ರಾಕ್ ಲೈನ್ ರವರ ಕನಸಿನ ಸಿನಿಮಾದಲ್ಲಿ ವಿಷ್ಣುಸರ್, ಶಿವಣ್ಣ ಒಟ್ಟಿಗೆ ನಟಿಸಬೇಕಾಗಿತ್ತು, ಆದ್ರೆ ಸೆಟ್ಟೇರಲಿಲ್ಲ, ಯಾಕೆ ಗೊತ್ತೇ??

ಚಿತ್ರರಂಗದಲ್ಲಿ ಕೆಲವು ನಿರ್ಮಾಪಕರು, ನಿರ್ದೇಶಕರು ತಮ್ಮ ಕನಸಿನ ಚಿತ್ರಗಳನ್ನು ತಯಾರಿಸುವುದಕ್ಕೆ ಹಂಬಲಿಸುತ್ತಿರುತ್ತಾರೆ. ಆದರೆ ಅದೆಷ್ಟೋ ಸಂದರ್ಭಗಳಲ್ಲಿ ಬೇರೆ ಬೇರೆ ಕಾರಣಗಳಿಂದ ಈ ಚಿತ್ರ ನಿರ್ಮಾಣದ ಕಾರ್ಯ ಹಾಗೆಯೇ ನಿಂತು ಹೋಗತ್ತೆ. ಕೆಲವು ಮೊದಲ ಹಂತದಲ್ಲಿಯೇ ನಿಂತರೆ ಇನ್ನೂ ಕೆಲವು ಇನ್ನೇನು ಚಿತ್ರೀಕರಣ ನಡೆಯಬೇಕು ಎನ್ನುವಷ್ಟರಲ್ಲಿ ನಿಂತು ಹೋಗತ್ತೆ. ಅಲ್ಲಿಗೆ ಆ ಚಿತ್ರದ ಬಗ್ಗೆ ಕನಸು ಕಂಡಿಕೊಂಡವರ ಕನಸು ನನಸಾಗದೇ ಹಾಗೆಯೇ ಉಳಿಯುತ್ತೆ. ನಾವಿಂದು ಹೇಳುತ್ತಿರುವುದು ರಾಕ್ ಲೈನ್ ವೆಂಕಟೇಶ್ ಅವರ ಕನಸು ಹಾಗೆ ಕನಸಾಗಿಯೇ ಉಳಿದಿರುವ ಒಂದು ಚಿತ್ರದ ಬಗ್ಗೆ!

ನಟ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಉತ್ತಮ ಚಿತ್ರಗಳನ್ನು ನೀಡಿದ್ದಾರೆ. ಅವರ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಚಿತ್ರಗಳಿಂದ ಕೆಲವು ಹೊಸ ನಟ ನಟಿಯರಿಗೂ ಉತ್ತಮ ಅವಕಾಶಗಳು ಲಭ್ಯವಾಗಿವೆ. ಇನ್ನು ರಾಕ್ ಲೈನ್ ಅವರು ಯಾವ ಕಥೆ ಯಾವ ನಟರಿಗೆ ಸರಿಹೊಂದುತ್ತದೆ, ಹಾಗೆ ಮಾಡಿದರೆ ಯಾವ ಚಿತ್ರ ಹಿಟ್ ಆಗುತ್ತದೆ ಎಂಬುದನ್ನು ಚೆನ್ನಾಗಿ ಬಲ್ಲರು. ಹಾಗಾಗಿ ಬಹಳ ಮುತುವರ್ಜಿಯಿಂದ ಚಿತ್ರ ನಿರ್ಮಾಣ ಮಾಡುತ್ತಾರೆ.

ರಾಕ್ ಲೈನ್ ವೆಂಕಟೇಶ್ ಅವರಿಗೆ ದಿ. ಡಾ. ವಿಷ್ಣು ವರ್ಧನ್ ನಟನೆಯ ಒಂದು ಚಿತ್ರವನ್ನು ನಿರ್ಮಾಣ ಮಾಡುವ ಕನಸಿತ್ತು. ಆ ಚಿತ್ರದ ಕಥೆಗೆ ಹಿರಿಯ ಕಥೆಗಾರ ಬಿ.ಎಲ್ ವೇಣು, ಟಿ.ಎಸ್ ನಾಗಾಭರಣ ಹಾಗೂ ರಾಕ್ ಲೈನ್ ವೆಂಕಟೇಶ್ ಈ ಮೂವರ ಸಾರಥ್ಯದಲ್ಲಿ ಈ ಚಿತ್ರ ವಿಷ್ಣು ನಟನೆಯಲ್ಲಿ ಮೂಡಿ ಬರಬೇಕಿತ್ತು. ಹೌದು ಸ್ನೇಹಿತರೆ ’ಯುಗೇ ಯುಗೇ’ ಚಿತ್ರ ರಾಕ್ ಲೈನ್ ಅವರ ಕನಸಾಗಿತ್ತು. ಈ ಚಿತ್ರದ ಕಥೆಗೆ ಸರಿಯಾಗಿ ಹೊಂದಿಕೆ ಯಾಗುವವರು ವಿಷ್ಣು ದಾದಾ ಮಾತ್ರ ಎಂಬುದು ಅವರ ಬಲವಾದ ನಂಬಿಕೆಯಾಗಿತ್ತು. ಇನ್ನು ಈ ಚಿತ್ರದಲ್ಲಿ ನಟ ಉಪೇಂದ್ರ ಕೂಡ ನಟಿಸಬೇಕಿತ್ತು. ಆದರೆ ವಿಷ್ಣು ವರ್ಧನ್ ತೀರಿಕೊಂಡು ಈ ಪ್ರಾಜೆಕ್ಟ್ ಹಾಗೆಯೇ ನಿಂತು ಬಿಟ್ಟಿತು. ನಂತರ 2012 ರಲ್ಲಿ ರಾಕ್ ಲೈನ್ ವೆಂಕಟೇಶ್ ಅವರು ಮತ್ತೆ ಈ ಚಿತ್ರ ನಿರ್ಮಾಣ ಮಾಡಲಿ ಸಿದ್ದತೆ ಮಾಡ್ತಾರೆ. ಇನ್ನು ಗಂಡುಗಲಿ ಕುಮಾರರಾಮದಂಥ ಚಿತ್ರದ ಪಾತ್ರವನ್ನು ನಿಭಾಯಿಸಿದ್ದ ಶಿವಣ್ಣ ವಿಷ್ಣು ಅವರ ಜಾಗಕ್ಕೆ ಸೂಕ್ತ ಎಂದು ಭಾವಿಸುತ್ತಾರೆ. ಈ ಚಿತ್ರ ತೆಲುಗಿನ ಮಗಧೀರ, ಬಾಹುಬಲಿ ಯಂತೆಯೇ ಪೌರಾಣಿಕ ಪಾತ್ರಗಳಿರುವ ಅರ್ಧ ಗ್ರಾಫಿಕ್ಸ್ ಹಾಗೂ ಇನ್ನರ್ಧ ಕಾಲ್ಪನಿಕವಾಗಿರುವ ಕಥೆಯನ್ನು ಒಳಗೊಂಡ ಸಿನಿಮಾ ಎಂದು ರಾಕ್ ಲೈನ್ ಹೇಳಿದ್ದರು. ಆದರೆ ಅದ್ಯಾವ ಸಮಸ್ಯೆಯೇ ಗೊತ್ತಿಲ್ಲ ಈ ಚಿತ್ರ ಮತ್ತೆ ನಿರ್ಮಾಣವಾಗದೇ ನಿಂತಿತು. ಇಂಥ ಒಂದು ಅದ್ಬುತ ಕಥೆಯನ್ನು ಹೊಂದಿದ್ದೂ ಎಲ್ಲಾ ಸಂಪನ್ಮೂಲಗಳಿದ್ದೂ ’ಯುಗೇ ಯುಗೇ ಚಿತ್ರ ಮಾತ್ರ ಯಾಕೆ ಸಿದ್ಧವಾಗುತ್ತಿಲ್ಲ ಎಂಬುದೇ ಈಗಿನ ಯಕ್ಷಪ್ರಶ್ನೆ!