ಅಂದು ವಿವಿಎಸ್ ಲಕ್ಷ್ಮಣ ಅವರ ಆಟೋಗ್ರಾಫ್ ಪಡೆದ ಈ ಬಾಲ ಯಾರು ಗೊತ್ತೇ?? ಇಂದಿನ ಸೂಪರ್ ಸ್ಟಾರ್ ಆಟಗಾರ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇಂದೊಂದು ಪರಂಪರೆಯಿದ್ದಂತೆ. ತಮಗಿಷ್ಟವಾದ ಆಟಗಾರರ ಬಳಿ ಆಟೋಗ್ರಾಫ್ ತೆಗೆದುಕೊಂಡವರೆ, ನಂತರ ಅವರೊಂದಿಗೆ ಆಡುತ್ತಾರೆ. ಇಂಥ ಒಂದು ಸುದ್ದಿಯನ್ನು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಲಾರ್ಡ್ಸ್​ ಮೈದಾನದಲ್ಲಿ ಪ್ರಭಲ ಇಂಗ್ಲೆಂಡ್ ತಂಡವನ್ನು ಸೋಲಿಸಿ ಟೆಸ್ಟ್ ನಲ್ಲಿ ಐತಿಹಾಸಿಕ ಗೆಲುವು ಸಾಧಿಸಿದೆ ಟೀಮ್ ಇಂಡಿಯಾ. ತಂಡದ ಈ ಗೆಲುವನ್ನು ಕ್ರಿಕೆಟ್ ಅಭಿಮಾನಿಗಳು ಪ್ರಶಂಸೆ ಮಾಡಿದ್ದಾರೆ. ಅಲ್ಲದೆ ಮಾಜಿ ಕ್ರಿಕೆಟ್ ಆಟಗಾರರೂ ಕೂಡ ಟೀಮ್ ಇಂಡಿಯಾದ ಈ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಈ ಗೆಲ್ಲುವಲ್ಲಿ ಮುಖ್ಯವಾಗಿರುವ ಬೌಲರ್ ನ ಬಾಲ್ಯದ ಫೋಟೋವನ್ನು ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಹಂಚಿಕೊಂಡಿರುವುದು ವಿಶೇಷ.

ಹೌದು, ಕ್ರಿಕೆಟಿಗ ಲಕ್ಷ್ಮಣ ಹಂಚಿಕೊಂಡಿರುವುದು ಮತ್ಯಾರ ಫೋಟೋವೂ ಅಲ್ಲ. ಲಾರ್ಡ್ಸ್​​ ಟೆಸ್ಟ್​ ನಲ್ಲಿ ಅದ್ಭುತ ಆಟ ಪ್ರದರ್ಶಿಸಿದ ಮೊಹಮ್ಮದ್ ಸಿರಾಜ್. ಹೌದು, ಮೊದಲ ಬಾರಿಗೆ ಲಾರ್ಡ್ಸ್​ ಮೈದಾನದಲ್ಲಿ ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಸಿರಾಜ್ 8 ವಿಕೆಟ್ ಕಬಳಿಸಿ ಅನುಭವಿ ಆಟಗಾರರಿಗೂ ಸಡ್ಡು ಹೊಡೆದಿದ್ದರು. ವಿವಿಎಸ್ ಲಕ್ಷ್ಮಣ ಹಾಗೂ ಸಿರಾಜ್ ಇಬ್ಬರೂ ಹೈದ್ರಾಬಾದ್ ಮೂಲದ ಕ್ರಿಕೆಟಿಗರಾಗಿ ಕ್ರಿಕೆಟ್ ನಲ್ಲಿ ಉತ್ತಮ ಸಾಧನೆ ಮಾಡಿರುವುದು, ಮಾಡುತ್ತಿರುವುದು ವಿಶೇಷ.

ಮೊಹಮ್ಮದ್ ಸಿರಾಜ್ ಲಾರ್ಡ್ಸ್​ ಟೆಸ್ಟ್​ನಲ್ಲಿ 8 ವಿಕೆಟ್ ಪಡೆದು ಸರ್ವಶ್ರೇಷ್ಠ ಪ್ರದರ್ಶನ ನೀಡಿದ್ದಾರೆ. ಆಡಿರುವ ಕೇವಲ 7 ಟೆಸ್ಟ್​ಗಳಲ್ಲಿ 27 ವಿಕೆಟ್ ಗಳಿಸಿ ಅಂಕಪಟ್ಟಿಯಲ್ಲಿ 38ನೇ ಸ್ಥಾನದಲ್ಲಿದ್ದಾರೆ ಸಿರಾಜ್. ಸಿರಾಜ್ ಚಿಕ್ಕವರಿರುವಾಗ ಅವರಿಗೆ ಆಟೋಗ್ರಾಫ್ ಕೊಟ್ಟಿರುವ ಲಕ್ಷಣ ಅವರು ತಾನು ಹೈದರಾಬಾದ್‌ನ ಮಹಾನ್ ಅಬ್ದುಲ್ ಅಜೀಮ್ ಅವರ ಮನೆಯಲ್ಲಿ ಈ ಹುಡುಗನನ್ನು ಭೇಟಿ ಮಾಡಿದೆ. ಇಂದು ಇದೆ ಹುಡುಗ ಟೀಮ್ ಇಂಡಿಯಾವನ್ನು ಪ್ರತಿನಿಧಿಸುತ್ತಿರುವುದು ನೋಡಿ ಹೆಮ್ಮೆ ಎನಿಸುತ್ತದೆ ನನಗೆ. ಕಠಿಣ ಪರಿಶ್ರಮ ಹಾಗೂ ಸರಿಯಾದ ಗುರಿಯಿದ್ದರೆ ಯಾರು ಏನನ್ನೂ ಸಾಧಿಸಬಹುದು ಎನ್ನುವುದಕ್ಕೆ ಇದುವೇ ಉದಾಹರಣೆಗೆ ಎಂದು ವಿವಿಎಸ್ ಲಕ್ಷಣ್ ಫೋಟೋ ಪೋಸ್ಟ್ ಮಾಡಿ ಹೀಗೆ ಬರೆದುಕೊಂಡಿದ್ದಾರೆ.