಾಡೆಲಿಂಗ್, ವೆಬ್ ಸೀರಿಸ್, ಹೊಸ ಮಳಿಗೆಗಳ ಉದ್ಘಾಟನೆ ಹೀಗೆ ವರ್ಷದ ಪೂರ್ತಿ ಕೆಲಸ ಹೊಂದಿರುವವರೆಂದರೇ ಅದು ಸಿನಿಮಾ ನಟಿಯರೇ. ಸದ್ಯ ಬಾಲಿವುಡ್ ನ ಮೋಸ್ಟ್ ಬ್ಯುಸಿ ನಟಿಮಣಿಯರಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಕೂಡ ಒಬ್ಬರು.

ಮೂಲತಃ ಶ್ರೀಲಂಕಾದವರಾದ ಜಾಕ್ವೆಲಿನ್ ಫರ್ನಾಂಡಿಸ್, ತಮ್ಮ ಅಭಿನಯ, ನಗುವಿನಿಂದ ಅಭಿಮಾನಿಗಳಿಗೆ ಎಷ್ಟು ಹತ್ತಿರವಾಗಿದ್ದಾರೆಂದರೇ, ಎಷ್ಟೋ ಜನ ಅವರು ಭಾರತದವರೇ ಎಂದು ತಿಳಿದುಕೊಂಡಿದ್ದಾರೆ.ಲಾಕ್‌ಡೌನ್ ಸಮಯದಲ್ಲಿ, ಜಾಕ್ವೆಲಿನ್ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. YOLO ಎಂಬ ಹೆಸರಿನ ತಮ್ಮದೇ ಫೌಂಡೇಶನ್ ಮೂಲಕ ಹಲವಾರು ಜನರಿಗೆ ಆಹಾರ ಒದಗಿಸುವ ಕೆಲಸ ಮಾಡಿದ್ದಾರೆ.

ಸದ್ಯ ಜಾಕ್ವೆಲಿನ್ ಅವರ ಒಟ್ಟು ಆಸ್ತಿಯನ್ನ ನೀವು ಕೇಳಿದರೇ ಒಂದು ಭಾರಿ ಆಶ್ಚರ್ಯ ಚಕಿತರಾಗಿಬಿಡುತ್ತಿರಿ. ಜಾಕ್ವೆಲಿನ್ ಒಂದು ಸಿನಿಮಾಕ್ಕೆ ಬರೋಬ್ಬರಿ 6 ಕೋಟಿ ಸಂಭಾವನೆ ಪಡೆಯುತ್ತಾರಂತೆ. ಕೇವಲ ಸಿನಿಮಾ ಅಲ್ಲದೇ ಹಲವಾರು ಉತ್ತಮ ಬ್ರಾಂಡ್ ಗಳಾದ ಬಾಡಿ ಶಾಪ್, ಸ್ನ್ಯಾಪ್‌ಡೀಲ್, ವೆಗಾ, ಲೋಟಸ್, ಡ್ರೂಲ್ಸ್, ವ್ಯಾನ್ ಹ್ಯೂಸೆನ್, ಎಚ್‌ಟಿಸಿ ಒನ್ ಮುಂತಾದ ಅನೇಕ ಬ್ರಾಂಡ್ ನ ಬ್ರಾಂಡ್ ಅಂಬಾಸಿಡರ್ ಆಗಿ ಸ್ಪಾನರ್ಸ್ ಸಹ ಹೊಂದಿದ್ದಾರೆ. ಸದ್ಯ ಜಾಕ್ವೆಲಿನ್ ರವರ ಒಟ್ಟು ಆಸ್ತಿ ಸುಮಾರು ಒಂಬತ್ತು ಮಿಲಿಯನ್ ಡಾಲರ್ ಎಂದು ಹೇಳಲಾಗಿದೆ. ಅಂದರೇ ಭಾರತೀಯ ರೂಪಾಯಿಯಲ್ಲಿ 65 ಕೋಟಿ ರೂಪಾಯಿಗಳಂತೆ. ಬಾಲಿವುಡ್ ಗೆ ಪದಾರ್ಪಣೆ ಮಾಡಿ ಕೆಲವೇ ವರ್ಷಗಳಲ್ಲಿ ಬಿಲಿಯನೇರ್ ಆದ ಜಾಕ್ವೆಲಿನ್ ಫರ್ನಾಂಡಿಸ್ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.