ಒಂದು ಹಾಡನ್ನು ಹಾಡಲು ಚಂದನ್ ಶೆಟ್ಟಿ ತೆಗೆದುಕೊಳ್ಳುವ ಸಂಭಾವನೆ ಎಷ್ಟು ಗೊತ್ತೇ?? ಯಪ್ಪಾ ಇಷ್ಟೊಂದಾ??

ನಮಸ್ಕಾರ ಸ್ನೇಹಿತರೇ ಚಂದನ್ ಶೆಟ್ಟಿ. ಕನ್ನಡದ ಸಂಗೀತಕ್ಕೆ ಹೊಸ ಟಚ್ ನೀಡಿದ ಗಾಯಕ. ಅವರ ಮೂರೇ ಮೂರು ಪೆಗ್ಗಿಗೆ ಎಂಬ ಸಾಂಗ್ ಯೂಟ್ಯೂಬ್, ಹಾಗೂ ಇನ್ನಿತರ ಸೋಶಿಯಲ್ ಮೀಡಿಯಾಗಳಲ್ಲಿ ಹೊಸ ಸಂಚಲನ ನಟಿಸಿತ್ತು. ಕನ್ನಡದ ಗೀತೆಗಳನ್ನ ಪೇಜ್-3 ಪಾರ್ಟಿಗಳಲ್ಲಿ ಕೇಳುವಂತಾಯಿತು. ಪಬ್ ಗಳಲ್ಲಿಯೂ ಸಹ ಐಯಾಮ್ ಕನ್ನಡ ರಾ-ಪರ್ ಚಂದನ್ ಶೆಟ್ಟಿ ಎಂಬ ಧ್ವನಿ ಮಾರ್ಧನಿಸಿತು.

ನಂತರ ಚಂದನ್ ಶೆಟ್ಟಿ ಮುಟ್ಟಿದೆಲ್ಲವೂ ಚಿನ್ನವಾಗುತ್ತಾ ಸಾಗಿತು. ಚಾಕೋಲೆಟ್ ಗರ್ಲ್, ಟಾಪ್ ಟು ಬಾಟಮ್ ಹೀಗೆ ಹಲವು ಹಾಡುಗಳು ಹಿಟ್ ಆದವು. ಕೆಲವು ಚಲನಚಿತ್ರಗಳಿಗೂ ಚಂದನ್ ಶೆಟ್ಟಿ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದರು. ಈ ಮಧ್ಯೆ ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದ ಖರಾಬು ಸಾಂಗನ್ನ ಸ್ವತಃ ಚಂದನ್ ಶೆಟ್ಟಿಯವರೇ ಬರೆದು, ಸಂಗೀತ ನಿರ್ದೇಶಿಸಿ , ಹಾಡಿದ್ದರು. ಈ ಹಾಡು ಪ್ರಪಂಚಾದ್ಯಂತ ಮಿಲಿಯನ್ ಗಟ್ಟಲೇ ವೀಕ್ಷಣೆ ಕಂಡಿತು. ಈ ಮಧ್ಯೆ ಬಿಗ್ ಬಾಸ್ ಗೆ ತೆರಳಿದ ಚಂದನ್ ಶೆಟ್ಟಿ ಅಲ್ಲಿ ಕರ್ನಾಟಕದ ಜನರ ಮನಸ್ಸನ್ನ ಗೆದ್ದು ವಿನ್ನರ್ ಆಗಿ ಹೊರಹೊಮ್ಮಿದರು. ಬಿಗ್ ಬಾಸ್ ಮನೆಯಲ್ಲಿಯೇ ಸಹ ಸ್ಪರ್ಧಿ ನಿವೇದಿತಾ ಮನಸ್ಸನ್ನು ಕದ್ದ ಚಂದನ್ ಶೆಟ್ಟಿ ದಸರಾ ವೇಳೆ ನಿವೇದಿತಾಗೆ ಪ್ರೇಮ ನಿವೇದನೆ ಮಾಡಿದರು. ಮುಂದೆ ಕಲರ್ಸ್ ಕನ್ನಡದಲ್ಲಿ ಬಂದ ಕನ್ನಡದ ಕೋಗಿಲೆಗೆ ಸೀಸನ್ ಒಂದಕ್ಕೆ ಜಡ್ಜ್ ಆಗಿಯೂ ಸಹ ಕೆಲಸ ಮಾಡಿದರು.

ಈ ಮಧ್ಯೆ ಇತ್ತಿಚಿಗಷ್ಟೆ ನಡೆದ ಎಫ್.ಎಂ ರೇಡಿಯೋ ಒಂದರ ಸಂದರ್ಶನದಲ್ಲಿ ಚಂದನ್ ಶೆಟ್ಟಿ ದಂಪತಿಗಳಿಬ್ಬರೂ ಭಾಗವಹಿಸಿದ್ದರು. ಅಲ್ಲಿ ನಿರೂಪಕಿ ನೀವು ಪ್ರತಿ ಹಾಡಿಗೆ ಎಷ್ಟು ಸಂಭಾವನೆ ಪಡೆಯುತ್ತಿರಿ ಎಂದು ಕೇಳಿದಾಗ ಚಂದನ್ ಶೆಟ್ಟಿ ಕೊಟ್ಟ ಉತ್ತರ ವಿಚಿತ್ರವಾಗಿತ್ತು. ನಾನೇ ಲಿರಿಕ್ಸ್ ಬರೆದು ಟ್ಯೂನ್ ಹಾಕಿ ಹಾಡಿದರೇ ಒಂದು ರೇಟು, ಬೇರೆಯವರ ಟ್ಯೂನಿಗೆ ಹಾಡಿದರೇ ಒಂದು ರೇಟು, ಸಭೆ ಸಮಾರಂಭಗಳಲ್ಲಿ ಹಾಡಿದರೇ ಒಂದು ರೇಟು, ಹೀಗೆ ಪ್ರತಿಯೊಂದಕ್ಕೂ ಬೇರೆ ಬೇರೆ. ಕೆಲವೊಮ್ಮೆ ನಮ್ಮ ಜೀವನ ಶೇರು ಮಾರುಕಟ್ಟೆಯಂತೆ. ಏರಿಳಿತಗಳು ಸಹಜ. ಹಾಗಾಗಿ ಇಂತಿಷ್ಟೆ ಎಂದು ನಾನು ಹೇಳುವುದು ಅಷ್ಟೊಂದು ಉಚಿತವಲ್ಲ ಎಂದು ಹೇಳಿದರು. ನಿಮ್ಮ ಪ್ರಕಾರ ಚಂದನ್ ಶೆಟ್ಟಿ ಪ್ರತಿ ಹಾಡಿಗೆ ಎಷ್ಟು ಸಂಭಾವನೆ ತೆಗೆದುಕೊಳ್ಳಬಹುದೆಂಬುದನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.