ಈ ಸೌಂದರ್ಯವತಿಗೆ 14 ಕೋಟಿ ಭತ್ಯೆ ನೀಡಲು ಮುಂದಾದಾಗ ನನಗೆ ಬೇಡ ಎಂದಿದ್ಯಾಕೆ ಗೊತ್ತೇ?? ನಿಜಕ್ಕೂ ಗ್ರೇಟ್ ಕಣ್ರೀ.

ನಮಸ್ಕಾರ ಸ್ನೇಹಿತರೇ, ಇಂದಿನ ಆಧುನಿಕ ಜಗತ್ತಿನಲ್ಲಿ ಶೇಕಡಾ 50 ರಷ್ಟು ಮಂದಿ ಮಾತ್ರ ಮಾನವೀಯತೆ ಇಟ್ಟುಕೊಂಡಿದ್ದಾರೆ ಎಂದರೆ ತಪ್ಪಗಾಲಾರದು. ಯಾಕೆಂದರೆ ಉಳಿದ 50 ರಷ್ಟು ಮಂದಿ ಕೋರೋಣ ಸಮಯದಲ್ಲಿಯೂ ಕೂಡ ಹೇಗೆ ಜನರ ಬಳಿ ಹಣ ಕಿತ್ತುಕೊಳ್ಳಬೇಕು ಎಂಬ ಆಲೋಚನೆಯಲ್ಲಿ ಇದ್ದಾರೆ, ಲಕ್ಷಗಟ್ಟಲೆ ವೈದ್ಯಕೀಯ ಖರ್ಚು, ತರಕಾರಿಯವ ಹೆಚ್ಚು ಬೆಲೆ ಕೇಳುತ್ತಾರೆ, ಬ್ಲಾಕ್ ನಲ್ಲಿ ಔಷದಿ ಮಾರಾಟ, ಬೆಡ್ ಅನ್ನು ಉಳಿಸಿಕೊಂಡು ಹೆಚ್ಚು ಬೆಲೆ ಮಾರಾಟ, ಆಂಬುಲೆನ್ಸ್ ಗೆ ಕೂಡ ಒಂದೆರಡು ಕಿಲೋ ಮೀಟರ್ ಅಂದರೂ ಸಾವಿರಾರು ರೂಪಾಯಿ ಕೈಯಲ್ಲಿ ಇಡಿಯಬೇಕು. ಹೀಗೆ ಎಲ್ಲರೂ ಕೂಡ ದುಡ್ಡು ಮಾಡಲು ಇಳಿದಿದ್ದಾರೆ.

ಅಲ್ಲಿಗೆ ಅಂದು ದುಡಿದು ತಿನ್ನುವ ವ್ಯಕ್ತಿ ಮಾತ್ರ ಈಗಲೂ ಕೂಡ ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಕಷ್ಟ ಪಡುತ್ತಿದ್ದಾನೆ. ಹೌದಲ್ಲವೇ?? ಈಗ ಯಾಕೆ ಈ ವಿಷಯ ಎಂದು ಕೊಂಡಿರಾ?? ಬನ್ನಿ ಇಲ್ಲೊಬ್ಬರು ತನಗೆ 14 ಕೋಟಿ ಭತ್ಯೆ ನೀಡಲು ಮುಂದಾದರೂ ಕೂಡ ತನಗೆ ಬೇಡ ಎನ್ನುತ್ತಿದ್ದಾರೆ. ಯಾಕೆ ಗೊತ್ತಾ?? ಸಂಪೂರ್ಣ ಓದಿ ನಿಮಗೆ ತಿಳಿಯುತ್ತದೆ.

ಸ್ನೇಹಿತರೇ, ನೆದರ್ಲ್ಯಾಂಡ್ ದೇಶದಲ್ಲಿ ಎಲ್ಲ ದೇಶಗಳಂತೆ ರಾಜ ಮನೆತನದ ಆಡಳಿತ ಅಂತ್ಯವಾಗಿರುವ ಕಾರಣ ರಾಜ ಭತ್ಯೆ ನೀಡಲಾಗುತ್ತದೆ. ಅದರಂತೆ ಇಲ್ಲಿನ ರಾಜ ಕುಮಾರಿಗೆ 18 ವರ್ಷ ತುಂಬಿದ ಕಾರಣ 14 ಕೋಟಿ ರೂಪಾಯಿಯನ್ನು ನೀಡಲು ನೆದರ್ಲ್ಯಾಂಡ್ ಮುಂದಾಗಿದೆ. ಇದು ಒಂದು ವರ್ಷಕ್ಕೆ. ಇದನ್ನು ರಾಜ ಕುಮಾರಿ ತನ್ನ ಕಾಲೇಜಿನ ಅಥವಾ ವೈಯಕ್ತಿಕ ಖರ್ಚಿಗೆ ಬಳಸಿಕೊಳ್ಳಬಹುದು. ಆದರೆ ಈ ರಾಜ ಕುಮಾರಿ ನನಗೆ ಹಣ ಬೇಡ ಹಾಗೂ ಇನ್ನಿತರ ವಿಶೇಷ ಸೌಲಭ್ಯ ಬೇಡ, ಯಾಕೆಂದರೆ ಎಷ್ಟೋ ಜನ ಕೋರೋಣ ಇಂದ ಕಷ್ಟ ಪಡುತ್ತಿದ್ದಾರೆ. ಈ ಹಣವನ್ನು ಜನರ ಹೊಟ್ಟೆ ತುಂಬಿಸಲು ಬಳಸಿ, ನಾನು ಎಲ್ಲರಂತೆ ಸಾಮಾನ್ಯ ಕಾಲೇಜಿನಲ್ಲಿ ಓದುತ್ತೇನೆ, ಎಲ್ಲ ಸರಿ ಹೋದಮೇಲೆ ರಾಜ ಕುಮಾರಿಯಂತೆ ಖಂಡಿತ ಇರುತ್ತೇನೆ ಆದರೆ ಈಗಂತೂ ನಾನು ಸಾಮಾನ್ಯಳಾಗಿಯೇ ಇರುತ್ತೇನೆ ಎಂದಿದ್ದಾರೆ.