ಕೇಸರಿ ಅಷ್ಟೊಂದು ದುಬಾರಿಯಾಗಲು ಕಾರಣ ಏನು ಗೊತ್ತೇ?? ಕೇಸರಿ ಕೃಷಿಯನ್ನ ಹೇಗೆ ಮಾಡುವುದು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕೇಸರಿ ಎಂದು ಕಿವಿಗೆ ಬಿದ್ದ ತಕ್ಷಣ ನಿಮ್ಮ ಮನದಲ್ಲಿ ಮೂಡುವ ವಿಚಾರವೆಂದರೇ ಅದು ದುಬಾರಿ ಎಂದು. ಕೇಸರಿ ಅಷ್ಟೊಂದು ದುಬಾರಿ ಎಂದರೇ ಅದು ಕಾಶ್ಮೀರದಲ್ಲಿ ಮಾತ್ರ ಬೆಳೆಯುತ್ತಾರೆ ಹಾಗಾಗಿ ದುಬಾರಿ ಎಂಬ ತಪ್ಪು ಕಲ್ಪನೆಗಳು ಇರುತ್ತವೆ. ಆದರೇ ಅಸಲಿ ಕಾರಣಗಳೇ ಬೇರೆ. ಅಲ್ಲದೇ ನೀವು ಸಹ ಕೇಸರಿಯನ್ನ ಬೆಳೆಯಬಹುದು. ಬನ್ನಿ ಹೇಗೆ ಎಂದು ಈ ಲೇಖನದಲ್ಲಿ ತಿಳಿಸಿಕೊಡುತ್ತವೆ‌.

ಮೊದಲಿಗೆ ಕೇಸರಿ ಬೆಳೆಯಲು ಬಹಳ ತಾಳ್ಮೆ ಅಗತ್ಯ. ಏಕೆಂದರೇ ಕೇಸರಿ ಒಂದು ದುಬಾರಿ ಮಸಾಲೆ ಪದಾರ್ಥ. ತಂಪಾಗಿರುವ ಪ್ರದೇಶಗಳು ಈ ಬೆಳೆಗೆ ಸೂಕ್ತವಾಗಿರುತ್ತವೆ. ಕೇಸರಿ ಹೂವಿನಲ್ಲಿ ಉಪಯೋಗಕ್ಕೆ ಬರುವುದು ಅದರಲ್ಲಿರುವ ಕೆಂಪು ಕೇಸರಗಳು ಮಾತ್ರ. ಅಂತಹ ಒಂದು ಕಿಲೋ ಕೇಸರಕ್ಕೆ ಕಡಿಮೆ ಎಂದರೂ ಎರಡು ಲಕ್ಷ ಹೂವುಗಳು ಬೇಕಾಗುತ್ತವೆ. ಆಂದರೇ ಅರ್ಥ ಮಾಡಿಕೊಳ್ಳಿ ಕೇಸರಿ ಯಾಕಿಷ್ಟು ದುಬಾರಿ ಎಂದು. ಕೇಸರಿ ಗರ್ಭಿಣಿಯರಿಗೆ , ಅಪೌಷ್ಠಿಕತೆಯಿಂದ ಬಳಲುತ್ತಿರುವವರಿಗೆ ಉತ್ತಮ.

ಕೇಸರಿ ಬೀಜಗಳನ್ನ ಪ್ರತಿ ಹದಿನೈದು ವರ್ಷಗಳಿಗೊಮ್ಮೆ ಬಿತ್ತನೆ ಮಾಡಬೇಕು. ಪ್ರತಿ ವರ್ಷ ಹೂವು ಬಂದ ನಂತರ ಹದಿನೈದು ವರ್ಷವಾದ ಮೇಲೆ ಆ ಗಡ್ಡೆಗಳನ್ನು ಬುಡ ಸಮೇತ ಕಿತ್ತು ಮತ್ತೆ ಬಿತ್ತನೆ ಮಾಡಬೇಕು. ಆದರೇ ಗಮನಿಸಬೇಕಾದ ಅಂಶ ಎಂದರೇ ಕೇಸರಿಯ ಇಳುವರಿ ಬಹಳ ಕಡಿಮೆ. ಉದಾಹರಣೆಗೆ ಒಂದು ವರೆ ಚದರದಡಿಯಲ್ಲಿ ಕೃಷಿ ಮಾಡಿದರೇ ನೀವು ಹೆಚ್ಚೆಂದರೇ ಕೇವಲ 50 ಗ್ರಾಂ ಕೇಸರಿಯನ್ನ ಇಳುವರಿಯಾಗಿ ಪಡೆಯಬಹುದು.

ಪ್ರಯೋಗಕ್ಕಾಗಿ ಸುಮಾರು 160 ಕೇಸರಿ ಹೂವುಗಳನ್ನು ತೆಗೆದಾಗ ಅದರಿಂದ ಕೇವಲ ಒಂದು ಗ್ರಾಂ ಕೇಸರಿ ಉತ್ಪಾದನೆಯಾಗುತ್ತದೆ. ಆದರೇ ಒಂದು ಗ್ರಾಂ ಕೇಸರಿ, ನೂರು ಲೋಟ ಹಾಲಿನಲ್ಲಿರುವಷ್ಟು ಪೌಷ್ಠಿಕಾಂಶಗಳನ್ನು ಹೊಂದಿರುತ್ತದೆ‌. ಹಾಗಾಗಿ ಕೇಸರಿ ದುಬಾರಿಯಾಗಿರುವುದು. ಕೇಸರಿ ಗಿಡ ಈರುಳ್ಳಿ ಗಿಡದಂತೆ ಇರುತ್ತದೆ. ಈ ಗಿಡದ ಮಧ್ಯೆ ನೇರಳೆ ಬಣ್ಣದ ಹೂವು ಬಿಡುತ್ತದೆ. ಈ ಹೂವಿನ ಮಧ್ಯದಲ್ಲಿ ಕೇಸರಿ ಎಸಳು ಇರುತ್ತದೆ. ಅದು ಒಣಗುವ ಹಂತದಲ್ಲಿ ಜೋಪಾನವಾಗಿ ತೆಗೆದಿಡಬೇಕಾಗುತ್ತದೆ. ಕೊಂಚ ತಪ್ಪಿದರೂ ಕೇಸರಿಯ ಎಸಳು ಹಾಳಾಗುತ್ತದೆ. ಒಂದು ಹೂವಿನಲ್ಲಿ ಎರಡರಿಂದ ಮೂರು ಕೇಸರಿ ಎಸಳುಗಳಿರುತ್ತವೆ ಅಂದರೇ ನೀವೇ ಲೆಕ್ಕ ಹಾಕಿ ಒಂದು ಕೆಜಿಗೆ ಎಷ್ಟು ಹೂವುಗಳು ಬೇಕಾಗುತ್ತದೆ ಎಂಬುದನ್ನ ನೀವೇ ಲೆಕ್ಕ ಹಾಕಿ.