ನಿಮ್ಮ ತ್ವಚೆಯಲ್ಲಿನ ಕಪ್ಪು ಕಲೆಗಳನ್ನು ತೆಗೆಯಲು ಪುದಿನ ಸೊಪ್ಪಿನಿಂದ ಜಸ್ಟ್ ಹೀಗೆ ಮಾಡಿ ಸಾಕು. ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಪುದೀನಾ ಎಂದರೆ ಒಂದು ಪರಿಮಳ ನೆನಪಾಗುತ್ತದೆಯಲ್ವೇ? ಹೌದು ಸ್ನೇಹಿತರೆ ಪುದೀನಾ ವಿಶೇಷವಾದ ರುಚಿಯನ್ನು ಹೊಂದಿರುವಂಥ ಒಂದು ಸೊಪ್ಪು. ಪುದೀನಾವನ್ನು ದಿನನಿತ್ಯದ ಅಡುಗೆಗಳಲ್ಲಿ, ಪಾನೀಯ ತಯಾರಿಕೆಯಲ್ಲಿ, ಚಹ, ಜ್ಯೂಸ್ ಹೀಗೆ ಹಲವಾರು ವಿಷಯಗಳಿಗೆ ಪುದೀನಾವನ್ನು ಬಳಸುತ್ತೇವೆ. ಪುದೀನಾ ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ. ಹಾಗಾಗಿ ಸಾಕಷ್ಟು ಔಷಧಿಗಳ ತಯಾರಿಕೆಯಲ್ಲಿ ಪುದೀನಾವನ್ನು ಬಳಸುತ್ತಾರೆ. ಪುದೀನಾ ದೇಹದ ಆರೋಗ್ಯವನ್ನು ಒಳಗಡೆಯಿಂದ ರಕ್ಷಿಸುವುದು ಮಾತ್ರವಲ್ಲ ದೇಹದ ಹೊರಭಾಗದಲ್ಲಿ ಅಂದರೆ ತ್ಚಚೆಯ ರಕ್ಷಣೆಗೂ ಕೂಡ ತುಂಬಾನೇ ಉಪಯುಕ್ತ.

ಪುದೀನಾವನ್ನು ತ್ಚಚೆಗೆ ಬಳಸುವ ಹಲವು ಸೌದರ್ಯವರ್ಧಕಗಳಲ್ಲಿ ಬಳಸಲಾಗುತ್ತದೆ. ಫೇಸ್ ಪ್ಯಾಕ್, ಫೇಸ್ ಮಾಸ್ಕ್, ಫೇಸ್ ವಾಶ್ ಹೀಗೆ ಪ್ರತಿಯೊಂದರಲ್ಲೂ ಪುದೀನಾವನ್ನು ಒಂದು ಮುಖ್ಯ ಪದಾರ್ಥವಾಗಿ ಬಳಸಲಾಗುತ್ತದೆ. ಪುದೀನಾ ಎಲೆ ತ್ವಚೆಗೆ ತುಂಬಾನೇ ಒಳ್ಳೆಯದು. ಪುದೀನಾ ರಾವನ್ನು ಆಗಾಗ್ಗೆ ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿನ ಕಲೆಗಳು ಕ್ರಮೇಣ ಮಾಯವಾಗುತ್ತದೆ. ಜೊತೆಗೆ ಮುಖವೂ ಕೂಡ ಕಾಂತಿಯುತವಾಗುತ್ತದೆ.

ಮುಖದಲ್ಲಿನ ಮೊಡವೆಗಳಿಗೆ ನಮ್ಮ ತ್ವಚೆಯಲ್ಲಿರುವ ಎಣ್ಣೆಯ ಅಂಶ ಕಾರಣವಾಗುತ್ತದೆ. ಹಾಗಾಗಿ ವಿಟಮಿನ್ ಅಂಶ ಅಧಿಕವಾಗಿರುವ ಪುದೀನಾ ಪೇಸ್ಟ್ ತಯಾರಿಸಿ ಮುಖಕ್ಕೆ ಹಚ್ಚಿ, ನಂತರ ಹತ್ತು ನಿಮಿಷಗಳ ಕಾಲ ಹಾಗೆಯೇ ಬಿಟ್ಟು ಮುಖ ತೊಳೆದರೆ ಮುಖಕ್ಕೆ ಮೊಡವೆ ಬಾರದಂತೆ ತಡೆಯಬಹುದು. ಸ್ನೇಹಿತರೆ, ತ್ವಚೆಯನ್ನು ಹೈಡ್ರೇಟ್ ಮಾಡುವ ಶಕ್ತಿ ಕೂಡ ಪುದೀನಾದಲ್ಲಿದೆ. ಪುದೀನಾ ಪೇಸ್ಟ್ ನ್ನು ತ್ವಚೆಗೆ ಹಚ್ಚುವುದರಿಂದ ಚರ್ಮದ ಸುಕ್ಕುಗಳೂ ಕೂಡ ನಿವಾರಣೆಯಾಗುತ್ತವೆ. ವಾರದಲ್ಲಿ 3 ದಿನವಾದರೂ ಹೀಗೆ ಮಾಡಿದರೆ ತ್ವಚೆಯ ಆರೋಗ್ಯಕ್ಕೆ ಉತ್ತಮ.

ಇಷ್ಟೇ ಅಲ್ಲ, ಪುದೀನಾದಿಂದ ಕಣ್ಣಿನ ಕೆಳಗೆ ಮೂಡುವ ಕಪ್ಪು ಕಲೆಯನ್ನೂ ಕೂಡ ತೆಗೆಯಬಹುದು. ಒತ್ತಡ ಹೆಚ್ಚಾದರೆ, ನಿದ್ದೆ ಬಾರದಿದ್ದರೆ ಕಣ್ಣಿನ ಕೆಳಗೆ ಡಾರ್ಕ್ ಸರ್ಕಲ್ ಗಳಾಗುತ್ತವೆ. ಇದರ ನಿವಾರಣೆಗೆ ಕಣ್ಣಿನ ಕೆಳಗೆ ಪುದೀನಾ ಪೇಸ್ಟ್ ಹಚ್ಚಿ ಹಾಗೆಯೇ ಬಿಟ್ಟು ಸ್ವಲ್ಪ ಸಮಯದ ನಂತರ ತೊಳೆದುಕೊಳ್ಳಬೇಕು. ವಾರದಲ್ಲಿ ನಾಲೈದು ಬಾರಿ ಹೀಗೆ ಮಾಡುವುದರಿಂದ ಡಾರ್ಕ್ ಸರ್ಕಲ್ ನಿವಾರಣೆಯಾಗುತ್ತದೆ. ಇಷ್ಟೇಲ್ಲ ಪ್ರಯೋಜನಗಳಿರುವ ಪುದೀನಾವನ್ನು ಆಗಾಗ ಬಳಸಿ ಉತ್ತಮ ಪ್ರಯೋಜನವನ್ನು ಪಡೆದುಕೊಳ್ಳಿ.