ಒಮ್ಮೆ ಬಳಸುವ ಮಾಸ್ಕ್ ಗೆ ಕರೀನಾ ಕಪೂರ್ ನೀಡುವ ಬೆಲೆ ಎಷ್ಟು ಗೊತ್ತೇ?? ಯಪ್ಪಾ ಏನು ಇಷ್ಟೊಂದಾ??

ನಮಸ್ಕಾರ ಸ್ನೇಹಿತರೇ ಈ ಮಹಾಮಾರಿ ಬಂದಮೇಲೆ ಕೋಟ್ಯಂತರ ಬೆಲೆಯ ವಸ್ತ್ರಗಳನ್ನು ಉಡುಪುಗಳನ್ನುಹಾಕಿಕೊಳ್ಳುತ್ತಿದ್ದಂತಹ ಸೆಲೆಬ್ರಿಟಿಗಳು ನಂತರದ ದಿನಗಳಲ್ಲಿ ಕಡಿಮೆ ಮೌಲ್ಯದ ಮಾಸ್ಕ್ ಗಳಿಗಾಗಿ ಹಾತೊರೆಯುವಂತಾಯಿತು. ಬಾಲಿವುಡ್ ನಲ್ಲಿ ಹಲವಾರು ಖ್ಯಾತ ನಟಿಯರು ಇದ್ದಾರೆ ಅದರಲ್ಲಿಯೂ ಹಲವಾರು ವರ್ಷಗಳಿಂದ ನಟಿಸಿಕೊಂಡು ಬಂದರೂ ಕೂಡ ಇಂದಿಗೂ ಕೂಡ ತನ್ನ ಬೇಡಿಕೆಯನ್ನು ಕಡಿಮೆ ಮಾಡಿಕೊಳ್ಳದೆ ಸೌಂದರ್ಯವತಿ ಯಾಗಿರುವ ಕರೀನಾ ಕಪೂರ್ ಖಾನ್ ರವರ ಬಗ್ಗೆ ನಿಮಗೆಲ್ಲ ಗೊತ್ತೇ ಇದೆ.

ಇನ್ನು ಕರೀನಾ ಕಪೂರ್ ಅವರು ಮದುವೆಯಾಗಿರುವುದು ಬಾಲಿವುಡ್ನ ಖ್ಯಾತ ನಟ ಸೈಫ್ ಅಲಿಖಾನ್ ಅವರನ್ನು ಎಂಬುದು ನಿಮಗೆಲ್ಲಾ ಗೊತ್ತೇ ಇದೆ. ಇತ್ತೀಚಿನ ವರ್ಷಗಳಲ್ಲಿ ಕರೀನಾ ಕಪೂರ್ ರವರು ಎರಡು ಗಂಡುಮಕ್ಕಳ ತಾಯಿಯಾಗಿದ್ದಾರೆ. ಇನ್ನು ವಯಸ್ಸು 40 ಆಗುತ್ತ ಬಂದರು ಕೂಡ ಬಾಲಿವುಡ್ ನಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾಳೆ ಸ್ಟಾರ್ ನಟರೊಂದಿಗೆ ನಟಿಸುತ್ತಿದ್ದಾರೆ. ಇನ್ನು ಇವರು ಇತ್ತೀಚಿಗಷ್ಟೇ ಮಾಸ್ಕ್ ಹಾಕಿಕೊಂಡು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿಕೊಂಡು ಮಾಸ್ಕ್ ಧರಿಸಿ ಸುರಕ್ಷಿತವಾಗಿರಿ ಎಂಬ ಸಂದೇಶವನ್ನು ಎಲ್ಲರಿಗೂ ನೀಡಿದ್ದರು.

ಇದೇನಪ್ಪ ಮಾಸ್ಕ್ ಹಾಕಿಕೊಂಡರೆ ಏನು ದೊಡ್ಡ ವಿಷಯ ಎಂದು ನೀವು ಕೇಳಬಹುದು. ವಿಷಯ ಇದೆ ಸ್ನೇಹಿತರೆ ಅವರು ಹಾಕಿಕೊಂಡಿರುವ ಮಾಸ್ಕ್ ಏನೋ ಇನ್ನೂರು ಮುನ್ನೂರು ರೂಪಾಯಿ ಅಲ್ಲ. ಹೌದು ಸ್ನೇಹಿತರೆ ಕರೀನಾ ಕಪೂರ್ ಅವರು ಧರಿಸಿಕೊಂಡಿದ್ದ ಮಾಸ್ಕ್ ಲೂಯಿಸ್ ವಿಟ್ಟನ್ ಕಂಪನಿಯದ್ದು. ಇನ್ನು ಅದರ ಬೆಲೆ ಬರೋಬ್ಬರಿ 255 ಅಮೆರಿಕನ್ ಡಾಲರ್ ಭಾರತದ ರೂಪಾಯಿಯಲ್ಲಿ ಹೇಳುವುದಾದರೆ ಬರೋಬ್ಬರಿ 26 ಸಾವಿರ ರೂಪಾಯಿ. ಇಷ್ಟೊಂದು ಬೆಲೆಯ ಮಾಸ್ಕ್ ಗಳನ್ನು ಧರಿಸುವ ಅಗತ್ಯತೆ ಯಾದರೂ ಏನಿತ್ತು ಎಂಬುದು ಕೆಲವರ ವಾದ. ಇದರ ಕುರಿತಂತೆ ನಿಮ್ಮ ಅಭಿಪ್ರಾಯ ಏನು ಎಂಬುದನ್ನು ನಮ್ಮೊಂದಿಗೆ ಹಂಚಿಕೊಳ್ಳಿ.