ಕೇವಲ 31 ಗ್ರಾಂ ಇರುವ ಈ ಜಗತ್ತಿನ ಅತ್ಯಂತ ಚಿಕ್ಕ ಮೊಬೈಲ್ ನ ಬೆಲೆ ಎಷ್ಟು ಗೊತ್ತೇ?? ಎಷ್ಟು ಕಡಿಮೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಈಗ ಎಲ್ಲರ ಬಳಿಯೂ ಮೊಬೈಲ್ ಇರುತ್ತದೆ. ಆ ಮೊಬೈಲ್ ನ ತೂಕ ಎಷ್ಟಿರಬಹುದು. 100 ಗ್ರಾಂ, 150 ಗ್ರಾಂ ಇರಬಹುದು. ಆದರೇ ಈಗ ಜಗತ್ತಿನ ಅತಿ ಕಡಿಮೆ ತೂಕದ ಮೊಬೈಲೊಂದರ ಆವಿಷ್ಕಾರ ಮಾಡಲಾಗಿದೆ. ಇದರ ತೂಕ ಕೇವಲ 31 ಗ್ರಾಂ ಎಂದರೇ ನೀವು ನಂಬಲೇ ಬೇಕು. ಸಹಜವಾಗಿ ಸ್ಮಾರ್ಟ್ ಫೋನ್ ಖರೀದಿಸುವ ಗ್ರಾಹಕರು ತಮ್ಮ ಮೊಬೈಲ್ ಡಿಸ್ ಪ್ಲೇ ವಿಶಾಲವಾಗಿರಬೇಕೆಂದು ಬಯಸುತ್ತಾರೆ. ವಿಶಾಲವಾಗಿರುವ ಡಿಸ್ ಪ್ಲೇ ಮೊಬೈಲುಗಳೇ ಹೆಚ್ಚು ಮಾರಾಟವಾಗುತ್ತಿವೆ ಎಂಬ ವರದಿ ಸಹ ಇತ್ತಿಚಿಗೆ ಬಂದಿದೆ. ಆದರೇ ಯುಕೆ ಮೂಲದ ಜಿನಿ ಮೊಬೈಲ್ ಕಂಪನಿಯ 31 ಗ್ರಾಂನ ಮೊಬೈಲ್ ಈಗ ಎಲ್ಲರಲ್ಲೂ ಅಚ್ಚರಿ ಉಂಟು ಮಾಡಿದೆ.

ಜಿನಿ ಮೊಬೈಲ್ ಸಂಸ್ಥೆಯೂ ಜಂಕೋ ಟಿನಿ ಟಿ2 ಎಂಬ ಹೆಸರಿನ ಪುಟ್ಟ ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡಿದೆ. ಇದು ಜಗತ್ತಿನ ಅತಿ ಚಿಕ್ಕ ಸ್ಮಾರ್ಟ್ ಫೋನ್ ಎಂಬ ಖ್ಯಾತಿಗೆ ಒಳಗಾಗಿದೆ. ಉಳಿದ ಸ್ಮಾರ್ಟ್ ಫೋನ್ ಗಳಲ್ಲಿರುವಂತೆ ಫೀಚರ್ ಗಳಾದ, ಕ್ಯಾಮರಾ, ವಿಡಿಯೋ, ಅಲಾರಾಂ, ಎಂಪಿ3, ಎಂಪಿ4, ಎಫ್ ಎಂ ರೇಡಿಯೋ, ಅಲಾರಾಂ ವ್ಯವಸ್ಥೆ ಹೊಂದಿದೆ. ಅಲ್ಲದೇ ಸಿಂಗಲ್ ಸ್ಲಾಟ್ ಸಿಮ್ ಕಾರ್ಡ್ ಗೆಂದು ರಚಿಸಲಾಗಿದೆ. ಜೊತೆಗೆ 32 ಜಿಬಿಯ ಮೆಮೊರಿ ಕಾರ್ಡ್ ಸ್ಲಾಟ್ ಸಹ ಇದೆ. ಎಲ್ಲಕ್ಕಿಂತ ಹೆಚ್ಚಿನ ಫೀಚರ್ ಅಂದರೇ ಈ ಮೊಬೈಲ್ ನ ಬ್ಯಾಟರಿ ಕೆಪಾಸಿಟಿ. ಕಂಪನಿ ಹೇಳಿರುವ ಪ್ರಕಾರ 7 ದಿನಗಳ ಸ್ಟಾಂಡ್ ಬೈ ಬ್ಯಾಟರಿ ಸಾಮರ್ಥ್ಯ ಹೊಂದಿರುವುದಾಗಿ ತಿಳಿಸಿದೆ.

ಅಂದರೇ ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದ ಮೊಬೈಲ್ ಮತ್ತೊಮ್ಮೆ ಚಾರ್ಜ್ ಮಾಡುವುದು 8 ದಿನಗಳ ನಂತರ. ಜೊತೆಗೆ ಸ್ಮಾರ್ಟ್ ಫೋನ್ ಗಳಲ್ಲಿರುವ ಎಲ್ಲಾ ರೀತಿಯ ಅಗತ್ಯ ಬಿಲ್ಟ್ ಇನ್ ಆಪ್ ಗಳನ್ನು ಸಹ ಹೊಂದಿದೆ. ಮೊಬೈಲ್ ಮಾರುಕಟ್ಟೆಯಲ್ಲಿ ಸೋಜಿಗ ಹುಟ್ಟು ಹಾಕುತ್ತಿರುವ ಈ ಪುಟಾಣಿ ಮೊಬೈಲ್ ನ ಆರಂಭಿಕ ಬೆಲೆ 599 ಯುಎಸ್ ಡಾಲರ್ ಎಂದು ಘೋಷಿಸಲಾಗಿದೆ. ಅಂದರೇ ಭಾರತೀಯ ರೂಪಾಯಿಯಲ್ಲಿ ಸುಮಾರು 42500 ರೂಪಾಯಿ ಆಗಿದೆ. ಭಾರತ, ಯುಎಸ್, ಜರ್ಮನಿ, ಜಪಾನ್ , ಯುಕೆ ಹೀಗೆ ಎಲ್ಲಾ ದೇಶಗಳ ಮಾರುಕಟ್ಟೆಯಲ್ಲಿ ಈ ಮೊಬೈಲ್ ಲಭ್ಯವಿದೆ.