ಮೀನಿನ ಮುಳ್ಳು ಸಿಕ್ಕಿಕೊಂಡರೆ ತಕ್ಷಣ ಜಸ್ಟ್ ಹೀಗೆ ಮಾಡಿ ಸಾಕು, ಒಂದೇ ಸೆಕೆಂಡ್ನಲ್ಲಿ ಹೊರಬರುತ್ತದೆ. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಸೀ ಫುಡ್ ಅಥವಾ ಮೀನು ನಾನ್ ವೆಜ್ ಪ್ರಿಯರ ಫೇವರೇಟ್. ಅದರಲ್ಲೂ ಕರಾವಳಿಯ ಕಡೆ ಕೋಳಿ ಹಂದಿ ಮಾಂಸಗಳಿಗಿಂತ ಹೆಚ್ಚಾಗಿ ಮೀನು ತಿನ್ನುವವರೆ ಹೆಚ್ಚು. ಮೀನು ಕೇವಲ ಬಾಯಿ ರುಚಿ ಮಾತ್ರವಲ್ಲ, ಅದರಲ್ಲಿ ಆರೋಗ್ಯಕರ ಪ್ರಯೋಜನಗಳೂ ಸಾಕಷ್ಟಿವೆ. ಮೀನಿನಲ್ಲಿ ಒಮೆಗ 3,ವಿಟಮಿನ್ ಗಳು ಇರುವುದರಿಂದ ದೇಹದಲ್ಲಿನ ಕೊಬ್ಬನ್ನು ಕರಗಿಸುತ್ತದೆ. ಇನ್ನು ಮೀನೆಣ್ಣೆಯನ್ನು ಔಷಧಿ ತಯಾರಿಕೆಯಲ್ಲಿ ಬಳಸುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಮೀನು ತಿನ್ನುವುದಕ್ಕೆ ಎಷ್ಟು ರುಚಿಯೂ ಅದರ ಮುಳ್ಳು ಬಾಯಲ್ಲಿ ಸಿಕ್ಕಿಹಾಕಿಕೊಂಡರೆ ಪಡಬಾರದ ಪಾಡು ಪಡಬೇಕು. ಯಾಕೆಂದರೆ ಇದನ್ನ ತೆಗೆಯುವುದು ಅಷ್ಟು ಸುಲಭವಲ್ಲ.

ಮೀನಿನ ಮುಳ್ಳು ಹೊಟ್ಟೆ ಸೇರಿದರೆ ಅಷ್ಟೇನು ಅಪಾಯವಿಲ್ಲ. ಏಕೆಂದರೆ ಹೊಟ್ಟೆಯಲ್ಲಿರುವ ಎಸಿಡ್ ಅಂಶ ಮುಳ್ಳುಗಳನ್ನು ಕರಗಿಸುತ್ತವೆ. ಆದರೆ ಕಿರು ನಾಲಿಗೆಯಲ್ಲಿ ಅಥವಾ ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡರೆ ಮಾತ್ರ ಎಚ್ಚರಿಕೆವಹಿಸಬೇಕು. ಅದರಲ್ಲೂ ಮಕ್ಕಳಿಗೆ ತಿನ್ನಲುಕೊಡುವಾಗ ಹೆಚ್ಚಿನ ಜಾಗ್ರತೆವಹಿಸಬೇಕು.

ಮೀನಿನ ಮುಳ್ಳು ತೆಗೆಯಲು ಸುಲಭ ಉಪಾಯಗಳು: ಕಿರುನಾಲಿಗೆಯಲ್ಲಿ ಸಿಲುಕಿಕೊಂಡರೆ: ಮೀನಿನ ಮುಳ್ಳು ಕಿರುನಾಲಿಗೆಗೆ ಸಿಕ್ಕಿಕೊಂಡರೆ ಮೊದಲು ಜೋರಾಗಿ ಉಸಿರು ಎಳೆದುಕೊಳ್ಳಿ. ನಂತರ ಇನ್ನೊಬ್ಬರು ಹಿಂದಿನಿಂದ ನಿಮ್ಮನ್ನು ಗಟ್ಟಿಯಾಗಿ ಅಪ್ಪಿಕೊಳ್ಳುವುದಕ್ಕೆ ಹೇಳಿ. ನಂತರ ಜೋರಾಗಿ ಉಸಿರುಬಿಡಿ. ಹೀಗೆ ಮಾಡಿದರೆ ಮುಳ್ಳು ಹೊರಗೆ ಬರುತ್ತದೆ. ಯೆರಣಾದನೇಯದಾಗಿ ಶ್ವಾಸನಾಳದಲ್ಲಿ ಸಿಲುಕಿಕೊಂಡರೆ: ಮೀನಿನ ಮುಳ್ಳು ಶ್ವಾಸನಾಳದಲ್ಲಿ ಸಿಲುಕಿಕೊಂಡರೆ, ಮೊದಲು ಬಾಯಿ ತೆರೆದು ನಿಲ್ಲಿ, ನಂತರ ಇನ್ನೊಬ್ಬರ ಬಳಿ ಬೆನ್ನಿನ ಮೇಲೆ ಬೊಗಸೆ ಕೈಗಳಿಂದ ಹೊಡೆಯಲು ಹೇಳಿ. ಹೀಗೆ ಮಾಡಿದಾಗ ಸಿಲುಕಿಕೊಂಡಿರುವ ಮುಳ್ಳು ಅಚೆಬರುವ ಸಾಧ್ಯತೆಗಳಿವೆ.

ಹೊಟ್ಟೆಯಲ್ಲಿ ಸಿಲುಕಿಕೊಂಡರೆ: ಇನ್ನು ಮೀನು ತಿನ್ನುವಾಗ ಮೀನಿನ ಮುಳ್ಳು ಕೂಡ ದೇಹವನ್ನು ಸೇರಿಕೊಂಡರೆ ಆ ದಿನ ಉಪವಾಸ ಇರುವುದು ಒಳ್ಳೆಯದು. ಆದರೆ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಸೇವಿಸಿ. ಈ ಎಲ್ಲ ವಿಧಾನಗಳಿಂದಲೂ ಪರಿಣಾಮವಾಗದೆ ಇದ್ದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ. ನಿರ್ಲಕ್ಷ ಮಾಡಬೇಡಿ.