ಪೂಜಾ, ರಶ್ಮಿಕಾ, ಕೃತಿ ರವರಿಗೆ ಪೈಪೋಟಿ ನೀಡಲು ಆರಂಭಿಸಿದ ಕನ್ನಡದ ಮತ್ತೊಬ್ಬರು ನಟಿ, ತೆಲುಗಿನಲ್ಲೂ ಇವರದ್ದೇ ಹವಾ, ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ತೆಲುಗು ಚಿತ್ರರಂಗದಲ್ಲಿ ಹಲವಾರು ಕನ್ನಡ ನಟಿಯರು ಮಿಂಚಿದ್ದಾರೆ, ಕೆಲವರು ಕನ್ನಡದಿಂದ ಪಾದಾರ್ಪಣೆ ಮಾಡಿ ತೆಲುಗು ಭಾಷೆಯಲ್ಲಿ ಅವಕಾಶ ಪಡೆದುಕೊಂಡರೇ ಇನ್ನು ಕೆಲವರು ನೇರವಾಗಿ ತೆಲುಗು ಭಾಷೆಯಲ್ಲಿ ಅವಕಾಶ ಪಡೆದು ಅಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿ ಟಾಪ್ ನಟಿಯರಾಗಿ ಮಿಂಚಿದ್ದಾರೆ. ಒಬ್ಬರಲ್ಲ ಇಬ್ಬರಲ್ಲ ಹತ್ತಾರು ಸ್ಟಾರ್ ನಟಿಯರು ಕರ್ನಾಟಕದ ಮೂಲದವರಾಗಿದ್ದಾರೆ. ಮೊದಲಿನಿಂದಲೂ ಹಾಗೂ ಈಗಲೂ ಕೂಡ ಕರ್ನಾಟಕದ ನಟಿಯರು ಅಲ್ಲಿ ಟಾಪ್ ನಟಿಯರಾಗಿ ಮಿಂಚುತ್ತಿದ್ದಾರೆ.

ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೆ ಇತ್ತೀಚೆಗೆ ಸೀಮಾ ಸಿನಿಮಾ ಅವಾರ್ಡ್ ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಗೆ ನಾಮಿನೇಷನ್ ಹಾಗಿರುವ ಐವರು ನಟಿಯರಲ್ಲಿ ಮೂವರು ನಟಿಯರು ಕರ್ನಾಟಕದವರು. ಇನ್ನು ಹೀಗೆ ಹಲವಾರು ನಟಿಯರು ತೆಲುಗಿನಲ್ಲಿ ಮಿಂಚುತ್ತಿರುವಾಗ ಇದೀಗ ಮತ್ತೊಬ್ಬರು ನಟಿ ತೆಲುಗಿನಲ್ಲಿ ಹೊಸ ಹವಾ ಆರಂಭಿಸಿದ್ದಾರೆ, ಇತ್ತೀಚೆಗಷ್ಟೇ ಕರ್ನಾಟಕದ ಮೂಲದ ಕೃತಿ ಶೆಟ್ಟಿ ರವರು ಬಹಳ ಜನಪ್ರಿಯತೆಯಿಂದ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದರು.

ಇದಾದ ಬಳಿಕ ಮತ್ತೊಬ್ಬ ನಟಿ ತೆಲುಗಿನಲ್ಲಿ ಮಿಂಚುವ ಸದ್ದು ಮಾಡುತ್ತಿದ್ದು, ಈಗಾಗಲೇ ರಶ್ಮಿಕ ಪೂಜಾ ಹೆಗಡೆ ಕೃತಿ ಶೆಟ್ಟಿ, ಸೇರಿದಂತೆ ಮಿಂಚುತ್ತಿರುವ ನಟಿ ಎಲ್ಲರಿಗೂ ಪೈಪೋಟಿ ಆಗುವುದರಲ್ಲಿ ಯಾವುದೇ ಪ್ರಶ್ನೆ ಇಲ್ಲ ಎಂದು ಅಭಿಪ್ರಾಯಗಳು ಕೇಳಿ ಬಂದಿವೆ. ಆ ನಟಿ ಮತ್ತ್ಯಾರು ಅಲ್ಲ ಸ್ನೇಹಿತರೆ ಇತ್ತೀಚೆಗಷ್ಟೇ ಪೆಳ್ಳಿ ಸಂದಡಿ ಸಿನಿಮಾದಲ್ಲಿ ಅವಕಾಶ ಪಡೆದುಕೊಂಡು ಮೊದಲ ಸಿನಿಮಾ ಬಿಡುಗಡೆಗೆ ಮುನ್ನವೇ ಮತ್ತಷ್ಟು ನಿರ್ಮಾಪಕರು ಕ್ಯೂ ನಿಂತು ಕೊಂಡಿರುವ ನಟಿ ಶ್ರೀ ಲೀಲ. ಕನ್ನಡದಲ್ಲಿ ಪಾದರ್ಪಣೆ ಮಾಡಿದ ಇವರು ನಟಿಸಿದ್ದು ಕೆಲವು ಚಿತ್ರಗಳಲ್ಲಿ ಆದರೂ ಈಗ ತೆಲುಗಿನಲ್ಲಿಯೂ ಮಿಂಚಲು ಸಿದ್ಧವಾಗಿದ್ದಾರೆ. ತೆಲುಗಿಗೆ ಹೋಗಿ ಇಲ್ಲಿಂದ ಹೋಗಿರುವ ನಟಿಯರಿಗೆ ಕೂಡ ಪೈಪೋಟಿ ನೀಡುವ ಎಲ್ಲಾ ಸಾಧ್ಯತೆಗಳು ಇವೆ ಎಂಬ ಮಾತುಗಳು ಕೇಳಿ ಬಂದಿವೆ. ಈಗಾಗಲೇ ನಾಲ್ಕಕ್ಕೂ ಹೆಚ್ಚು ಸಿನಿಮಾಗಳ ನಿರ್ಮಾಪಕರು ಶ್ರೀಲೀಲಾ ರವರ ಜೊತೆ ಸಿನಿಮಾಗೆ ಸಹಿ ಹಾಕಲು ಕಾಯುತ್ತಿದ್ದಾರೆ.