ವೀರಾಪುರದ ಸಿದ್ದಗಂಗಾ ಶ್ರೀ ಗಳ ಬೃಹತ್ ಪುತ್ದಳಿ ಕಾರ್ಯಕ್ಕೆ ನಾದಬ್ರಹ್ಮ ಹಂಸಲೇಖ ನೀಡಿತ್ತುರುವ ಕೊಡುಗೆ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ದಾಸೋಹ ಎಂದರೇ ಥಟ್ ಅಂತ ನೆನಪಾಗುವುದು ಸಿದ್ದಗಂಗಾ ಮಠ. ಸಿದ್ದಗಂಗಾ ಎಂದರೇ ಒಂದು ಕ್ಷಣ ನಮ್ಮ ಕಣ್ಣ ಮುಂದೆ ಬರುವುದು ಶತಾಯುಷಿ,ನಡೆದಾಡುವ ದೇವರು, ತ್ರಿವಿಧ ದಾಸೋಹಿ ಶ್ರೀ ಶ್ರೀ ಶ್ರೀ ಶಿವಕುಮಾರಸ್ವಾಮೀಜಿಗಳು. ಶಿವಕುಮಾರಸ್ವಾಮೀಜಿಗಳ ಜನ್ಮಸ್ಥಳ ರಾಮನಗರ ಜಿಲ್ಲೆ, ಮಾಗಡಿ ತಾಲೂಕಿನ ವೀರಾಪುರ.

ಸದ್ಯ ಪುಣ್ಯಭೂಮಿ ವೀರಾಪುರದಲ್ಲಿ ಅಂತರಾಷ್ಟ್ರೀಯ ಸಾಂಸ್ಕ್ರತಿಕ ಹಾಗೂ ಪಾರಂಪರಿಕ ಕೇಂದ್ರವನ್ನ ನಿರ್ಮಿಸಲಾಗುತ್ತಿದೆ. ಶ್ರೀಗಳ ಬೃಹತ್ 111 ಅಡಿಯ ಪುತ್ಥಳಿಯನ್ನು ಸಹ ನಿರ್ಮಿಸುತ್ತಿದೆ. ಶಿವಕುಮಾರಸ್ವಾಮೀಜಿಗಳ ಭಕ್ತರಾದ ಹಂಸಲೇಖ ಇತ್ತಿಚೆಗಷ್ಟೇ, ಕೆ.ಆರ್.ಐ.ಡಿ.ಎಲ್ ಅಧ್ಯಕ್ಷರಾದ ಎಂ.ರುದ್ರೇಶ್ ರವರ ಆಹ್ವಾನದ ಮೇರೆಗೆ ವೀರಾಪುರಕ್ಕೆ ಆಗಮಿಸಿದ್ದರು.

ಈ ಸಂದರ್ಭದಲ್ಲಿ ವೀರಾಪುರದಲ್ಲಿ ಸ್ವಂತ ಖರ್ಚಿನಲ್ಲಿ ದಾಸೋಹ ಭವನ ಅಥವಾ ಯಾತ್ರಿ ನಿವಾಸವನ್ನು ನಿರ್ಮಿಸಿಕೊಡುವುದಾಗಿ ತಿಳಿಸಿದರು. ಮುಂದುವರೆದು ಶಿವಕುಮಾರ ಸ್ವಾಮೀಜಿಗಳ ಹುಟ್ಟಿನಿಂದ ಲಿಂಗೈಕ್ಯದವರೆಗೆ ಒಂದು ಗೀತೆ ರಚಿಸಿ, ಸಂಗೀತ ನಿರ್ದೇಶನ ಮಾಡಿ ಲೋಕಾರ್ಪಣೆ ಮಾಡುತ್ತೇನೆ. ಅದು ಮುಂದಿನ ಪೀಳಿಗೆಯವರಿಗೂ ದಾರಿದೀಪವಾಗಿರಲಿ ಎಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ. ಬಹಳ ಮುತುವರ್ಜಿಯಿಂದ ಈ ಮಹತ್ಕಾರ್ಯವನ್ನ ನಿರ್ವಹಿಸುತ್ತಿರುವ ಕೆ.ಆರ್.ಐ.ಡಿ.ಎಲ್ ಅಧ್ಯಕ್ಷರಾದ ಎಂ‌.ರುದ್ರೇಶ್ ರವರನ್ನ ಮುಕ್ತ ಕಂಠದಿಂದ ಶ್ಲಾಘಿಸಿದರು.

ಗಾನಯೋಗಿ ಪಂಚಾಕ್ಷರಿ ಗವಾಯಿ, ಶ್ರೀ ಮಂಜುನಾಥ, ಮುಂತಾದ ಆಧ್ಯಾತ್ಮಿಕ ಸಿನಿಮಾಗಳಿಗೆ ಸಾಹಿತ್ಯ ಬರೆದು ಸಂಗೀತ ನಿರ್ದೇಶಿಸಿರುವ ಹಂಸಲೆಖ, ಸದ್ಯ ಶಿವಕುಮಾರ ಸ್ವಾಮೀಜಿಗಳ ಬಗ್ಗೆ ಬರೆಯುವ ಹಾಡು ಹೇಗಿರಲಿದೆ ಎಂಬುದೇ ಸದ್ಯದ ಕುತೂಹಲವಾಗಿದೆ. ಸದ್ಯದಲ್ಲೇ ಮಾಗಡಿ ತಾಲೂಕಿನ ವೀರಾಪುರ ಒಂದು ದಿವ್ಯ ಪ್ರವಾಸಿ ಸ್ಥಳವಂತೂ ಆಗುವುದು ಪಕ್ಕಾ ಆಗಿದೆ. ಹಂಸಲೇಖರವರ ಈ ಮಹತ್ಕಾರ್ಯದ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯವನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.