ಪುರುಷರು ತಂದೆಯಾಗಲು ಯಾವ ವಯಸ್ಸು ಸೂಕ್ತವಾಗಿರುತ್ತದೆ ಎಂದು ಹೇಳಿದ ಸಂಶೋಧನೆ, ಯಾವ ವಯಸ್ಸು ಸೂಕ್ತವಂತೆ ಗೊತ್ತಾ??

ನಮಸ್ಕಾರ ಸ್ನೇಹಿತರೇ, ಸಾಮಾನ್ಯವಾಗಿ ಹಲವಾರು ಅಭಿಪ್ರಾಯ ಗಳು ಹಾಗೂ ವೈದ್ಯರ ಸಲಹೆಗಳು ಸದಾ ಮಹಿಳೆಯರ ಕುರಿತು ಇರುತ್ತದೆ, ಹೌದು ನೀವು ನೋಡಿರಬಹುದು, ಮಹಿಳೆಯರಿಗೆ ಯಾವ ವಯಸ್ಸು ಮದುವೆಯಾಗಲು ಸೂಕ್ತ ಅಥವಾ ತಾಯಿ ಯಾಗಲು ಸೂಕ್ತ ಎಂಬ ಸಲಹೆಗಳನ್ನು ವಿವಿಧ ಅಧ್ಯಯನಗಳ ಮೂಲಕ ಸದಾ ವೈದ್ಯರು ಹಾಗೂ ಸಂಶೋಧಕರು ತಿಳಿಸುತ್ತಿರುತ್ತಾರೆ. ಆದರೆ ಪುರುಷರ ದೇಹದ ರಚನೆಯ ಆದರದ ಮೇರೆಗೂ ಕೂಡ ಕೆಲವೊಂದು ವಯಸ್ಸಿನಲ್ಲಿ ಮಾತ್ರ ಕೆಲವೊಂದು ಹೆಜ್ಜೆ ಇಡುವುದು ಸೂಕ್ತ ವೆನಿಸುತ್ತದೆ.

ಅದೇ ಕಾರಣಕ್ಕಾಗಿ ಪುರುಷರು ಯಾವ ವಯಸ್ಸಿನಲ್ಲಿ ತಂದೆಯಾದರೆ ಎಂದು ತಿಳಿದುಕೊಳ್ಳಲು ನಡೆಸಿದ ಸಂಶೋಧನೆಯೊಂದರ ಫಲಿತಾಂಶವನ್ನು ನಾವು ಇಂದು ನಿಮಗೆ ತಿಳಿಸುತ್ತೇವೆ ಕೇಳಿ. ಸ್ನೇಹಿತರೇ ಸಾಮಾನ್ಯವಾಗಿ ಬಿಸಿನೆಸ್ ಮ್ಯಾನ್ ಗಳು ತಮ್ಮ ಕೆಲಸದಲ್ಲಿ ನಿರತರಾಗಿ 40 ವರ್ಷಗಳ ಆಸುಪಾಸಿನಲ್ಲಿ ತಂದೆಯಾಗಲು ಬಯಸುತ್ತಾರೆ ಆದರೆ ಈ ಸಂಶೋಧನೆಯ ಪ್ರಕಾರ 40 ವರ್ಷದ ಆಸುಪಾಸಿನ ಪುರುಷರಿಂದ ಮಗು ಹುಟ್ಟಿದರೆ, ಮಗುವಿಗೆ ಅನೇಕ ವಿವಿಧ ರೀತಿಯ ಸಮಸ್ಯೆಗಳು ಕಾಣಿಸುತ್ತದೆ ಎಂದು ತಿಳಿದು ಬಂದಿದೆ.

ಅದೇ ಸಮಯದಲ್ಲಿ ಸಾಮಾನ್ಯವಾಗಿ ಯಾವುದೇ ಪುರುಷನಾಗಲಿ ತಂದೆಯಾಗಲು ಸರಿಯಾದ ವಯಸ್ಸು ಎಂದರೆ ಅದು 22 ರಿಂದ 25 ವಯಸ್ಸು ಸೂಕ್ತ ಎನ್ನಲಾಗುತ್ತಿದೆ. ಆದರೆ ಈ ವಯಸ್ಸಿನಲ್ಲಿ ಪ್ರತಿಯೊಬ್ಬರೂ ಈ ಆಧುನಿಕ ಜಗತ್ತಿನಲ್ಲಿ ಭವಿಷ್ಯದ ಕುರಿತು ಆಲೋಚನೆ ಮಾಡಬೇಕಾಗಿರುವುದರಿಂದ 28-30 ರ ವಯಸ್ಸಿನಲ್ಲಿಯೂ ಕೂಡ ಮಗು ಮಾಡಿಕೊಳ್ಳುವವುದು ಉತ್ತಮವಾಗಿದೆ. ಆದರೆ ಇದೇ ಸಮಯದಲ್ಲಿ ಬಹುತೇಕ ಪುರುಷರ ಸಾಮರ್ಥ್ಯ 30 ವರ್ಷದ ಬಳಿಕ ಕಡಿಮೆ ಯಾಗುವುದರಿಂದ ಮಕ್ಕಳು ಪಡೆದರೂ ಕೂಡ ಸಾಕಷ್ಟು ವ್ಯತ್ಯಾಸ ಕಾಣಿಸುತ್ತವೆ ಎಂದು ಸಂಶೋಧನೆ ತಿಳಿಸಿದೆ. ಯಾಕೆಂದರೆ 30 ದಾಟಿದ ಬಳಿಕ ಟೆಸ್ಟೋಸ್ಟೇರಾನ್ ಮಟ್ಟ ಕಡಿಮೆಯಾಗುತ್ತದೆ ಆದಕಾರಣ 30 ರ ಒಳಗೆ ತಂದೆಯಾಗುವುದು ಸೂಕ್ತ ಎಂದು ಹೇಳಲಾಗುತ್ತಿದೆ.