ಸ್ನೇಹಿತನ ಬೆಂಬಲಕ್ಕೆ ನಿಂತರೇ ಸೃಜನ್ ಲೋಕೇಶ್, ಇಂದ್ರಜಿತ್ ಲಂಕೇಶ್ ರವರಿಗೆ ಮೊದಲ ಶಾಕ್, ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಸದ್ಯ ಕನ್ನಡ ಕಿರುತೆರೆಯ ಅತ್ಯಂತ ಯಶಸ್ವಿ ಕಾಮಿಡಿ ಶೋ ಎಂದರೇ ಅದು ಮಜಾ ಟಾಕೀಸ್. ಲೋಕೇಶ್ ಪ್ರೋಡಕ್ಷನ್ಸ್ ಅಡಿ ತಯಾರಾದ ಈ ನಗೆಬುಗ್ಗೆ ಮಜಾ ಟಾಕೀಸ್ ಗೆ ನಟ ಸೃಜನ್ ಲೋಕೇಶ್ ರವರೇ ಬೆನ್ನೆಲುಬು. ಹಿಂದಿಯ ಕಾಮಿಡಿ ವಿತ್ ಕಪಿಲ್ ಶೋ ನ ಯಥಾವತ್ತು ನಕಲೇ, ಕನ್ನಡದಲ್ಲಿ ಮಜಾ ಟಾಕೀಸ್ ಎಂದು ಹೇಳಬಹುದು. ವೀಕೇಂಡ್ ನಲ್ಲಿ ಪ್ರಸಾರವಾಗುತ್ತಿದ್ಧ ಈ ಕಾರ್ಯಕ್ರಮದಲ್ಲಿ ನಟಿ ಶ್ವೇತಾ ಚೆಂಗಪ್ಪ, ಕುರಿ ಪ್ರತಾಪ್, ಅಪರ್ಣಾ, ಪವನ್, ಗಾಯಕಿ ರೆಮೋ, ಕಾಮಿಡಿ ಕಿಲಾಡಿ ನಯನಾ, ವಿಶ್ವ, ಮಂಡ್ಯ ರಮೇಶ್ ಹೀಗೆ ಇನ್ನು ಹಲವಾರು ಪ್ರಮುಖರು ಅಭಿನಯಿಸುತ್ತಿದ್ದರು. ಈ ಕಾರ್ಯಕ್ರಮದ ಮುಖ್ಯ ಜಡ್ಜ್ ಆಗಿ ಇಂದ್ರಜಿತ್ ಲಂಕೇಶ್ ಸಹ ಇದ್ದರು. ಅವರನ್ನ ಕಾಲೆಳೆಯೋ ಏಪಿಸೋಡುಗಳು ಹೆಚ್ಚು ಜನಪ್ರಿಯತೆ ಪಡೆದಿದ್ದವು.

ಸೃಜನ್ ಲೋಕೇಶ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಬ್ಬರೂ ಚಡ್ಡಿದೋಸ್ತಿಗಳು. ದರ್ಶನ್ ಅಭಿನಯಿಸುವ ಎಲ್ಲಾ ಸಿನಿಮಾಗಳಲ್ಲಿಯೂ ಸಹ ಸೃಜನ್ ಲೋಕೆಶ್ ಗೊಂದು ಪಾತ್ರ ಸದಾ ಇರುತ್ತದೆ. ಸೃಜನ್ ಲೋಕೇಶ್ ಸಿನಿಮಾಗಳು ಹಿಟ್ ಆಗದಿದ್ದಾಗ ಅವರಿಗೆ ಹೊಳೆದದ್ದೇ ಕಿರುತೆರೆಯ ಈ ಕಾಮಿಡಿ ಷೋ. ಆದರೇ ಅದನ್ನ ನಿರ್ಮಾಣ ಮಾಡಲು ಅವರ ಬಳಿ ಹಣವಿಲ್ಲದಿದ್ದಾಗ ಅಂದು ಸಹಾಯ ಮಾಡಿದ್ದೂ ಬೇರಾರೂ ಅಲ್ಲ, ಇದೇ ಚಾಲೆಂಜಿಂಗ್ ಸ್ಟಾರ್ ದರ್ಶನ್. ಅಂದು ಒಬ್ಬರಿಂದ ಶುರುವಾದ ಮಜಾ ಟಾಕೀಸ್ ನಲ್ಲಿ ಇಂದು 300 ಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದಾರೆ ಎಂದರೇ ಅದು ಅತಿಶಯೋಕ್ತಿ ಅಲ್ಲ. ಹೀಗಾಗಿ ಸೃಜನ್ ಗೆ ಜೀವದ ಗೆಳೆಯರು ಯಾರಾದರೂ ಇದ್ದಾರೆಂದರೇ ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಮಾತ್ರ.

ಈ ಕಾರ್ಯಕ್ರಮದ ಮುಖ್ಯ ಜಡ್ಜ್ ಆಗಿದ್ದ ಇಂದ್ರಜಿತ್ ಲಂಕೇಶ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ದ ಮಾಧ್ಯಮಗಳಲ್ಲಿ ಬಹಿರಂಗವಾಗಿ ಹಲವಾರು ಆರೋಪಗಳ ಸುರಿಮಳೆಗೈದಿದ್ದರು. ಕೊನೆಗೆ ಇದು ದರ್ಶನ್ ಹಾಗೂ ಇಂದ್ರಜಿತ್ ನಡುವೆ ತೂ ತೂ ಮೈ ಮೈ ಗೂ ಕಾರಣವಾಗಿತ್ತು. ಇಂದ್ರಜಿತ್ ಅವರಪ್ಪನಿಗೆ ಹುಟ್ಟಿದ್ದರೇ ಸಾಬೀತು ಮಾಡಲಿ ಎಂಬ ಮಾತು ಸಹ ಕೇಳಿ ಬಂದಿತು. ಈ ಘಟನೆಯ ನಂತರ ದರ್ಶನ್ ಹಾಗೂ ಇಂದ್ರಜಿತ್ ಲಂಕೇಶ್ ರವರ ನಡುವಿನ ಸಂಭಂದವೂ ಸಹ ಹಳಸಿತು.

ಈಗ ಮಜಾ ಟಾಕೀಸ್ ನ ಸೀಸನ್ ಮುಗಿದಿದ್ದು, ಸೃಜನ್ ಲೋಕೇಶ್ ಸೂಪರ್ ಜೋಡಿ ಎಂಬ ಕಾರ್ಯಕ್ರಮದಲ್ಲಿ ಜಡ್ಜ್ ಆಗಿದ್ದಾರೆ. ಅಲ್ಲಿ ಇವರಿಗೆ ಕನ್ನಡದ ಹಿರಿಯ ನಟಿ ತಾರಾ ಅನುರಾಧ ಸಾಥ್ ನೀಡುತ್ತಿದ್ದಾರೆ. ಸೃಜನ್ ಲೋಕೆಶ್ ರವರ ಆಪ್ತ ಗೆಳೆಯ ದರ್ಶನ್ ವಿರುದ್ದ ಇಂದ್ರಜಿತ್ ಲಂಕೇಶ್ ಆರೋಪ ಮಾಡಿರುವ ಕಾರಣ, ಮುಂದಿನ ಸಂಚಿಕೆಗಳಲ್ಲಿ ಇಂದ್ರಜಿತ್ ಲಂಕೇಶ್ ರನ್ನ ಆ ತಂಡದಿಂದ ಹೊರಹಾಕಲಾಗಿದೆ. ಇಂದ್ರಜಿತ್ ಲಂಕೇಶ್ ಜಾಗಕ್ಕೆ ಮಿಮಿಕ್ರಿ ದಯಾನಂದ್ ಅಥವಾ ನಟಿ ತಾರಾ ಅನುರಾಧ ಬರುವ ಸಾಧ್ಯತೆ ಇದೆ ಎಂದು ಮಜಾ ಟಾಕೀಸ್ ನ ಮೂಲಗಳು ಹೇಳುತ್ತಿವೆ. ಮಜಾ ಟಾಕೀಸ್ ನಲ್ಲಿ ಇಂದ್ರಜೀತ್ ಲಂಕೇಶ್ ಸ್ಥಾನಕ್ಕೆ ಯಾರು ಬರಬೇಕು ಎಂಬ ನಿಮ್ಮ ಆಯ್ಕೆಯನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.