ತಮಗೆ ಇಷ್ಟವಾದ ಗಾಜನೂರು ಮನೆಗೆ ಅಣ್ಣಾವ್ರು ಹೋಗುವುದನ್ನೇ ನಿಲ್ಲಿಸಿಬಿಟ್ಟರು, ಅದಕೆಲ್ಲ ಕಾರಣ ಆ ಒಬ್ಬ ವ್ಯಕ್ತಿ. ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗವನ್ನು ವಿಶ್ವದ ತುತ್ತತುದಿಯಲ್ಲಿ ಕಾಣಿಸುವಂತೆ ಮಾಡಿದ ಹಲವಾರು ನಟರು ನಮಗೆ ಇಂದಿಗೂ ಕೂಡ ನಮ್ಮ ಮನದಲ್ಲಿ ಸದಾ ಸ್ಮರಣೀಯರು. ಆದರೆ ಅವರಲ್ಲಿ ಕೆಲವರು ಸದಾ ಅಗ್ರಸ್ಥಾನದಲ್ಲಿ ಇರುತ್ತಾರೆ ಅವರ ಸ್ಥಾನವನ್ನು ತುಂಬಲು ಇಂದಿಗೂ ಕೂಡ ಯಾವ ನಟರಿಗೂ ಸಾಧ್ಯವಾಗಿಲ್ಲ. ಇಂದು ಆ ನಟರ ಹೈಟಿಯಲ್ಲಿ ಅಗ್ರಗಣ್ಯರಾದ ಅವರ ಬಗ್ಗೆ ಮಾತನಾಡಲು ಹೊರಟಿದ್ದೇವೆ.

ಹೌದು ನಾವು ಮಾತನಾಡಲು ಹೊರಟಿರುವುದು ಕನ್ನಡ ನಾಡು ಕಂಡ ಶ್ರೇಷ್ಠ ನಟ ಕನ್ನಡದ ಅಸ್ಮಿತೆ ಹಾಗೂ ಕನ್ನಡ ಕುಲ ತಿಲಕ ಎಂದೆ ಖ್ಯಾತ ರಾಗಿರುವ ನಟಸಾರ್ವಭೌಮ ಕನ್ನಡ ಕಂಠೀರವ ಡಾಕ್ಟರ್ ರಾಜಕುಮಾರ್ ರವರ ಬಗ್ಗೆ ಮಾತನಾಡಲು ಹೊರಟಿದ್ದೇವೆ. ಅಣ್ಣಾವ್ರು ಎಂದಾಗ ಯಾರಾದರೂ ಒಮ್ಮೆ ಎದ್ದು ನಿಂತು ಗೌರವ ಸಲ್ಲಿಸಲೇಬೇಕು ಅಂತಹ ವ್ಯಕ್ತಿತ್ವ ಅಣ್ಣಾವ್ರ ದ್ದು. ಗಾಜನೂರಿನ ಹಳ್ಳಿಯಿಂದ ಬಂದು ಬೆಂಗಳೂರಿನ ನಗರದಲ್ಲಿ ತಮ್ಮ ನಟನೆಯ ಮೂಲಕ ಕನ್ನಡ ಚಿತ್ರರಂಗದ ಅನಭಿಷಿಕ್ತ ರಾಜನಾಗಿ ಮೆರೆದವರು ನಮ್ಮ ಮುತ್ತುರಾಜ.

ನಾಟಕಗಳ ಮೂಲಕ ತಮ್ಮ ನಟನೆಯ ಜೀವನವನ್ನು ಪ್ರಾರಂಭಿಸಿ ನಂತರ ಬೇಡರ ಕಣ್ಣಪ್ಪ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಕನ್ನಡ ಚಿತ್ರರಂಗವನ್ನು ಕೂಡ ಉನ್ನತ ಹಂತದಲ್ಲಿ ಮಿಂಚುವಂತೆ ಮಾಡಿದ ಎಂದೂ ಮರೆಯಾಗದ ತಾರೆ ನಮ್ಮ ರಸಿಕರ ರಾಜ ಡಾಕ್ಟರ್ ರಾಜಕುಮಾರ್. ಅವರು ಇಲ್ಲಿ ಎಷ್ಟೇ ಹೆಸರು ಮಾಡಿದ್ದರು ತನ್ನ ಊರಲ್ಲಿ ಏನಾದರೂ ಕಟ್ಟಬೇಕು ಏನಾದರೂ ಮಾಡಬೇಕೆಂಬ ಹಂಬಲ ಅವರಲ್ಲಿತ್ತು. ಆಗ ತಮ್ಮ ಊರಾದ ಗಾಜನೂರಿನಲ್ಲಿ ತಮ್ಮ ತೋಟದ ಮನೆಯಲ್ಲಿ ಒಂದು ಸುಂದರವಾದ ಮನೆಯನ್ನು ಕಟ್ಟಿಸಿದವರು ಅಣ್ಣಾವ್ರು.

ಚಿತ್ರರಂಗದಲ್ಲಿ ಬಿಡುವಾದಾಗಲೆಲ್ಲಾ ಅಣ್ಣಾವ್ರು ಗಾಜನೂರಿನ ತಮ್ಮ ತೋಟದ ಮನೆಯಲ್ಲಿ ವಾಸಿಸುತ್ತಿದ್ದರು. ಅಲ್ಲಿ ಸಾಮಾನ್ಯ ಜನರಂತೆ ತೋಟದಲ್ಲಿ ಓಡಾಡಿಕೊಂಡು ಅಲ್ಲಿನ ಜನರೊಂದಿಗೆ ಮಾತನಾಡಿಕೊಂಡು ಇರುತ್ತಿದ್ದರು. ಆದರೆ ಅಣ್ಣಾವ್ರು ಅಷ್ಟೊಂದು ಇಷ್ಟಪಡುತ್ತಿದ್ದ ತೋಟದ ಮನೆಯಲ್ಲಿ ಮುಂದೆ ವಾಸಿಸಲು ಇರಲಾರದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಇದೇನಪ್ಪಾ ಕನ್ನಡಿಗರ ಕುಲತಿಲಕ ಎಂದು ಖ್ಯಾತರಾಗಿರುವ ಅಣ್ಣವರಿಗೆ ಅವರ ಮನೆಯಲ್ಲಿ ಇರಲಾರದು ಅಂತ ಪರಿಸ್ಥಿತಿ ಎಂದು ಕೇಳಬಹುದು.

ಹೌದು ಇದು ನಿಮಗೆ ಆಶ್ಚರ್ಯ ತೋರಿಸಿದರು ನಿಜವಾದ ಮಾಹಿತಿ. ಅಣ್ಣಾವ್ರು ಆ ಮನೆಗೆ ಮತ್ತೆ ಹೋಗದಂತೆ ಪರಿಸ್ಥಿತಿ ನಿರ್ಮಾಣವಾಗಲು ಕಾರಣ ಒಬ್ಬ ಇದ್ದಾನೆ. ಆತ ಯಾರು ಮತ್ತೆ ಅಣ್ಣಾವ್ರು ಗಾಜನೂರಿನ ತೋಟದ ಮನೆಗೆ ಯಾಕೆ ಭೇಟಿ ನೀಡಲಿಲ್ಲ ಎಂಬ ವಿಷಯವನ್ನು ಸವಿಸ್ತಾರವಾಗಿ ನಿಮಗೆ ಹೇಳುತ್ತೇವೆ ಬನ್ನಿ.

ಹೌದು ಅಂದು ತಮ್ಮ ಮಡದಿಯೊಂದಿಗೆ ಆರಾಮವಾಗಿ ಕೂತು ಕೊಂಡು ಹರಟೆ ಹೊಡೆಯುತ್ತಿದ್ದ ಅಣ್ಣಾವ್ರನ್ನು ಕಾಡುಗಳ್ಳ ವೀರಪ್ಪನ್ ಎತ್ತುಕೊಂಡು ಹೋಗಿದ್ದ. ಆ ಜಾಗ ಇದೆ ಗಾಜನೂರಿನ ಅಣ್ಣಾವ್ರ ಮನೆ. ಆಗ ಘಟನೆ ನಡೆದ ಮೇಲಿಂದ ಅಣ್ಣಾವ್ರು ಇಲ್ಲಿಗೆ ಬರೋದನ್ನೇ ನಿಲ್ಲಿಸಿಬಿಟ್ಟರು. ವೀರಪ್ಪನ್ ನಿಂದಾಗಿ ಅಣ್ಣಾವ್ರು ಗಾಜನೂರಿನ ತಮ್ಮ ನೆಚ್ಚಿನ ಮನೆಗೆ ವಿದಾಯ ಹೇಳಿ ಹೋದವರು ಮತ್ತೆ ಬರಲಿಲ್ಲ. ನೋಡಿದ್ರಲ್ಲ ಸ್ನೇಹಿತರೇ ಒಬ್ಬ ವೀರಪ್ಪನ್ ನಿಂದಾಗಿ ಕನ್ನಡ ಕಂಠೀರವ ಡಾಕ್ಟರ್ ರಾಜಕುಮಾರ್ ಅವರು ತಮ್ಮ ನೆಚ್ಚಿನ ಗಾಜನೂರಿನ ಮನೆಗೆ ಹೋಗುವುದನ್ನು ನಿಲ್ಲಿಸಿ ಬಿಟ್ಟರು. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ತಿಳಿಸಿ.