ಈ.ಡಿ ಅಧಿಕಾರಿಗೆ ಶಾಕ್ ನೀಡಿದ ಝಮೀರ್, ಮನೆಯ ಒಳಗಡೆ ಸಿಕ್ಕಿದ್ದೇನು ಗೊತ್ತೇ?? ಕೊನೆಗೂ ಅಧಿಕೃತವಾಗಿ ಬಹಿರಂಗ.

ನಮಸ್ಕಾರ ಸ್ನೇಹಿತರೇ ಒಂದು ಕಾಲದಲ್ಲಿ ದೇವೇಗೌಡರ ಮಾನಸ ಪುತ್ರ ಹಾಗೂ ಹೆಚ್.ಡಿ.ಕುಮಾರಸ್ವಾಮಿಯವರ ಆಪ್ತರಾಗಿದ್ದ ಚಾಮರಾಜಪೇಟೆಯ ಶಾಸಕ ಜಮೀರ್ ಅಹಮದ್ ಖಾನ್ ಈಗ ಸದ್ಯ ಸಿದ್ದರಾಮಯ್ಯನವರ ಬಲಗೈ ಬಂಟರಾಗಿದ್ದಾರೆ. ಈ ಜೊತೆಗೆ ಆಗಾಗ ತಮ್ಮ ಹಾವಭಾವಗಳಿಂದ ಕೂಡಿದ ಮಾತುಗಳಿಂದ ಟ್ರೋಲ್ ಪೇಜರ್ಸ್ ಗಳಿಗಂತೂ ಜಮೀರ್ ಅಹಮದ್ ಫೇವರೇಟ್ ಆಗಿದ್ದಾರೆ. ಅಂತಹ ಜಮೀರ್ ಅಹಮದ್ ಖಾನ್ ರವರಿಗೆ ಇಂದು ಬೆಳ್ಳಂಬೆಳಗ್ಗೆ ಐಟಿ ಹಾಗೂ ಇಡಿ ಅಧಿಕಾರಿಗಳು ರೈಡ್ ಮೂಲಕ ಶಾಕ್ ಕೊಟ್ಟಿದ್ದಾರೆ.

ನಿನ್ನೆಯೇ ಬೆಂಗಳೂರಿಗೆ ಬಂದಿದ್ದ ಅಧಿಕಾರಿಗಳು ರಿಚ್ ಮಂಡ್ ಟೌನ್ ನ ಖಾಸಗಿ ಹೋಟೆಲ್ ಗೆ ಬಂದು ಉಳಿದುಕೊಂಡಿದ್ದರು. ಇಂದು ಬೆಳ್ಳಂಬೆಳಗ್ಗೆ ಇಪ್ಪತ್ತೈದು ಇನೋವಾ ಮೂಲಕ ಜಮೀರ್ ರವರ ವಸಂತ ನಗರ ನಿವಾಸ, ಬಂಬೂ ಬಜಾರ್ ನಿವಾಸ, ಸದಾಶಿವ ನಗರ ನಿವಾಸ, ನ್ಯಾಷನಲ್ ಟ್ರಾವೆಲ್ಸ್ ಕಚೇರಿಗೆ ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಈ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಜಮೀರ್ ರವರ ಭವ್ಯ ಬಂಗಲೆಯ ವೀಡಿಯೋವೊಂದು ವೈರಲ್ ಆಗಿತ್ತು. ಅದಲ್ಲದೇ ಇತ್ತಿಚೆಗಷ್ಟೇ ತಮ್ಮ ಮಗಳ ಮದುವೆಯ ಕಾರ್ಯಕ್ರಮವನ್ನು ಸಹ ಬಹು ಅದ್ದೂರಿಯಿಂದ ಮಾಡಿದ್ದರು. ಅದಲ್ಲದೇ ಎನ್.ಆರ್.ರಮೇಶ್ ರವರು ಜಮೀರ್ ಅಹಮದ್ ವಿರುದ್ದ ಇತ್ತಿಚೆಗಷ್ಟೇ ದೂರು ಸಹ ನೀಡಿದ್ದರು.

ಈ ದೂರಿನ ಅನ್ವಯ ದಾಳಿ ನಡೆಸಿದ ಅಧಿಕಾರಿಗಳಿಗೆ ಶಾಕ್ ಮೇಲೆ ಶಾಕ್ ಕಾದಿತ್ತು. ಇಪ್ಪತ್ತಾರು ಲಕ್ಷ ಆದಾಯ ಘೋಷಿಸಿಕೊಂಡಿದ್ದ ಜಮೀರ್ ರವರ ಒಟ್ಟು ಆಸ್ತಿ ನಲವತ್ತು ಕೋಟಿಗಿಂತ ಜಾಸ್ತಿ ಎಂದು ಹೇಳುತ್ತಿದ್ದಾರೆ. ನ್ಯಾಷನಲ್ ಟ್ರಾವೆಲ್ಸ್ ಕಚೇರಿಯಲ್ಲಿ ಸಿಕ್ಕ ದಾಖಲೆಗಳು, ಸದಾಶಿವ ನಗರದಲ್ಲಿರುವ ಐಷಾರಾಮಿ ಫ್ಲಾಟ್ ನಲ್ಲಿ ಸಿಕ್ಕಿರುವ ರಾಶಿ ರಾಶಿ ದಾಖಲೆಗಳು ಹೀಗೆ ಎಲ್ಲವನ್ನು ನೋಡಿ ಇಡಿ ಅಧಿಕಾರಿಗಳು ಶಾಕ್ ಗೆ ಒಳಗಾಗಿದ್ದಾರಂತೆ. ಇನ್ನು ಒಂದೆರೆಡು ದಿನ ಅಧಿಕಾರಿಗಳು ಜಮೀರ್ ಅಹಮದ್ ಖಾನ್ ರವರ ಮನೆ , ಕಚೇರಿ, ಅವರ ಆಪ್ತರ ಮನೆ ಹಾಗೂ ಅವರ ಆಪ್ತ ಸಹಾಯಕರ ಕಛೇರಿ ಮತ್ತು ಮನೆಗಳ ಮೇಲಿನ ದಾಳಿಯನ್ನು ಮುಂದುವರಿಸಲಿದ್ದಾರೆ ಎಂದು ಹೇಳಲಾಗಿದೆ. ದಾಳಿ ಮುಗಿದ ನಂತರವೇ ಜಮೀರ್ ಅಹಮದ್ ರವರ ಒಟ್ಟು ಆಸ್ತಿ ಎಷ್ಟು ಎಂದು ತಿಳಿಯಲಿದೆ ಎಂದು ಹೇಳುತ್ತಾರೆ.