ಕೊನೆಗೂ ಸಿಕ್ತು ಆಸ್ತಿ ವಿವರ, ಕಿರುತೆರೆಯಕ್ಕು ಯಾವ ನಟಿ ಶ್ರೀಮಂತರು ಗೊತ್ತೇ?? ಯಾರ ಆಸ್ತಿ ಎಷ್ಟಿದೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡದಲ್ಲಿ ಇದೀಗ ಸಿನಿಮಾ ತಾರೆಯರಿಗಿಂತ ಹೆಚ್ಚಾಗಿ ಫೇಮಸ್ ಆಗಿರುವ ಹಾಗೂ ಮಿಂಚುತ್ತಿರುವವರು ಕಿರುತೆರೆ ನಟಿಯರೇ. ಅದರಲ್ಲೂ ಕರೋನಾ ದಿಂದಾಗಿ ಯಾವುದೇ ಸಿನಿಮಾಗಳೂ ತೆರೆ ಕಾಣುತ್ತಿಲ್ಲ, ಆದರೆ ಧಾರಾವಾಹಿಗಳು ಎಂದಿನಂತೆ ನಡೆಯುತ್ತಿವೆ. ಹೀಗಾಗಿ ಧಾರಾವಾಹಿ ನಟಿಯರ ಬಗ್ಗೆ ವೀಕ್ಷಕರ ಒಲವೂ ಹೆಚ್ಚಾಗಿದೆ. ಅದರಲ್ಲೂ ಕೆಲವು ನಟಿಯರಂತೂ ಇದೀಗ ಬಹು ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ತಮ್ಮ ಡಿಮ್ಯಾಂಡಿಗೆ ತಕ್ಕ ಹಾಗೆ ಸಂಭಾವನೆಯನ್ನೂ ಹೆಚ್ಚಿಸಿಕೊಂಡಿರುವ ನಟಿಯರು, ಒದಲಿಗಿಂತಲೂ ಹೆಚ್ಚಿನ ಸಂಭಾವನೆಯನ್ನೇ ಪಡೆಯುತ್ತಿದ್ದಾರೆ. ಇನ್ನು ಕಿರುತೆರೆಯಲ್ಲಿ ಯಾರು ಶ್ರೀಮಂತರು ಎಂಬುದನ್ನು ನೋಡೋಣ.

ಹಿಂದೆ ಅದೆಷ್ಟೇ ಧಾರಾವಾಹಿ, ಸಿನಿಮಾ ಗಳಲ್ಲಿ ನಟಿಸಿದ್ದರೂ ಅಗಿಸಾಕ್ಷಿಯಲ್ಲಿ ಚಂದ್ರಿಕಾ ಆಗಿ ನಟಿಸುವುದರ ಮೂಲಕ ಕನ್ನಡಿಗರ ಮನೆ ಮಾತಾಗಿದ್ದವರು ರಾಜೇಶ್ವರಿ. ಇವರು ಕೊಡಗಿನ ಶ್ರೀಮಂತ ಕುಟುಂಬದಲ್ಲಿ ಜನಿಸಿದವರು. ಮದುವೆಯಾಗಿ ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ಪತಿ ಹಾಗೂ ಮಗಳೊಂದಿಗೆ ವಾಸವಾಗಿರುವ ಈಕೆ 2-3 ಕೋಟಿ ಆಸ್ತಿಯ ಒಡತಿ. ಇನ್ನು ದೀಪಿಕಾ ದಾಸ್ ತಮ್ಮ ಗ್ಲಾಮರ್ ಗೆ ಹೆಸರುವಾಸಿಯಾದವರು, ನಾಗಿಣಿಯಾಗಿ ಹಾಗೂ ಬಿಗ್ ಬಾಸ್ ಸ್ಪರ್ಧಿಯಾಗಿ ಫೇಮಸ್ ಆಗಿರುವ ಈಕೆ ಕೂಡ ತುಂಬಾ ರಿಚ್. ಇವರೂ ಕೂಡ 2-3 ಕೋಟಿ ಸ್ವಂತ ಆಸ್ತಿಯನ್ನು ಹೊಂದಿದ್ದಾರೆ.

ಅಗ್ನಿಸಾಕ್ಷಿಯ ಮತ್ತೊಂದು ಮುಖ್ಯ ಪಾತ್ರಧಾರಿ ವೈಷ್ಣವಿ ಗೌಡ. ಇತ್ತೀಚಿಗೆ ಬಿಗ್ ಬಾಸ್ ಟಾಪ್ 5 ನಲ್ಲಿದ್ದ ವೈಷ್ಣವಿ ಕೂಡ 2-3 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಇನ್ನು ನೇಹಾ ಗೌಡ. ಇವರನ್ನು ನೇಹಾ ಎನ್ನುವುದಕ್ಕಿಂತ ಲಕ್ಷ್ಮೀ ಬಾರಮ್ಮಾದ ಗೊಂಬೆ ಎಂದರೆ ಹೆಚ್ಚು ಫೆಮಿಲಿಯರ್ ಎನಿಸಬಹುದು. ಇದೀಗ ಮೆಚ್ಚಿದ ಹುಡುಗನನ್ನೇ ಮದುವೆಯಾಗಿ ಕಲರ್ಸ್ ಕನ್ನಡದ ರಾಜಾ ರಾಣಿ ಶೋನಲ್ಲಿ ಭಾಗವಹಿಸುತ್ತಿರುವ ನೇಹಾ ತೆಲಗು ಧಾರಾವಾಹಿಗಳಲ್ಲೂ ನಟಿಸಿದ್ದಾರೆ. ಇವರ ಆಸ್ತಿಯ ಮೊತ್ತ 3-4 ಕೋಟಿ ಮೌಲ್ಯದ್ದು ಎನ್ನಬಹುದು.