ಅಪ್ಪಿ ತಪ್ಪಿಯೂ ಕೂಡ ಯಾವುದೇ ಮಹಿಳೆ ಈ ಮೂರು ಕೆಲಸ ಮಾಡುವಾಗ ನೋಡಲೇಬೇಡಿ, ಪಾಪ ಸುತ್ತುಕೊಳ್ಳುತ್ತದೆ. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತ ಸಂಸ್ಕೃತಿ ಮೊದಲಿನಿಂದಲೂ ಮಹಿಳೆ ಗೆ ಗೌರವ ಹಾಗೂ ಉನ್ನತ ಸ್ಥಾನದಲ್ಲಿಟ್ಟು ಪೂಜಿಸುತ್ತಿರುವ ಅಂತಹ ಸಮಾಜ ಇದು. ಅದರಲ್ಲೂ ವಿಶೇಷವಾಗಿ ಹಿಂದೂಧರ್ಮದಲ್ಲಿ ಮಹಿಳೆಯರಿಗೆ ಪೂಜ್ಯ ಸ್ಥಾನವನ್ನು ಕೊಟ್ಟು ಪೂಜಿಸುತ್ತಾರೆ. ಮಹಿಳೆಯ ಎಂಬ ವರ್ಗಕ್ಕೆ ಎಷ್ಟೊಂದು ಉನ್ನತವಾದ ಮರ್ಯಾದೆ ಇದೆ ಅಂದರೆ ಭೂಮಿತಾಯಿಯನ್ನು ಕೂಡ ಹೆಣ್ಣಿನ ಮೂಲಕ ಕಾಣುತ್ತಾರೆ.

ತಮಗೆ ಜನ್ಮ ತಾಯಿಯಿಂದ ಹಿಡಿದು ನಮ್ಮ ಜೀವನದಲ್ಲಿ ಅದೃಷ್ಟಲಕ್ಷ್ಮಿ ಆಗಿಬರುವ ನಮ್ಮ ಮಡದಿಯು ಕೂಡ ಹೆಣ್ಣು. ಹೀಗಾಗಿ ಹಿಂದೂ ಸಂಪ್ರದಾಯದಲ್ಲಿ ಹೆಣ್ಣಿಗೆ ಸದಾ ಉನ್ನತ ಗೌರವವನ್ನು ಕೊಟ್ಟು ಕಾಣುತ್ತದೆ. ಇಂದಿನ ವಿಷಯದಲ್ಲಿ ನಾವು ಹೇಳಹೊರಟಿರುವ ವಿಶೇಷವೇನೆಂದರೆ ಮಹಿಳೆಯರು ಈ ಮೂರು ಕೆಲಸ ಮಾಡುವಾಗ ತಪ್ಪು ದೃಷ್ಟಿ ನೋಡಬೇಡಿ ಅದು ನಿಮಗೆ ಪಾಪ ಹಾಗೆ ಮಾಡುತ್ತದೆ ಎಂಬುದರ ಕುರಿತು. ಬನ್ನಿ ತಡಮಾಡದೆ ಆ ವಿಷಯಗಳೇನು ಎಂಬುದನ್ನು ವಿವರಿಸುತ್ತವೆ ಬನ್ನಿ.

ಮೊದಲನೆಯದಾಗಿ ಮಹಿಳೆ ಸ್ನಾನ ಮಾಡುವುದನ್ನು ನೋಡುವುದು ಸ್ನಾನ ಎಂಬುದು ಎಲ್ಲರೂ ದೈಹಿಕವಾಗಿ ಶುಚಿಯಾಗಿರಲು ಬಹುಮುಖ್ಯವಾದ ಕ್ರಿಯೆ ಎಂಬುದು ನಮಗೆಲ್ಲ ಗೊತ್ತಿದೆ. ಮಹಿಳೆಯರು ಸ್ನಾನ ಮಾಡುವುದನ್ನು ನೋಡುವುದು ಅಕ್ಷಮ್ಯ ಅಪರಾಧ ಎಂದರೆ ತಪ್ಪಾಗಲಾರದು. ಇದು ಎಷ್ಟರಮಟ್ಟಿಗೆ ಪಾಪಕೃತ್ಯ ವೆಂದರೆ ಇದನ್ನು ನೀವು ಮಾಡಿದರೆ ಇಹಲೋಕ ತ್ಯಜಿಸಿದ ನಂತರ ಕೂಡ ಈ ಪಾಪ ನಿಮ್ಮನ್ನು ಬಿಡುವುದಿಲ್ಲ. ಪರಮಾತ್ಮ ಶ್ರೀ ಕೃಷ್ಣ ಕೂಡ ಇದನ್ನೇ ಹೇಳುತ್ತಾನೆ. ಮಹಿಳೆಯರು ವಸ್ತ್ರ ವಿಲ್ಲದೆ ಸ್ನಾನ ಮಾಡಬಾರದೆಂದು.

ಅದಿಕ್ಕೆ ಗೋಪಿಕಾಸ್ತ್ರೀಯರು ಸ್ನಾನ ಮಾಡುವಾಗ ಅವರ ಬಟ್ಟೆಗಳನ್ನು ಕದ್ದು ಅವರಿಗೆ ಪಾಠ ಕಲಿಸಿದ. ಮಹಿಳೆಯರಿಗೆ ನಾವು ಗೌರವ ನೀಡುವುದರಿಂದ ಅವರು ಸ್ನಾನ ಮಾಡುವಾಗ ಅವರನ್ನು ನೋಡುವುದು ಹಾಗೂ ಅದರ ಕುರಿತಂತೆ ಕೆಟ್ಟ ದೃಷ್ಟಿಯಿಂದ ಕಲ್ಪಿಸಿಕೊಳ್ಳುವುದು ತುಂಬಾ ಕಠಿಣ ಪಾಪವೆಂದು ಹೇಳಬಹುದು.

ಇನ್ನು ಎರಡನೆಯದಾಗಿ ತಾಯಿ ಮಗುವಿಗೆ ಹಾಲುಣಿಸುವಾಗ ನೋಡುವುದು ಇದನ್ನಂತೂ ಯಾವತ್ತೂ ಮಾಡಲೇಬಾರದು. 9 ತಿಂಗಳುಗಳ ಕಾಲ ಹೊತ್ತು ಹೆತ್ತು ಮಗುವನ್ನು ಹೆರುವ ತಾಯಿ ಮಗುವಿಗೆ ಮೊದಮೊದಲು ಎದೆಹಾಲನ್ನೇ ನೀಡುತ್ತಾರೆ. ಎದೆ ಹಾಲು ಉಣಿಸುವ ಸಂದರ್ಭದಲ್ಲಿ ನೋಡುವುದು ಖಂಡಿತವಾಗಿಯೂ ಕ್ಷಮಿಸಲಾರದ ಪಾಪ ಕೃತ್ಯವೇ ಸರಿ. ಏಕೆಂದರೆ ಆ ತಾಯಿ ಲೋಕದಿಂದ ಮರೆಮಾಚಿ ತನ್ನ ಮಗುವಿಗೆ ಹಾಲುಣಿಸಲು ಕಷ್ಟಪಡುತ್ತಿರುವ ಸಂದರ್ಭದಲ್ಲಿ ನೀವು ಹೀಗೆ ಆ ತಾಯಿ ಮಗುವಿಗೆ ಹಾಲುಣಿಸುವುದನ್ನು ಕದ್ದು ನೋಡಲು ಪ್ರಯತ್ನಪಟ್ಟರೆ ಖಂಡಿತವಾಗಿಯೂ ನಿಮಗೆ ನರಕದಲ್ಲಿ ಕೂಡ ಜಾಗ ಸಿಗಲಾರದು. ಇದು ಪುರಾಣಗಳಲ್ಲಿ ಹೇಳಿಕೊಂಡ ಅಂತಹ ನಂಬಿಕೆಯ ಮಾತುಗಳು. ಹಾಗಾಗಿ ದಯವಿಟ್ಟು ಯಾವುದೇ ತಾಯಿ ಮಗುವಿಗೆ ಹಾಲುಣಿಸುವ ಸಂದರ್ಭದಲ್ಲಿ ನೀವು ಕೆಟ್ಟ ದೃಷ್ಟಿಯಿಂದ ನೋಡಲು ಹೋಗಬೇಡಿ.

ಇನ್ನು ಮೂರನೆಯದಾಗಿ ಬಟ್ಟೆ ಧರಿಸುವಾಗ ಹೆಣ್ಣುಮಕ್ಕಳು ಎಂದಿಗೂ ತಮ್ಮ ಮಾನ ಮುಚ್ಚಿಕೊಳ್ಳಲು ಬಟ್ಟೆಗಳನ್ನು ಅಗತ್ಯವಾಗಿ ಉಪಯೋಗಿಸುತ್ತಾರೆ ಎಂಬುದು ನಿಮಗೆ ಗೊತ್ತು. ಗಂಡಸರಿಗಿಂತ ಹೆಚ್ಚಾಗಿ ಹೆಣ್ಣುಮಕ್ಕಳು ತಮ್ಮ ಬಟ್ಟೆ ಹಾಗೂ ಉಡುಪಿನ ಕುರಿತಂತೆ ಮುತುವರ್ಜಿವಹಿಸಿ ಉಟ್ಟುಕೊಳ್ಳುತ್ತಾರೆ. ಒಂದು ವೇಳೆ ಅವರು ಬಟ್ಟೆ ಬದಲಾಯಿಸುವ ಸಂದರ್ಭದಲ್ಲಿ ನೀವು ನೋಡಿದರೆ ಖಂಡಿತವಾಗಿ ನಿಮಗೆ ಎಂದಿಗೂ ಕ್ಷಮಿಸಲಾರದಂತಹ ಶಿಕ್ಷೆಯ ಪಾಪದ ಭಾಗಿಯಾಗುತ್ತೀರಿ ನೀವು. ಹಾಗಾಗಿ ಎಂದೂ ಈ ತರಹದ ಕೆಲಸಗಳಲ್ಲಿ ಪಾಲ್ಗೊಳ್ಳಬೇಡಿ.

ಮಹಿಳೆಯರಿಗೆ ಸದಾ ಗೌರವ ನೀಡಿ ಪ್ರೀತಿ ವಾತ್ಸಲ್ಯ ಗಳನ್ನು ನೀಡುವ ಸಮಾಜ ನಮ್ಮದು. ಹಾಗಾಗಿ ಈ ಮೇಲೆ ನಾವು ಹೇಳಿರುವ ಈ ಎಲ್ಲಾ ಕಾರ್ಯಗಳು ಸೇರಿದಂತೆ ಇನ್ನೂ ಕೆಲವು ಕಾರ್ಯಗಳನ್ನು ಎಂದಿಗೂ ಮಾಡಲು ಹೋಗಬೇಡಿ. ಈ ಸಮಾಜದಲ್ಲಿ ಮಹಿಳೆಯರು ಕೂಡ ನಿರ್ಭೀತಿಯಿಂದ ಬದುಕುವಂತೆ ಮಾಡೋಣ. ಮಹಿಳೆಯ ಕುರಿತಂತೆ ದೌರ್ಜನ್ಯ ಆಗುಮಾಡುವ ಗಂಡಸರಿಗಿಂತ ಮಹಿಳೆಯರ ಕಷ್ಟ-ಸುಖಗಳನ್ನು ಅರಿತು ಅವರಿಗೆ ಬೇಕಾಗುವ ಹಾಗೂ ಅವರು ಅಂದುಕೊಂಡ ಅಂತಹ ಕಾರ್ಯವನ್ನು ಸಾಧಿಸುವ ಗಂಡಸರು ಆಗಿ ಸಮಾಜದಲ್ಲಿ ನಮ್ಮ ಗೌರವವನ್ನು ಹೆಚ್ಚಿಸಿಕೊಳ್ಳೋಣ ಬನ್ನಿ ಸ್ನೇಹಿತರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.