ಹುಳುಕಡ್ಡಿ ಸಮಸ್ಯೆ ಇದ್ದಾರೆ ಬೇರೆ ಏನು ಬೇಡ, ಜಸ್ಟ್ ಹೀಗೆ ಮಾಡಿ ಸಾಕು ಮಾಯವಾಗುತ್ತದೆ, ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ಹುಳುಕಡ್ಡಿ ಎನ್ನುವುದು ಚರ್ಮಕ್ಕೆ ಸಂಬಂಧಿಸಿದ ಒಂದು ಸಮಸ್ಯೆ. ಹುಳುಕಡ್ಡಿ ಸಮಸ್ಯೆ ದೇಹದಲ್ಲಿ ಕಾಣಿಸಿಕೊಂಡರೆ ಸಾಕಷ್ಟು ಕಿರಿಕಿರಿಯನ್ನು ಉಂಟು ಮಾಡುತ್ತದೆ. ಹಾಗಾದರೆ ಹುಳುಕಟ್ಟಿ ಉಂಟಾಗುವುದು ಹೇಗೆ? ಹುಳುಕಡ್ಡಿ ಸಮಸ್ಯೆ ಕಾಣಿಸಿಕೊಳ್ಳುವುದು ಶೀಲಿಂದ್ರಗಳಿಂದ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ಶಿಲೀಂದ್ರಗಳು ಚರ್ಮದ ಮೇಲೆ ಕಾಣಿಸಿಕೊಳ್ಳುತ್ತದೆ. ಇದು ನಿತ್ಯದ ಚಟುವಟಿಕೆಗೆ ತೊಂದರೆಯನ್ನುಂಟು ಮಾಡುತ್ತದೆ.

ದೀರ್ಘಕಾಲದಿಂದ ಆಂಟಿ ಬಯಾಟಿಕ್ ಅಥವಾ ಸ್ಟಿರಾಯ್ಡ್ ಬಳಕೆ ಮಾಡುತ್ತಿದ್ದರೂ ಹುಳುಕಡ್ಡಿ ಉಂಟಾಗುವ ಸಾಧ್ಯತೆಯಿದೆ. ದೇಹದಲ್ಲಿ ಚರ್ಮದ ಮೇಲೆ ಅಂದರೆ, ಕುತ್ತಿಗೆ ಭಾಗ, ಭುಜ, ಬೆನ್ನು, ಕೈ, ಕಾಲ್ಬೆರಳ ಸಂದು ಮೊದಲಾದೆಡೆ ಕಾಣಿಸಿಕೊಳ್ಳುತ್ತದೆ. ಇದು ತುರಿಕೆ ಹಾಗೂ ನೋವನ್ನು ಉಂಟು ಮಾಡುತ್ತದೆ. ಇವು ಕಂದು ಕಪ್ಪು ಬಿಳಿ ಹೀಗೆ ಬೇರೆ ಬೇರೆ ಬಣ್ಣಗಳಲ್ಲಿ ಕಾಣಿಸಿಕೊಳ್ಳುತ್ತದೆ, ಇದಕ್ಕೆ ಯಾವುದೇ ಆಕಾರ ಇರುವುದಿಲ್ಲ. ಚರ್ಮ ಭಾಗ ಉಬ್ಬಿದಂತೆ ಕಾಣಿಸಿಕೊಳ್ಳುತ್ತದೆ.

ಇನ್ನು ಕೈ ಕಾಳು ಬೆರಳುಗಳ ಸಂದುಗಳಲ್ಲಿ, ಕಂಕುಳು, ಸೊಂಟ ಭಾಗ, ಯೋನಿಯ ಸುತ್ತ, ಮಹಿಳೆಯರ ಸ್ತನದ ಕೆಳಭಾಗ ಹೀಗೆ ದೇಹದ ಸಂದು ಸಂದುಗಳಲ್ಲಿ ಕಾಣಿಸಿಕೊಳ್ಳುತ್ತದೆ. ಈ ಭಾಗದಲ್ಲಿ ಚರ್ಮವು ಬಣ್ಣವನ್ನು ಕಳೆದುಕೊಂಡು ಸದಾ ತುರಿಕೆಯನ್ನು ಉಂಟು ಮಾಡುತ್ತದೆ ಹಾಗೂ ಬಟ್ಟೆ ಧರಿಸುವುದಕ್ಕೂ ತೊಂದರೆಯನ್ನುಂಟು ಮಾಡುತ್ತದೆ.

ಇನ್ನು ಹುಳು ಕಡ್ಡಿಯಿಂದ ಕೆಲ್ಲುಗುರು ಅಥವಾ ಕಾಲಿನ ಉಗುರು ಕಪ್ಪಿಡುವುದು ಉಂಟಾಗುತ್ತದೆ. ಜೊತೆಗೆ ಮಕ್ಕಳ ನಾಲಿಗೆ ಮೇಲೆ ಮೊಸರಿನಂಥ ಬಿಳಿ ಬಣ್ಣ ಕಾಣಿಸಿಕೊಳ್ಳುತ್ತದೆ. ಇದು ಬಾರದಂತೆ ತಡೆಯುವುದು ಅತ್ಯಂತ ಮುಖ್ಯ. ಇದಕ್ಕೆ ದೇಹದ ಮೇಲ್ಭಾಗದಲ್ಲಿ ತೇವಾಂಶವಿಲ್ಲದಂತೆ ನೋಡಿಕೊಳ್ಳಬೇಕು. ಸ್ನಾನವಾದ ಮೇಲೆ ಸ್ವಚ್ಛವಾದ ಬಟ್ಟೆಯಿಂದ ಸ್ವಲ್ಪವೂ ನೀರಿಲ್ಲದಂತೆ ಒರೆಸಿಕೊಳ್ಳಿ. ಯಾಕೆಂದರೆ ಚರ್ಮದ ಮೇಲೆ ತೇವಾಂಶವಿದ್ದರೆ ಶಿಲೀಂದ್ರಗಳು ಬೇಗ ಉಂಟಾಗುತ್ತವೆ. ಸಾಕ್ಸ್ (ಕಾಲು ಚೀಲ) ಗಳನ್ನು ತೊಳೆದು ಬಳಸಿ, ಪ್ರತಿದಿನ ಬದಲಾಯಿಸಿ. ಒಟ್ಟಿನಲ್ಲಿ ಅತ್ಯಂತ ಸ್ವಚ್ಛವಾಗಿರುವುದು ಹಾಗೂ ದೇಹದ ಮೇಲೆ ತೇವಾಂಶ ಇಲ್ಲದಂತೆ ನೋಡಿಕೊಳ್ಳುವುದೇ ಈ ಸಮಸ್ಯೆಗೆ ಪರಿಹಾರ.