ಮತ್ತೊಮ್ಮೆ ಎದುರಾದ ಕೆಜಿಎಫ್ ಚಾಪ್ಟರ್ ೨ ಹಾಗೂ ವಿಕ್ರಂ ರೋಣ, ಸುದೀಪ್ ಹಾಗೂ ಯಶ್ ಇವರಿಬ್ಬರಲ್ಲಿ ಗೆದ್ದವರು ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಈಗ ಭಾರತೀಯ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಚಿತ್ರಗಳ ಹವಾ ಸಾಕಷ್ಟು ತಾರಕಕ್ಕೇರಿದೆ. ಅದರಲ್ಲೂ ದಕ್ಷಿಣ ಭಾರತ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯ ಚಿತ್ರಗಳ ತಯಾರಿಕೆ ಸಾಕಷ್ಟು ಹೆಚ್ಚಾಗಿದ್ದು, ಎಲ್ಲಾ ಕಡೆ ಪ್ಯಾನ್ ಇಂಡಿಯಾ ಚಿತ್ರಗಳ ತಯಾರಿಕೆ ಸದ್ದು ಮಾಡುತ್ತಿದೆ. ಸ್ನೇಹಿತರೆ ನಿಮ್ಮ ಬಳಿ ಭಾರತೀಯ ಚಿತ್ರರಂಗದಲ್ಲಿ ಬಹುನಿರೀಕ್ಷಿತ ಚಿತ್ರ ಯಾವುದು ಎಂದು ಕೇಳಿದರೆ, ಖಂಡಿತವಾಗಿ ನೀವು ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರ ಎಂದು ಹೇಳಬಹುದು ಅಥವಾ ಪ್ರಶಾಂತ್ ನೀಲ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಕಾಂಬಿನೇಶನ್ ನಲ್ಲಿ ಮೂಡಿಬರುತ್ತಿರುವ ಕೆಜಿಎಫ್ ಚಾಪ್ಟರ್ 2 ಎಂದು ಹೇಳಬಹುದು.

ಯಾಕೆಂದರೆ ಎರಡು ಚಿತ್ರಗಳು ಈಗಾಗಲೇ ತಮ್ಮ ಮೇಕಿಂಗ್ ವಿಡಿಯೋ ಹಾಗೂ ಕೆಲ ವಿಷಯಗಳ ಮಟ್ಟಿಗೆ ಚಿತ್ರ ಯಾವ ರೇಂಜಿನಲ್ಲಿ ನಿರ್ಮಾಣ ಆಗುತ್ತಿದೆ ಎಂಬುದನ್ನು ತೋರಿಸಿಕೊಟ್ಟಿದೆ. ಈಗಾಗಲೇ ಇದು ಬಹು ಬಿಗ್ ಬಜೆಟ್ ನಲ್ಲಿ ಮೂಡಿಬರುತ್ತಿರುವ ಚಿತ್ರಗಳಾಗಿವೆ. ಕೇವಲ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ ಇಡೀ ಭಾರತದಾದ್ಯಂತ ನಿರೀಕ್ಷೆಯನ್ನು ಹೆಚ್ಚಿಸಿಕೊಂಡಿರುವ ಚಿತ್ರಗಳಾಗಿವೆ. ಹಾಗಾಗಿ ನೀವು ಬಹುನಿರೀಕ್ಷಿತ ಚಿತ್ರಗಳ ಹೆಸರು ಕೇಳಿದರೆ ಈ ಎರಡು ಚಿತ್ರಗಳನ್ನು ನೀವು ಹೆಸರುಗಳನ್ನು ಹೇಳಿಯೇ ಹೇಳುತ್ತೀರಿ. ಆದರೆ ನಿಮ್ಮ ನಂಬಿಕೆಗಳನ್ನೆಲ್ಲ ಹುಸಿ ಮಾಡುವಂತಹ ಫಲಿತಾಂಶ ಈಗ ಹೊರಬರುತ್ತಿದೆ ಸ್ನೇಹಿತರೆ.

ಹೌದು ಸ್ನೇಹಿತರೆ ಅನುಪ್ ಬಂಡಾರಿ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ಪ್ಯಾನ್ ವರ್ಲ್ಡ್ ಚಿತ್ರ ವಿಕ್ರಂತ್ ರೋಣ ಈ ಲಿಸ್ಟಿನಲ್ಲಿ ನಂಬರ್ ಒನ್ ಸ್ಥಾನವನ್ನು ಗಳಿಸಿದೆ. ಹೌದು ಸ್ನೇಹಿತರೆ ಐ ಎಂ ಡಿ ಬಿ ಇನ್ನು ಅಧಿಕೃತ ವೆಬ್ ಸೈಟಿನ ಬಹು ನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ ರೋಣ ಚಿತ್ರ ನಂಬರ್ ಒನ್ ಸ್ಥಾನವನ್ನು ಪಡೆದಿದ್ದು, ಕನ್ನಡದ ಕೆಜಿಎಫ್ ಚಾಪ್ಟರ್ 2 ಎರಡನೇ ಸ್ಥಾನವನ್ನು ಪಡೆದಿದೆ. ಇನ್ನು ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಚಿತ್ರ ಟಾಪ್ 10ರಲ್ಲಿ ಕೂಡ ಸ್ಥಾನವನ್ನು ಪಡೆದುಕೊಂಡಿಲ್ಲ. ಕನ್ನಡ ಚಿತ್ರಗಳು ಜಾಗತಿಕವಾಗಿ ಬೇರೆಲ್ಲಾ ಭಾಷೆಯ ಚಿತ್ರಗಳಿಗಿಂತ ಮುಂದೆ ಹೋಗುತ್ತಿರುವುದನ್ನು ನೋಡಲು ತುಂಬಾ ಹೆಮ್ಮೆಯಾಗುತ್ತದೆ ಸ್ನೇಹಿತರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.