ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದ ಶಮಂತ್ ಗೌಡ ಹಾಗೂ ಶುಭ ಅವರಿಗೆ ದೊರಕಿದಂತಹ ಸಂಭಾವನೆ ಎಷ್ಟು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯ ರಂಗಿನ ಮನೆ ಎಂದೇ ಪ್ರಸಿದ್ಧವಾಗಿರುವ ಬಿಗ್ ಬಾಸ್ ಈ ಬಾರಿಯ ಸೀಜನ್ ಸಾಕಷ್ಟು ಯಶಸ್ವಿಯಾಗಿ ಈಗ ತನ್ನ ಕೊನೆಯ ಚರಣದ ಪಯಣ ಬೆಳೆಸಿದೆ. ಹೌದು ಸ್ನೇಹಿತರೆ ಲಾಕ್ ಡೌನ್ ನ ನಂತರ ಮರು ಪ್ರಾರಂಭ ವಾದಂತಹ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ಈಗ ಫಿನಾಲೆ ಹಂತಕ್ಕೆ ಬಂದು ತಲುಪಿದೆ. ಇನ್ನು ಈಗಾಗಲೇ ಬಿಗ್ ಬಾಸ್ ಫೈನಲ್ ಹಂತಕ್ಕೆ ತಲುಪುವ ಅಭ್ಯರ್ಥಿಗಳ ಕುರಿತಂತೆ ಪ್ರೇಕ್ಷಕರಿಗೆ ಸಾಕಷ್ಟು ಮಟ್ಟಿಗೆ ಗೊತ್ತಾಗಿದೆ. ಹೌದು ಸ್ನೇಹಿತರೆ ಶನಿವಾರ ಬಿಗ್ ಬಾಸ್ ಮನೆಯಿಂದ ನಟಿ ಶುಭಾ ಪೂಂಜಾ ರವರು ಎಲಿಮಿನೇಟ್ ಆಗಿ ಹೊರನಡೆದರೆ, ಇತ್ತ ಭಾನುವಾರ ಬ್ರೋ ಗೌಡ ಖ್ಯಾತಿಯ ಶಮಂತ್ ರವರು ಕೂಡ ಎಲಿಮಿನೇಟ್ ಆಗಿ ಹೊರನಡೆದಿದ್ದಾರೆ.

ಇನ್ನು ಈಗಾಗಲೇ ಇನ್ನು ಒಂದು ಎಲಿಮಿನೇಷನ್ ಬಾಕಿ ಇದ್ದು ಫೈನಲಿಗೆ ತಲುಪುವ ಅದೃಷ್ಟವಂತರು ನಾಳೆ ಒಳಗಡೆ ತಿಳಿಯಲಿದೆ. ಇನ್ನು ಈ ಬಿಗ್ ಬಾಸ್ ನಿಂದಾಗಿ ಶುಭ ಪೂಜಾ ರವರ ಬಗ್ಗೆ ಇದ್ದಂತಹ ತಪ್ಪು ಕಲ್ಪನೆಗಳೆಲ್ಲ ಮಾಯವಾಗಿ ಅವರ ಕುರಿತಂತೆ ಜನರಿಗೆ ಸಾಕಷ್ಟು ಗೌರವಯುತ ಭಾವನೆ ಮೂಡಿ ಬಂದಿದೆ. ಇನ್ನು ಒಂದು ಉತ್ತಮ ಅವಕಾಶಕ್ಕಾಗಿ ಕಾಯುತ್ತಿದ್ದ ಅಂತಹ ಶಮಂತ್ ಗೌಡ ರವರಿಗೆ ಬಿಗ್ ಬಾಸ್ ಒಳ್ಳೆ ವೇದಿಕೆಯಾಗಿದ್ದು ಮುಂದಿನ ದಿನಗಳಲ್ಲಿ ಅವರಿಗೂ ಕೂಡ ಕನ್ನಡ ಚಿತ್ರರಂಗಗಳಲ್ಲಿ ಅವಕಾಶ ಹುಡುಕಿಕೊಂಡು ಬಂದರೆ ಆಶ್ಚರ್ಯ ಪಡಬೇಕಾಗಿಲ್ಲ. ಇನ್ನೂ ಇಬ್ಬರು ಕೂಡ ಒಂದು ದಿನದ ಅಂತರದಲ್ಲಿ ಬಿಗ್ ಬಾಸ್ ನಿಂದ ಹೊರ ನಡೆದಿದ್ದಾರೆ.

ಶುಭ ಪೂಂಜಾ ರವರು ಬಿಗ್ ಬಾಸ್ ನಲ್ಲಿ 114 ದಿನಗಳನ್ನು ಕಳೆದರೆ, ಶಮಂತ್ ಬ್ರೋ ಗೌಡರವರು ಬಿಗ್ ಬಾಸ್ ಮನೆಯಲ್ಲಿ 115 ದಿನಗಳನ್ನು ಕಳೆದಿದ್ದಾರೆ. ಇನ್ನು ಇವರಿಬ್ಬರ ಕೈಗೆ ಸೇರಿರುವ ಸಂಭಾವನೆ ಎಷ್ಟು ಗೊತ್ತಾ ಸ್ನೇಹಿತರೇ. ಇವರಿಬ್ಬರಿಗೂ ಕೂಡ ಎಲ್ಲರಂತೆ ವಾರದ ಸಂಭಾವನೆ ನಿಗದಿಯಾಗಿದ್ದು ನಟಿ ಶುಭಾ ಪೂಂಜಾ ರವರಿಗೆ ವಾರಕ್ಕೆ 30 ಸಾವಿರ ರೂಪಾಯಿಯಂತೆ 16 ವಾರಗಳಿಗೆ 4 ಲಕ್ಷದ 80 ಸಾವಿರ ರೂಪಾಯಿಗಳು ಸಂಭಾವನೆ ರೂಪದಲ್ಲಿ ಸಿಕ್ಕಿದೆ. ಇನ್ನು ಶಮಂತ್ ಗೌಡ ರವರಿಗೆ ವಾರಕ್ಕೆ 20 ಸಾವಿರ ರೂಪಾಯಿ ಸಂಭಾವನೆಯಂತೆ ಮೊತ್ತ 3 ಲಕ್ಷದ 20 ಸಾವಿರ ರೂಪಾಯಿಗಳು ಸಂಭಾವನೆ ರೂಪದಲ್ಲಿ ದೊರಕಿದೆ. ಇನ್ನೇನು ಬಿಗ್ ಬಾಸ್ ಈ ವಾರಾಂತ್ಯದ ಒಳಗಡೆ ಮುಗಿಯುವುದರಿಂದ ವಿನ್ನರ್ ಯಾರಾಗಬಹುದು ಎಂದು ಊಹಿಸಿ ಕಾಮೆಂಟ್ ಬಾಕ್ಸಲ್ಲಿ ನಮಗೆ ತಿಳಿಸಿ.