ಅಸಲಿಗೆ ಸನ್ ರೈಸರ್ಸ್ ಒಡತಿ ಕಾವ್ಯ ಯಾರು ಗೊತ್ತೇ?? ಇವರ ವಯಸ್ಸೆಷ್ಟು ಗೊತ್ತೇ? ಇಷ್ಟು ಚಿಕ್ಕ ವಯಸ್ಸಿಗೆ ಇವರ ಅಸ್ತಿ ಕೇಳಿದರೇ ಶಾಕ್ ಆಗ್ತೀರಾ.

ನಮಸ್ಕಾರ ಸ್ನೇಹಿತರೇ ಐಪಿಎಲ್ ಪ್ರಾರಂಭವಾದರೆ ಸಾಕು ಕೆಲವೆಡೆ ಕ್ರಿಕೆಟಿಗರ ಸಿಕ್ಸರ್ ಗಳ ಮಳೆಗೆರೆಯೋ ನೋಟ , ಕೆಲವೆಡೆ ಬೌಲರ್ ಗಳ ವಿಕೆಟ್ ಉರುಳಿಸೋ ಆಟ. ಐಪಿಎಲ್ ಎಂದರೆ ಕೇವಲ ಡಿವಿಲಿಯರ್ಸ್ – ಕೊಹ್ಲಿಯ ಆಟವಲ್ಲ, ರಿಶಭ್ ಪಂತ್ – ಧವನ್ ರವರ ಪಾರ್ಟ್ನರ್ ಶಿಪ್ ಅಲ್ಲ, ಧೋನಿ ಯ ಕ್ಯಾಪ್ಟನ್ಸಿಯಲ್ಲ. ಇಲ್ಲಿ ಕ್ಯಾಮೆರಾ ಮ್ಯಾನ್ ಕೂಡ ತಮ್ಮ ಆಟವನ್ನು ಪ್ರದರ್ಶಿಸುತ್ತಾರೆ. ಕ್ಯಾಮೆರಾ ಮ್ಯಾನ್ ತಮ್ಮ ಕ್ಯಾಮೆರಾ ದಲ್ಲಿ ತಮ್ಮ ಕೈಚಳಕದಿಂದ ಸೆರಿಹಿಡಿಯೋ ಎಷ್ಟೋ ಫೋಟೋ ಹಾಗೂ. ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿ ವೈರಲ್ ಆಗಿರೋದು ನೀವು ನೋಡೇ ಇರ್ತೀರಾ.

ಅದರಲ್ಲಿ ಕೂಡ ಮಹಿಳಾ ಮಣಿಯರ ಫೋಟೋ ಕ್ಯಾಪ್ಚರ್ ಮಾಡೋದ್ರಲ್ಲಿ ಕ್ಯಾಮೆರಾ ಮ್ಯಾನ್ ಯಾವ ತಪ್ಪನ್ನು ಮಾಡೋದಿಲ್ಲ. ಕ್ಯಾಮೆರಾ ಮ್ಯಾನ್ ಗೆ ಎಷ್ಟು ಲಾಭವಿದೆಯೋ ಇಲ್ವೋ ಗೊತ್ತಿಲ್ಲ ಆದ್ರೆ ಆತ ತನ್ನ ಕ್ಯಾಮೆರಾ ದಲ್ಲಿ ಸೆರೆ ಹಿಡಿಯೋ ಹುಡುಗಿ ಮಾತ್ರ ರಾತ್ರಿ ಬೆಳಗಾಗೋದ್ರೊಳಗಡೆ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗಿ ಮಿಂಚುತ್ತಿರುತ್ತಾಳೆ. ಇದೇ ಕ್ಯಾಮೆರಾ ಕೈಚಳಕದಿಂದ ಸ್ಟಾರ್ ಆದ ಒಬ್ಬ ಹೆಣ್ಣುಮಗಳ ಬಗ್ಗೆ ಇಂದು ವಿವರಿಸಲಾಗುವುದು. ಹೌದು ನಾವು ಹೇಳ್ತಿರೋದು ಸನ್ ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಕಾವ್ಯ ಮಾರನ್ ಬಗ್ಗೆ.

ಈಕೆಯ ಐಪಿಎಲ್ ನ ಫೋಟೋಸ್ ಈಗಾಗಲೇ ವೈರಲ್ ಆಗಿರೋದು , ಟ್ರಾಲಿಗರು ಇದನ್ನು ಬಳಸಿಕೊಳ್ಳುತ್ತಿರೋದು ಕೂಡ ನಿಮಗೆ ತಿಳಿದಿರುತ್ತೆ. ಐಪಿಎಲ್ ಪಂದ್ಯಾವಳಿಯಲ್ಲಾಗಲೀ , ಐಪಿಎಲ್ ಹರಾಜಿನಲ್ಲಾಗಲಿ ಕಾವ್ಯ ರವರ ಮುಖಭಾವದ ಬದಲಾವಣೆಯನ್ನು ಕ್ಯಾಮೆರಾ ಮಿಸ್ ಮಾಡದೇ ಸೆರೆ ಹಿಡಿದೇ ಹಿಡಿಯುತ್ತಾನೆ. ತಮ್ಮ ತಂಡ ಸೋತಾಗ ಕಾವ್ಯ ಮಾರನ್ ನೀಡೋ ಹತಾಶೆ ಹಾಗೂ ಬೇಸರದ ಮುಖಭಾವ ಹಾಗೂ ಗೆದ್ದಾಗ ಅವರ ಮುಖದಲ್ಲಿ ಉಂಟಾಗೋ ಸಂತಸದ ಅಲೆ ಪ್ರತಿಯೊಂದನ್ನೂ ಕ್ಯಾಮೆರಾ ಮ್ಯಾನ್ ಮಿಸ್ ಮಾಡದೇ ಪ್ರತಿ ಸೀಸನ್ ಚಿತ್ರೀಕರಿಸೋದು ರೂಢಿಯಾಗಿದೆ.

ಸನ್ ರೈಸರ್ಸ್ ತಂಡ ಮೊದಲು ಡೆಕ್ಕನ್ ಚಾರ್ಜರ್ಸ್ ಎಂಬ ಹೆಸರಿನಿಂದ ಪರಿಚಿತವಾಗಿತ್ತು. ಈ ತಂಡವನ್ನು ಕಾವ್ಯ ಮಾರನ್ ಖರೀದಿಸಿ ಇದಕ್ಕೆ ಸನ್ ರೈಸರ್ಸ್ ಹೈದರಾಬಾದ್ ಎಂಬ ಮರು ನಾಮಕರಣವನ್ನು ಕೂಡ ಮಾಡಿದರು. ಕಾವ್ಯ ಮಾರನ್ ಯಾರೆಂದು ತಿಳಿದುಕೊಳ್ಳಲು ನಿಮಗೆ ಕುತೂಹಲ ಇದೆ ಎಂಬುದು ತಿಳಿದಿದೆ. ಕಾವ್ಯ ಮಾರನ್ ದಕ್ಷಿಣ ಭಾರತದಲ್ಲಿ ಅತ್ಯಂತ ಹೆಚ್ಚು ಟಿವಿ ಚಾನಲ್ ಸಮೂಹಗಳ ಒಡೆತನ ಹೊಂದಿರುವ ಸನ್ ನೆಟವರ್ಕ್ ನ ಮಾಲಿಕ ಮುರಸೋಳಿ ಮಾರನ್ ರವರ ಏಕೈಕ ಮುದ್ದಿನ ಮಗಳು.

ಮಾದರಿ ಸ್ವಾವಲಂಬಿ ಮಹಿಳೆಯಾಗುವ ನಿಟ್ಟಿನಲ್ಲಿ ಐಪಿಎಲ್ ನಲ್ಲಿ ಹೈದರಾಬಾದ್ ತಂಡವನ್ನು ಸ್ವಂತವಾಗಿ ಖರೀದಿಸಿ ಈಗಾಗಲೇ ಒಮ್ಮೆ ಕಪ್ ಕೂಡ ಗೆದ್ದಿದ್ದಾಗಿದೆ. ಹೆಣ್ಣು ಸ್ವತಂತ್ರವಾಗಿ ತಾನಂದುಕೊಂಡಿದ್ದನ್ನು ತಾನೇ ಯೋಜಿಸಿ , ತಾನೇ ಯೋಚಿಸಿ ಸಾಧಿಸಬಲ್ಲಳೆಂದು ಕಾವ್ಯ ಮಾರನ್ ರವರನ್ನು ನೋಡಿ ಕಲಿಯಬೇಕು. ಏಕೆಂದರೆ ತಂದೆಯ ಹತ್ತೂವರೆ ಸಾವಿರ ಕೋಟಿ ಆಸ್ತಿ ಇದ್ದರೂ , ತಾನೇ ಸ್ವಪರಿಶ್ರಮದಿಂದ ಉದ್ಯಮ ಪ್ರಾರಂಭಿಸಿ ಈಗ 1200 ಕೋಟಿ ಆಸ್ತಿಯ ಒಡತಿ ಕೂಡ ಹೌದು.

ಇನ್ನು ಇವರ ವಯಸ್ಸಿನ ಬಗ್ಗ ಬರೋದಾದ್ರೆ ಕೇವಲ 27 ವರ್ಷ ವಯಸ್ಸಷ್ಟೇ ಇವರಿಗೆ . ಇಷ್ಟೊಂದು ಚಿಕ್ಕ ವಯಸ್ಸಿನಲ್ಲೇ ಸ್ವತಂತ್ರ ಮಹಿಳೆಯಾಗಿ ಸಾವಿರಾರು ಕೋಟಿ ಆಸ್ತಿಯನ್ನು ಸ್ವಂತ ಬರದಿಂದ ಸಂಪಾದಿಸಿ ಎಲ್ಲರೂ ಇಂತ ಮಗಳು ತಮಗಿರಬಾರದೇ ಎಂಬಂತಹ ಪ್ರಶಂಸೆಯ ಮಾತುಗಳನ್ನು ಪಡೆದಿರುವಾಕೆ ಕಾವ್ಯ ಮಾರನ್ . ಇಂತಹ ಸ್ವಾವಲಂಬಿ ಸ್ವಭಾವವುಳ್ಳ ಹೆಣ್ಣು ಮಗಳು ಪ್ರತಿ ಗ್ರಾಮದಲ್ಲಿದ್ದರೆ ಖಂಡಿತವಾಗಿಯೂ ನಮ್ಮ ದೇಶ ಮುಂದುವರೆಯೋದು ಗ್ಯಾರಂಟಿ. ಕಾವ್ಯ ಮಾರನ್ ರವರ ಈ ಅಪರೂಪದ ಸುದ್ಧಿ ಕೇಳಿ ನಿಮಗೆ ಏನು ಅನ್ನಿಸಿತು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ತಿಳಿಸಿ.