ಕೊನೆಯ ಕ್ಷಣದಲ್ಲಿ ಇಂಜುರಿ ಮಾಡಿಕೊಂಡ ಕನ್ನಡಿಗ, ಇಂಗ್ಲೆಂಡ್ ವಿರುದ್ದ ಆಡಲಿರುವ ಭಾರತದ ಹನ್ನೊಂದು ಆಟಗಾರರು ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ಭಾರತ-ಇಂಗ್ಲೆಂಡ್ ವಿರುದ್ದ ಐದು ಟೆಸ್ಟ್ ಪಂದ್ಯಗಳನ್ನ ಆಡುತ್ತಿರುವುದು ನಿಮ್ಮ ಗಮನಕ್ಕೆ ಬಂದಿರುತ್ತದೆ. ನ್ಯೂಜಿಲೆಂಡ್ ಎದುರು ವಿಶ್ವಟೆಸ್ಟ್ ಚಾಂಪಿಯನ್ ಶಿಪ್ ಆಡಲು ಇಂಗ್ಲೆಂಡ್ ಗೆ ತೆರಳಿದ್ದ ಭಾರತ ತಂಡ, ಆ ಸರಣಿ ಮುಗಿದ ನಂತರ ಇಂಗ್ಲೆಂಡ್ ನಲ್ಲಿಯೇ ಬೀಡು ಬಿಟ್ಟಿತ್ತು. ಅಲ್ಲಿನ ಕೌಂಟಿ ತಂಡದ ವಿರುದ್ದ ತ್ರಿದಿನ ಅಭ್ಯಾಸ ಪಂದ್ಯ ಆಡಿದ್ದ ಭಾರತ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಇದೇ ಆಗಸ್ಟ್ 4 ರಿಂದ ಭಾರತ ಇಂಗ್ಲೆಂಡ್ ವಿರುದ್ದ ಮೊದಲ ಟೆಸ್ಟ್ ಪಂದ್ಯ ಆಡಲಿದೆ.

ಈ ಮಧ್ಯೆ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತೀಯ ಆಟಗಾರರು ಒಂದಾದ ಮೇಲಂತೆ ಒಂದರಂತೆ ಗಾಯಗಳಿಗೆ ತುತ್ತಾಗುತ್ತಿದ್ದಾರೆ. ಈ ಹಿಂದೆ ಆರಂಭಿಕ ಬ್ಯಾಟ್ಸಮನ್ ಶುಭಮಾನ್ ಗಿಲ್, ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಗಾಯಕ್ಕೀಡಾಗಿ ಸರಣಿಯಿಂದಲೇ ಹೊರಬಿದ್ದಿದ್ದರು. ಅವರ ಬದಲೀ ಆಟಗಾರರಾಗಿ ಸೂರ್ಯ ಕುಮಾರ್ ಯಾದವ್, ಪೃಥ್ವಿ ಶಾ, ಜಯಂತ್ ಯಾದವ್ ರನ್ನ ಬಿಸಿಸಿಐ ಈಗಾಗಲೇ ಇಂಗ್ಲೆಂಡ್ ಗೆ ಕಳುಹಿಸಿದೆ. ಸದ್ಯ ಈಗ ಆಗಿರುವುದು ಸಾಲದಂತೆ, ಭಾರತ ತಂಡದ ಆರಂಭಿಕ ಬ್ಯಾಟ್ಸಮನ್ ಆಗಿದ್ದ ಕನ್ನಡಿಗ ಮಯಾಂಕ್ ಅಗರ್ ವಾಲ್, ನೆಟ್ಸ್ ನಲ್ಲಿ ಅಭ್ಯಾಸ ಮಾಡುತ್ತಿದ್ದಾಗ, ಮಹಮದ್ ಸಿರಾಜ್ ಎಸೆತದಲ್ಲಿ ಇಂಜುರಿ ಗೊಂಡಿದ್ದಾರೆ.

ಸಿರಾಜ್ ಬೌನ್ಸರ್ ಎಸೆತ ಮಯಾಂಕ್ ಅಗರವಾಲ್ ರವರ ಹೆಲ್ಮೇಟ್ ಗೆ ಜೋರಾಗಿ ತಾಕಿದ ಕಾರಣ ಅವರನ್ನ ಸ್ಕ್ಯಾನಿಂಗ್ ಗೆ ಒಳಪಡಿಸಲಾಗಿತ್ತು. ಅದರಲ್ಲಿ ಅವರು ಮೊದಲ ಟೆಸ್ಟ್ ಗೆ ಅಲಭ್ಯರಾಗಿದ್ದಾರೆ ಎಂಬ ಮಾಹಿತಿಯನ್ನ ಟೀಂ ಇಂಡಿಯಾ ಹಂಚಿಕೊಂಡಿದೆ. ಹೀಗಾಗಿ ಈಗ ರೋಹಿತ್ ಶರ್ಮಾ ಜೊತೆ ಕೆ.ಎಲ್.ರಾಹುಲ್ ಮುಂಬರುವ ಟೆಸ್ಟ್ ನಲ್ಲಿ ಇನ್ನಿಂಗ್ಸ್ ಆರಂಭಿಸಬೇಕಾಗಿದೆ. ಈ ಹಿಂದೆ ಇಂಗ್ಲೆಂಡ್ ಸರಣಿಯಲ್ಲಿ ಇನ್ನಿಂಗ್ಸ್ ಆರಂಭಿಸಿದ ರಾಹುಲ್ ಗೆ ಬಹಳ ವರ್ಷಗಳ ನಂತರ ಮತ್ತೊಮ್ಮೆ ದೊಡ್ಡ ಜವಾಬ್ದಾರಿ ಲಭಿಸಿದೆ‌. ಇಂಗ್ಲೆಂಡ್ ವಿರುದ್ದ ಆಡಲಿರುವ ಭಾರತದ ಹನ್ನೊಂದು ಆಟಗಾರರ ತಂಡ ಇಂತಿದೆ.

ಕೆ.ಎಲ್.ರಾಹುಲ್, ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ, ವಿರಾಟ್ ಕೋಹ್ಲಿ, ಅಜಿಂಕ್ಯಾ ರಹಾನೆ, ಹನುಮ ವಿಹಾರಿ,ರಿಷಭ್ ಪಂತ್, ಆರ್.ಅಶ್ವಿನ್, ಉಮೇಶ್ ಯಾದವ್, ಮಹಮದ್ ಶಮಿ, ಇಶಾಂತ್ ಶರ್ಮಾ.