ಮುಖೇಶ್ ಅಂಬಾನಿ ಮೈಯಲ್ಲಿ ಅರೇಬಿಕ್ ರಕ್ತ ಹರಿಯುತ್ತಿದೆಯಂತೆ, ಇದೇನಪ್ಪ ಇದು ಅಚ್ಚರಿಯ ಬೆಳವಣಿಗೆ. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಅಂಬಾನಿ ಭಾರತ ಕಂಡ ಶ್ರೇಷ್ಠ ಉದ್ಯಮಿ. ಭಾರತ ಹಲವಾರು ರಂಗಗಳಲ್ಲಿ ತನ್ನ ಸ್ವಾಯುತ್ತತೆ ನಿರ್ಮಿಸಿಕೊಳ್ಳಲು ಅಂಬಾನಿಯವರ ಸಹಾಯ ಬೇಕಾಗಿತ್ತು. ರಿಲಯನ್ಸ್ ಎಂಬ ದೈತ್ಯ ಉದ್ಯಮ ಸ್ಥಾಪಿಸಿದ ಧೀರೂಭಾಯಿ ಅಂಬಾನಿ ಪುತ್ರ ರತ್ನರಾದ ಮುಖೇಶ್ ಅಂಬಾನಿ ಹಾಗೂ ಅನಿಲ್ ಅಂಬಾನಿ ಸಹ ಭಾರತದ ಪ್ರಸಿದ್ದ ಉದ್ಯಮಿಗಳೇ.

ಸದ್ಯ ಮುಖೇಶ್ ಅಂಬಾನಿಯವರ ಒಂದು ಹೇಳಿಕೆ ಈಗ ತೀವ್ರ ಸಂಚಲನ ಸೃಷ್ಠಿಸಿದೆ. ಕತಾರ್ ಎಕನಾಮಿಕ್ ಫೋರಂನ ಸಭೆಯಲ್ಲಿ ಮಾತನಾಡಿದ ಮುಖೇಶ್ ಅಂಬಾನಿ, ನನ್ನ ಮೈಯಲ್ಲಿ ಅರೇಬಿಕ್ ರಕ್ತ ಹರಿಯುತ್ತಿದೆ ಎಂದು ನಮ್ಮ ತಂದೆ ಧೀರೂಭಾಯಿ ಅಂಬಾನಿ ಸದಾ ಹೇಳುತ್ತಿದ್ದರು ಎಂದು ನೆನಪಿಸಿಕೊಂಡರು. ನಮ್ಮ ತಂದೆ-ತಾಯಿ ಯೆಮನ್ ಪ್ರವಾಸದಲ್ಲಿದಲ್ಲಿದಾಗ ನಾನು ಜನಿಸಿದ್ದೆ. ಹಾಗಾಗಿ ನನ್ನ ತಂದೆ ಸದಾ ನಿನ್ನ ಮೈಯಲ್ಲಿ ಅರೇಬಿಕ್ ರಕ್ತ ಹರಿಯುತ್ತಿದೆ ಎಂದು ಹೇಳುತ್ತಿದ್ದರು ಎಂದು ಹೇಳಿದರು. ನಮ್ಮ ಕುಟುಂಬ ಕತಾರ್ ಜೊತೆ ಉತ್ತಮ ಬಾಂಧವ್ಯ ಹೊಂದಿದೆ.

ಹಲವಾರು ಉದ್ಯಮಗಳನ್ನ ಸ್ಥಾಪಿಸಲು ಹಾಗೂ ಅದನ್ನ ಯಶಸ್ವಿಗೊಳಿಸಲು ಅರಬ್ ರಾಷ್ಟ್ರಗಳು ನಮಗೆ ಬಹಳಷ್ಟು ಸಹಾಯ ನೀಡಿವೆ ಎಂದು ತಿಳಿಸಿದರು. ಕ್ರೀಡೆ ಹಾಗೂ ಸಂಸ್ಕೃತಿಯಲ್ಲಿ ಕತಾರ್ ಮಾಡಿದ ಸಾಧನೆಗೆ ನನ್ನ ಪತ್ನಿ ನೀತಾ ಅಂಬಾನಿ ಹೆಮ್ಮೆ ಪಡುತ್ತಾಳೆ. ಮಗಳು ಸಹ ಕತಾರ್ ಫೌಂಡೇಶನ್ ಬಗ್ಗೆ ಹೆಮ್ಮೆ ಇಟ್ಟುಕೊಂಡಿದ್ದಾಳೆ ಎಂದು ಹೇಳಿದರು. ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ಮುಖೇಶ್ ಅಂಬಾನಿಯವರ ಈ ಹೇಳಿಕೆ ವೈರಲ್ ಆಗಿದ್ದು, ಹೇಳಿಕೆ ಬಗ್ಗೆ ತರೇಹವಾರಿ ಚರ್ಚೆಗಳು ಆರಂಭವಾಗಿವೆ. ಮುಖೇಶ್ ಅಂಬಾನಿಯವರ ಈ ಹೇಳಿಕೆ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.