ದರ್ಶನ್ ಅವರ ಮುಂದಿನ ಪ್ಯಾನ್ ಇಂಡಿಯಾ ಸಿನಿಮಾ ಯಾವುದು ಗೊತ್ತೇ?? ನಿರ್ದೇಶನ ಮಾಡುವುದು ಕನ್ನಡ ಟಾಪ್ ನಿರ್ದೇಶಕ.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಚಿನ್ನದ ಮೊಟ್ಟೆ ಇಡುವ ಕೋಳಿ ಎಂದರೆ ಕಂಡಿತವಾಗಿಯೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಎಂದು ಹೇಳಬಹುದು. ಯಾಕೆಂದರೆ ದರ್ಶನ್ ರವರೊಂದಿಗೆ ಚಿತ್ರ ಮಾಡಿದರೆ ಖಂಡಿತವಾಗಿಯೂ ನಿರ್ಮಾಪಕರಿಗೆ ಬಂಪರ್ ಲಾಭ ಸಿಗುವುದು ಗ್ಯಾರಂಟಿ ಎನ್ನುವುದು ಪ್ರಚಾರದಲ್ಲಿರುವ ಮಾತು.

ಇತ್ತೀಚಿಗೆ ಸ್ಯಾಂಡಲ್ ವುಡ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರೊಂದಿಗೆ ಸಂಗೀತ ನಿರ್ದೇಶಕ ಹಾಗೂ ಖ್ಯಾತ ಹಾಸ್ಯ ಕಲಾವಿದರಾಗಿರುವಂತಹ ಸಾಧುಕೋಕಿಲ ರವರ ನಿರ್ದೇಶನದಲ್ಲಿ ನಟಿಸುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಇದರ ಜೊತೆಗೆ ಪ್ರೇಮ್ ರವರ ಚಿತ್ರದಲ್ಲಿ ಕೂಡ ದರ್ಶನ್ ರವರು ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಸ್ನೇಹಿತರೆ ಡಿಬಾಸ್ ಎಂದರೆ ಒಳ್ಳೆಯ ಕಥೆಗಳನ್ನು ಆಯ್ಕೆಮಾಡುವ ನಟ ಎಂದು ಖಂಡಿತವಾಗಿ ಹೇಳಬಹುದು. ಇನ್ನು ಅವರು ಮುಂದಿನ ಚಿತ್ರಗಳ ಬಗ್ಗೆ ಹೇಳುವುದಾದರೆ ಸಾಕಷ್ಟು ಬಿಗ್ ಬಜೆಟ್ ಚಿತ್ರಗಳ ಸಾಲು ಈಗಾಗಲೇ ಕ್ಯೂನಲ್ಲಿ ನಿಂತಿದೆ.

ಹೌದು ಸ್ನೇಹಿತರೆ ಈಗಾಗಲೇ ಐತಿಹಾಸಿಕ ಚಿತ್ರಗಳ ಬಗ್ಗೆ ಹೇಳುವುದಾದರೆ ಸಿಂಧೂರ ಲಕ್ಷ್ಮಣ ರಾಜವೀರ ಮದಕರಿನಾಯಕ ಚಿತ್ರಗಳು ಸದ್ಯದಲ್ಲೇ ಸೆಟ್ಟೇರುವ ಸೂಚನೆಯಿದೆ. ಇನ್ನು ರಾವಣನ ಕುರಿತಂತೆ ಕೊಡು ಒಂದು ಪೌರಾಣಿಕ ಚಿತ್ರ ಬರುವ ಸೂಚನೆಯಿದೆ. ಮಾತ್ರವಲ್ಲದೆ ವಿ ಹರಿಕೃಷ್ಣ ಅವರ ನಿರ್ದೇಶನದಲ್ಲಿ ಕೂಡ ಒಂದು ಚಿತ್ರ ಬರಲಿದೆ. ಇನ್ನು ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲೇ ಮತ್ತೊಂದು ನೇವಿ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಚಿತ್ರವೊಂದು ಸದ್ದಿಲ್ಲದೆ ತಯಾರಿ ಮಾಡಿಕೊಳ್ಳಲು ಪ್ರಾರಂಭವಾಗಿದೆ. ಹೀಗೆ ಹಲವಾರು ಒಳ್ಳೆಯ ವಿಭಿನ್ನ ಪಾತ್ರಗಳ ವಿಭಿನ್ನ ಕಥೆಗಳುಳ್ಳ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮುಂದಿನ ದಿನಗಳಲ್ಲಿ ನಟಿಸಲಿದ್ದಾರೆ ಎಂಬ ಪಕ್ಕಾ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಇನ್ನು ನೀವು ಅಭಿಮಾನಿಯಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಯಾವ ಚಿತ್ರಕ್ಕಾಗಿ ಕಾಯುತ್ತಿದ್ದಾರೆ ಎಂಬುದನ್ನು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.