ಕನ್ನಡ ರಿಯಾಲಿಟಿ ಶೋಗಳ ನಿರೂಪಕರು ಪಡೆಯುವ ಸಂಭಾವನೆ ಎಷ್ಟು ಗೊತ್ತಾ? ಅಬ್ಬಾ ಇಷ್ಟೊಂದಾ

ನಮಸ್ಕಾರ ಸ್ನೇಹಿತರೇ ಟಿವಿಯಲ್ಲಿ ಯಾವುದಾದರೂ ಒಂದು ಕಾರ್ಯಕ್ರಮ ನಡೆಯಬೇಕು ಎಂದ್ರೆ ಅಲ್ಲೊಬ್ಬ ನಿರೂಪಕ ಬೇಕೇಬೇಕು. ಆಗ ಮಾತ್ರ ಆ ಕಾರ್ಯಕ್ರಮ ಸರಿಯಾಗಿ ಜನರಿಗೆ ತಲುಪಿಸಲು ಸಾಧ್ಯ. ಮಾತುಗಾರಿಕೆ, ಭಾಷೆಯ ಮೇಲೆ ಹಿಡಿತ, ಹಾಸ್ಯ ಪ್ರವೃತ್ತಿ, ಅವರ ಸ್ಟೈಲ್, ಅವರ ಸ್ಮೈಲ್, ಉಡುಪು, ನಡವಳಿಕೆ ಇವೆಲ್ಲವೂ ಒಬ್ಬ ನಿರೂಪಕನಿಗೆ ಇರಬೇಕಾದ ಗುಣಗಳು. ಆಗ ಮಾತ್ರ ಜನರೂ ಅವರನ್ನು ಮೆಚ್ಚುತ್ತಾರೆ.

ಕನ್ನಡದ ಎಲ್ಲಾ ವಾಹಿನಿಗಳಲ್ಲಿ ಮೂಡಿಬರುವ ರಿಯಾಲಿಟಿ ಶೋಗಳಲ್ಲಿ ಬೇರೆ ಬೇರೆ ನಿರೂಪಕರು ಕಾರ್ಯಕ್ರಮ ನಿರೂಪಿಸುತ್ತಾರೆ. ಅಕುಲ್ ಬಾಲಾಜಿ, ನಟಿ ಲಕ್ಷ್ಮಿ, ಅನುಪಮ ಗೌಡ, ಅನುಶ್ರೀ, ಮಾ.ಆನಂದ್, ನಟ ಪುನೀತ್ ರಾಜಕುಮಾರ್, ರಮೇಶ್ ಅರವಿಂದ್, ಕಿಚ್ಚ ಸುದೀಪ್, ಶಿವಣ್ಣ, ಗೋಲ್ಡನ್ ಸ್ಟಾರ್ ಗಣೇಶ್ ಹೀಗೆ ಒಬ್ಬರ ಇಬ್ಬರ.. ಅನೇಕರು ತಮ್ಮ ವಿಭಿನ್ನ ನಿರೂಪಣಾ ಶೈಲಿಯಿಂದ ಕರ್ನಾಟಕ ಜನತೆಯ ಮನಗೆದ್ದಿದ್ದಾರೆ. ಹಾಗಾದರೆ ಇಷ್ಟೊಂದು ಕಾರ್ಯಕ್ರಮ ನಡೆಸುವ ನಿರೂಪಕರು ಎಷ್ಟು ಸಂಭಾವನೆ ಪಡೆಯಬಹುದು ಎಂಬ ಕುತೂಹಲ ನಿಮ್ಮೆಲ್ಲರಲ್ಲೂ ಇರಬಹುದಲ್ಲವೇ. ಇದಕ್ಕೆಲ್ಲ ಉತ್ತರಿಸುತ್ತೇವೆ ಕೇಳಿ.

ಮೊದಲನೆಯದಾಗಿ ಅಕುಲ್ ಬಾಲಾಜಿ- ವಿವಿಧ ವಾಹಿನಿಗಳಲ್ಲಿ ಅಕುಲ್ ನಿರೂಪಕರಾಗಿದ್ದರೆ. ಇವರಿಗೆ ಸಿಗುವ ಸಂಭಾವನೆ ದಿನಕ್ಕೆ 18 ಸಾವಿರ ರೂಪಾಯಿ. ಇನ್ನು ಲಕ್ಷ್ಮೀ ರವರು ಕಥೆಯಲ್ಲ ಜೀವನ ಶೋ ನಿರೂಪಕಿ. ಸಿಗುವ ಸಂಭಾವನೆ ದಿನಕ್ಕೆ 12 ಸಾವಿರ ರೂಪಾಯಿ. ಇನ್ನು ಅನುಶ್ರೀ ರವರು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಸರಿಗಮಪ ಶೋ ನಿರೂಪಕಿ. ಸಿಗುವ ಸಂಭಾವನೆ ಎಪಿಸೋಡ್ ಒಂದಕ್ಕೆ 25 ಸಾವಿರ ರೂಪಾಯಿಗಳು. ಮಾಸ್ಟರ್ ಆನಂದ್ ರವರ ಕುರಿತು ಮಾತನಾಡುವುದಾದರೆ ಕಾಮಿಡಿ ಕಿಲಾಡಿಗಳು, ಡ್ರಾಮಾ ಜ್ಯೂನಿಯರ್ಸ್ ನಿರೂಪಕ. ಸಿಗುವ ಸಂಭಾವನೆ ದಿನಕ್ಕೆ 20 ಸಾವಿರ ರೂಪಾಯಿಗಳು

ಇನ್ನು ಸೃಜನ್ ಲೋಕೇಶ್ ರವರು ಮಜಾ ಟಾಕೀಸ್ ನಿರೂಪಕರಿಗೆ ಸಿಗುವ ಸಂಭಾವನೆ ದಿನಕ್ಕೆ 45 ಸಾವಿರ ರೂಪಾಯಿಗಳು. ರಮೇಶ್ ಅರವಿಂದ್- ವೀಕೆಂಡ್ ವಿತ್ ರಮೇಶ್ ನಿರೂಪಕರಿಗೆ ಸಿಗುವ ಸಂಭಾವನೆ ಎಪಿಸೋಡ್ ಒಂದಕ್ಕೆ 75 ಸಾವಿರ ರೂಪಾಯಿಗಳು. ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಸೂಪರ್ ಮಿನಿಟ್ ರಿಯಾಲಿಟಿ ಶೋ ನಿರೂಪಕರಿಗೆ ಸಿಗುವ ಸಂಭಾವನೆ 1,10,000 ರೂಪಾಯಿಗಳು. ಪುನೀತ್ ರಾಜ್ ಕುಮಾರ್ ಕನ್ನಡದ ಕೋಟ್ಯಾಧಿಪತಿ ಶೋ ನಿರೂಪಕರಿಗೆ ಸಿಗುವ ಸಂಭಾವನೆ 3.24,00 ಸಾವಿರ ರೂಪಾಯಿ. ಇನ್ನು ಕಿಚ್ಚ ಸುದೀಪ್ ಬಿಗ್ ಬಾಸ್ ನಿರೂಪಣೆಗೆ ಪಡೆಯುವ ಸಂಭಾವನೆ ದಿನಕ್ಕೆ ಅಂದಾಜು 5ಲಕ್ಷ ರೂಪಾಯಿಗಳು. ಇವು ಒಂದು ಅಂದಾಜಿನ ಮೊತ್ತವಾಗಿದೆ. ನಿರೂಪಣೆ ಸುಲಭವಾಗಿ ಎಲ್ಲರಿಗೂ ಮಾಡಲು ಬರುವುದಿಲ್ಲ. ಹಾಗಾಗಿ ಅವರಿಗೆ ಅಧಿಕ ಸಂಭಾವನೆ ನೀಡಲೇಬೇಕು.