ಮುಖದ ಹೊಳಪಿಗೆ ಇತರ ಸೌಂದರ್ಯವರ್ಧಕ ಬಿಡಿ ಟೊಮ್ಯಾಟೋ ಹಚ್ಚಿ; ಹೊಳಪಿನ ತ್ವಚೆ ಪಡೆಯಿರಿ, ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಟೊಮ್ಯಾಟೋವನ್ನು ಊಟದಲ್ಲಿ ಬಳಸೋದು ಸಹಜ. ಹೆಚ್ಚು ಕಮ್ಮಿ ಎಲ್ಲಾ ಅಡುಗೆಗಳಲ್ಲಿಯೂ ಒಂದರ್ಧ ಟೊಮ್ಯಾಟೊ ಹಾಕಿದ್ರೆ ಟೇಸ್ಟ್ ಕೂಡ ಚೆನ್ನಾಗಿಯೇ ಇರುತ್ತೆ. ಹಾಗಾಗಿ ಅಡುಗೆ ಮನೆಯಲ್ಲಿ ತರಕಾರಿಗಳಲ್ಲಿ ಟೊಮ್ಯಾಟೋ ಮಾತ್ರ ಇದ್ದೇ ಇರತ್ತೆ. ಈ ಟೊಮ್ಯಾಟೋ ಬರಿ ಅಡುಗೆಗೆ ಮಾತ್ರವಲ್ಲ ನಿಮ್ಮ ತ್ವಚೆಯನ್ನು ಕೂಡ ಕಾಪಾಡಲು ಸಹಾಯಕ. ಅದು ಹೇಗೆ ಅನ್ನೊದರ ಬಗ್ಗೆಯೇ ಇದೆ ಈ ಲೇಖನ. ತಿಳಿದುಕೊಳ್ಳಲು ಮುಂದೆ ಓದಿ..

ಟೊಮ್ಯಾಟೋದಲ್ಲಿ ಸಾಕಷ್ಟು ವಿಟಮಿನ್ ಹಾಗೂ ಪ್ರೋಟಿನ್ ಗಳಿವೆ. ಹಾಗಾಗಿ ಇದು ನಮ್ಮ ತ್ವಚೆಗೆ ಬೇಕಾದ ಜೀವಸತ್ವವನ್ನು ನೀಡುತ್ತದೆ. ಈ ರಸಭರಿತವಾದ ಟೊಮ್ಯಾಟೋಹಣ್ಣನ್ನು ಮುಖಕ್ಕೆ ಹಚ್ಚಿಕೊಂಡರೆ ಉಖದಲ್ಲಿನ ಕಪ್ಪು ಕಲೆ ತೆಗೆಯುವುದು ಮಾತ್ರವಲ್ಲದೇ ಮುಖ ಹೊಳೆಯುವುದಕ್ಕೆ ಸಹಾಯಕವಾಗುತ್ತದೆ. ನೈಸರ್ಗಿಕವಾದ ಈ ಮನೆಮದ್ದು ಮುಖದ ನೈಸರ್ಗಿಕತೆಯನ್ನೂ ಉಳಿಸಲು ಸಹಾಯ ಮಾಡುತ್ತದೆ. ದಿನವೂ ಬಿಸಿಲಿಗೆ ಮುಖವೊಡ್ಡಿ ಕೆಲಸಕ್ಕೆಂದು ಹೊರ ಹೋದರೆ ಮುಖದಲ್ಲಿ ಟ್ಯಾನ್ ಕಲೆ ಸಾಮಾನ್ಯ. ಹಾಗಾಗಿ ಮುಖ ತನ್ನ ಕಾಂತಿಯನ್ನು ಕಳೆದುಕೊಳ್ಳುತ್ತದೆ.

ಇದಕ್ಕೆಲ್ಲಾ ಪರಿಹಾರಕ್ಕಾಗಿ ಸಾಕಷ್ಟು ಸೌಂದರ್ಯವರ್ಧಕಗಳ ಮೊರೆ ಹೋಗುತ್ತಾರೆ. ದುಬಾರಿಯಾದ ಈ ಸೌಂದರ್ಯವರ್ಧಕಗಳು ತ್ವಚೆಯನ್ನು ಇನ್ನಷ್ಟು ಹಾಳು ಮಾಡುತ್ತವೆಯೇ ಹೊರತು ಬೇರೆನೂ ಅಲ್ಲ. ಹಾಗಾಗಿ ಟೊಮ್ಯಾಟೋ ಬಳಸಿ ತ್ವಚೆಯನ್ನು ಕಾಪಾಡಿಕೊಳ್ಳುವುದಕ್ಕೆ ಇಲ್ಲಿದೆ ಟಿಪ್ಸ್. ಚೆನ್ನಾಗಿ ಹಣ್ಣಾದ ಟೊಮ್ಯಾಟೋ ಹಣ್ಣನ್ನು ತೆಗೆದುಕೊಳ್ಳಿ. ಅದನ್ನು ಸಮನಾಗಿ ಕತ್ತರಿಸಿ. ಅರ್ಧ ಭಾಗ ಟೊಮ್ಯಾಟೋವನ್ನು ತೆಗೆದುಕೊಂಡು ಮುಖಕ್ಕೆ ಚೆನ್ನಾಗಿ ಉಜ್ಜಿ. ಟೋಮ್ಯಾಟೋ ಹಣ್ಣಿನ ರಸ ಹೋಗುವವರೆಗೂ ಉಜ್ಜಿ. ನಂತರ ಸ್ವಲ್ಪ ಸಮಯ ಹಾಗೆಯೇ ಬಿಡಿ. ನಂತರ ತುಸು ಉಗುರು ಬೆಚ್ಚನೆಯ ನೀರಿನಿಂದ ಮುಖವನ್ನು ತೊಳೆಯಿರಿ. ವಾರದಲ್ಲಿ 2-3 ಬಾರಿ ಹೀಗೆ ಮಾಡುವುದರಿಂದ ಮುಖದಲ್ಲಿನ ಡೆಡ್ ಸ್ಕಿನ್ ಹಾಗೂ ಕಪ್ಪು ಕಲೆಗಳು ಕ್ರಮೇಣ ಮಾಯವಾಗುತ್ತವೆ.