ಅಭಿಮಾನಿಗಳ ಮನೆಯಲ್ಲಿ ಡಿ ಬಾಸ್ ಹೇಗೆ ಇರ್ತಾರೆ ಗೊತ್ತಾ?? ನೀವೇ ನೋಡಿ ವಿಡಿಯೋ ಸಮೇತ.

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಅದೆಷ್ಟೋ ಜನ ಯಶಸ್ವಿ ನಟರು ಇರಬಹುದು ಆದರೆ ಮಾಸ್ ಅಭಿಮಾನಿಗಳೆಂದು ಬಂದಾಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಮೀರಿಸುವ ಮತ್ತೊಬ್ಬ ನಟ ಕನ್ನಡ ಚಿತ್ರರಂಗದಲ್ಲಿ ಸಿಗೋದು ಅನುಮಾನವೇ. ಹೌದು ಸ್ನೇಹಿತರೆ ಕನ್ನಡದ ಸ್ಟಾರ್ ಖಳನಟನ ಮಗನಾಗಿದ್ದರೂ ಸಹ ತಮ್ಮ ತಂದೆ ಹೆಸರು ಉಪಯೋಗಿಸಿಕೊಳ್ಳದೇ ಸ್ವಂತ ಪರಿಶ್ರಮದ ಮೂಲಕ ಲೈಟ್ ಬಾಯ್ ಆಗಿ ಮೊದಲಿಗೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಮೂಲಕ ಇಂದು ತಮ್ಮ ಕಷ್ಟ ಹಾಗೂ ಅವಮಾನಗಳ ಮೆಟ್ಟಿ ನಿಂತು ಕನ್ನಡ ಚಿತ್ರರಂಗದ ಅತ್ಯಂತ ದೊಡ್ಡ ಸೂಪರ್ಸ್ಟಾರ್ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದಾರೆ.

ಇದಕ್ಕಾಗಿ ಅವರ ಅಭಿಮಾನಿಗಳು ಇಂದಿಗೂ ಕೂಡ ಆ ದರ್ಶನ್ ರವರು ಏನೇ ಸಮಸ್ಯೆಗಳನ್ನು ಎದುರಿಸಲು ಅವರ ಹಿಂದೆ ಬೆಟ್ಟದ ಪ್ರೀತಿಯಲ್ಲಿ ಬೆಂಗಾವಲಾಗಿ ನಿಲ್ಲುತ್ತಾರೆ. ಇನ್ನು ಅಭಿಮಾನಿಗಳನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಸೆಲೆಬ್ರಿಟಿಗಳು ಎನ್ನುತ್ತಾರೆ. ಹಿಂದೆಯಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಾವು ಕಾರಿನಲ್ಲಿ ಡ್ರೈವಿಂಗ್ ಮಾಡುತ್ತಿದ್ದಾಗ ಅಭಿಮಾನಿಗಳಿಗೆ ಮಾಡಬೇಡಿ ಎಂದು ಪ್ರೀತಿಯಿಂದಲೇ ಎಚ್ಚರಿಕೆ ನೀಡಿದ್ದ ವಿಡಿಯೋ ವೈರಲ್ ಆಗಿತ್ತು.