ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್‌ ಕುಟುಂಬ.! ಕುಟುಂಬದ ಸುಂದರ ಕ್ಷಣಗಳು

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಸಂಗೀತ ಲೋಕದ ಮುಖ ಪರಿಚಯವನ್ನು ಬದಲಾಯಿಸಿದಂತಹ ಸಂಗೀತ ನಿರ್ದೇಶಕರೆಂದರೆ ಅದು ಖಂಡಿತವಾಗಿ ಗುರುಕಿರಣ್ ರವರು. ಗುರುಕಿರಣ್ ರವರು ಮೂಲತಃ ಮಂಗಳೂರಿನವರು. ಕನ್ನಡ ಚಿತ್ರರಂಗಕ್ಕೆ ಗುರುಕಿರಣ್ ರವರು ರಿಯಲ್ ಸ್ಟಾರ್ ಉಪೇಂದ್ರ ರವರ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಎಂಟ್ರಿ ನೀಡುತ್ತಾರೆ‌. ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕನಾಗಿ ಗುರುಕಿರಣ್ ಅವರು ಹೊಸ ಅಲೆಯನ್ನೇ ಸೃಷ್ಟಿಸಿದ್ದಾರೆ.

ಅವರು ಬಂದ ನಂತರ ಕನ್ನಡ ಚಿತ್ರರಂಗ ಹೊಸ ಬಗ್ಗೆ ಸಂಗೀತ ಹಾಗೂ ಹಾಡನ್ನು ಕಂಡಿದೆ. ಇವರ ಸಂಗೀತ ನಿರ್ದೇಶನದ ವಿಶ್ವರೂಪವನ್ನು ಪ್ರದರ್ಶಿಸಿದ್ದು ಹ್ಯಾಟ್ರಿಕ್ ಹೀರೋ ಶಿವಣ್ಣ ನಟನೆಯ ಇಂಡಸ್ಟ್ರಿ ಹಿಟ್ ಚಿತ್ರ ಜೋಗಿ ಹಾಗೂ ಸಾಹಸಸಿಂಹ ವಿಷ್ಣುವರ್ಧನ್ ನಟನೆಯ ಸೂಪರ್ ಹಿಟ್ ಚಿತ್ರ ಆಪ್ತಮಿತ್ರ. ಎರಡು ಚಿತ್ರಗಳ ಹಾಡಿನಿಂದ ಆಗಿ ಗುರುಕಿರಣ್ ರವರ ಜನಪ್ರಿಯತೆಯ ತೆಲುಗು ಚಿತ್ರರಂಗಕ್ಕೆ ಕೂಡ ಮುಟ್ಟಿತು ಹಾಗೂ ಈ ಎರಡು ಚಿತ್ರಗಳ ರಿಮೇಕ್ ಚಿತ್ರಗಳಿಗೆ ಕೂಡ ಅವರೇ ಸಂಗೀತ ನಿರ್ದೇಶನ ಮಾಡಿದ್ದರು.