ಖ್ಯಾತ ಯುವ ಗಾಯಕಿ ಆಶಾ ಭಟ್ ರವರು ಬಿಗ್ ಬಾಸ್ ಸ್ಪರ್ದಿಯ ಪರ ಪ್ರಚಾರ ಮಾಡಿದ್ದು ಯಾರ ಪರವಾಗಿ ಗೊತ್ತೇ??

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಈಗಾಗಲೇ ಫೈನಲ್ ಹಂತಕ್ಕೆ ಬಂದು ನಿಂತಿದೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಬಿಗ್ ಬಾಸ್ ಅನ್ನು ಯಾರು ಗೆಲ್ಲಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ. ಎಲ್ಲರೂ ತಮ್ಮ ತಮ್ಮ ನೆಚ್ಚಿನ ಸ್ಪರ್ಧಿಗಳಿಗೆ ಬೆಂಬಲವನ್ನು ನೀಡಲು ಸಿದ್ಧರಾಗಿದ್ದಾರೆ. ನೆನ್ನೆ ಹಾಗೂ ಮೊನ್ನೆಯಷ್ಟೇ ಬಿಗ್ ಬಾಸ್ ಅನ್ನು ಗೆಲ್ಲುವ ಮಹತ್ವಾಕಾಂಕ್ಷೆ ಗಳಾಗಿದ್ದ ನಟಿ ಶುಭಾ ಪೂಂಜಾ ಹಾಗೂ ಶಮಂತ್ ಬ್ರೋ ಗೌಡ ಇಬ್ಬರು ಕೂಡ ಈಗಾಗಲೇ ಮನೆಯಿಂದ ಎಲಿಮಿನೇಟ್ ಆಗಿ ಹೊರಹೋಗಿದ್ದಾರೆ.

ಇನ್ನು ಈಗಾಗಲೇ ನಾಳೆ ಒಂದು ಎಲಿಮಿನೇಷನ್ ಆಗುವ ಪೂರ್ಣ ಸಾಧ್ಯತೆ ಇದ್ದು ಫೈನಲ್ಗೆ ಟಾಪ್ 5 ಕಂಟೆಸ್ಟೆಂಟ್ ಗಳನ್ನು ಆರಿಸುವ ಎಲ್ಲ ಸಾಧ್ಯತೆ ಇದೆ. ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಮಂಜು ಪಾವಗಡ ಪ್ರಶಾಂತ್ ಸಂಬರ್ಗಿ ವೈಷ್ಣವಿ ಗೌಡ ಹೀಗೆ ಹಲವಾರು ಮಂದಿ ಗೆಲ್ಲುವ ಹೆಸರಿನಲ್ಲಿ ಮುಂಚೂಣಿಯಲ್ಲಿ ಕಾಣಿಸಿ ಕೊಂಡಿದ್ದಾರೆ. ಬಿಗ್ ಬಾಸ್ ಮನೆಯ ಹೊರಗಡೆ ಇವರ ಬೆಂಬಲಿಗರು ಸಾಕಷ್ಟು ವಿವಿಧ ಹಾಗೂ ವೈವಿಧ್ಯಮಯ ರೀತಿಯಲ್ಲಿ ಇವರ ಪರವಾಗಿ ಪ್ರಚಾರ ಆರಂಭಿಸಿದ್ದಾರೆ. ಇದರಲ್ಲಿ ಜೀ ಕನ್ನಡ ವಾಹಿನಿಯ ಸರಿಗಮ ಖ್ಯಾತಿಯ ಪ್ರತಿಭಾನ್ವಿತ ಗಾಯಕಿ ಆಶಾ ಭಟ್ ರವರು ಯಾರ ಪರವಾಗಿ ಬೆಂಬಲ ಸೂಚಿಸಿದ್ದಾರೆ ಗೊತ್ತಾ ಸ್ನೇಹಿತರೆ.

ಹೌದು ಸ್ನೇಹಿತರೆ ಗಾಯಕಿ ಆಶಾ ಭಟ್ ರವರು ಕೂಡ ಬಿಗ್ ಬಾಸ್ ಸ್ಪರ್ಧೆ ಒಬ್ಬರ ಕುರಿತಂತೆ ಬೆಂಬಲ ಸೂಚಿಸಿದ್ದಾರೆ. ಹೌದು ಬಿಗ್ ಬಾಸ್ ನಲ್ಲಿ ಈಗಾಗಲೇ ಗೆಲ್ಲುವ ಕುದುರೆ ಆಗಿರುವ ಪ್ರಶಾಂತ್ ಸಂಬರ್ಗಿ ಅವರು ಮೊದಲಿನಿಂದಲೂ ಆಶಾ ಭಟ್ ರವರ ಕುಟುಂಬಕ್ಕೆ ಪರಿಚಿತರಾಗಿದ್ದು ಪ್ರಶಾಂತ್ ಸಂಬರ್ಗಿ ಅವರ ಕುರಿತಂತೆ ಆಶಾ ಭಟ್ ರವರು ಬೆಂಬಲದ ಮಾತುಗಳನ್ನಾಡಿ ವಿಡಿಯೋ ಮಾಡಿದ್ದಾರೆ, ವಿಡಿಯೋವನ್ನು ನೀವು ಈ ಕೆಳಗಡೆ ನೋಡಬಹುದಾಗಿದೆ. ಈ ಬಾರಿ ಹಲವಾರು ಅಭ್ಯರ್ಥಿಗಳ ಪರವಾಗಿ ಹಲವಾರು ಮಂದಿ ಸೆಲೆಬ್ರಿಟಿಗಳು ವಿಡಿಯೋ ಮೂಲಕ ಬೆಂಬಲ ಸೂಚಿಸಿದ್ದು ಈ ಬಾರಿ ಗೆಲ್ಲಬಹುದು ಎಂಬುದನ್ನು ನೀವು ಕೂಡ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಊಹೆ ಮಾಡಬಹುದು.