ಸ್ಯಾಂಡಲ್ವುಡ್ ನಲ್ಲಿ ಮಾ’ದಕ ದ್ರ’ವ್ಯದ ಸೇವನೆಯಲ್ಲಿ ಮತ್ತೆ ಕೇಳಿ ಬರುತ್ತಿದೆ ಇಬ್ಬರು ಸ್ಟಾರ್ ನಟರ ಹೆಸರು ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಅಥವಾ ಇತ್ತೀಚಿನ ವರ್ಷಗಳಲ್ಲಿ ಸ್ಯಾಂಡಲ್ವುಡ್ನಲ್ಲಿ ಒಂದು ಸುದ್ದಿ ಸಾಕಷ್ಟು ಸದ್ದು ಮಾಡುತ್ತಿದ್ದು ಅದೇನೆಂದರೆ ಕನ್ನಡ ಚಿತ್ರರಂಗದ ಕೆಲ ನಟ ಹಾಗೂ ನಟಿಯರು ಮಾ’ದಕ ದ್ರ’ವ್ಯದ ಸೇವನೆಯನ್ನು ಮಾಡಿರುವುದು. ಈ ವಿಚಾರವಾಗಿ ಕನ್ನಡ ಚಿತ್ರರಂಗದ ಖ್ಯಾತ ನಟಿಯರಾದ ಅಂತಹ ರಾಗಿಣಿ ದ್ವಿವೇದಿ ಹಾಗೂ ಸಂಜನ ಗಲ್ರಣಿ ಅವರು ವಿಚಾರಣೆಗೆ ಒಳಪಟ್ಟರು ಹಾಗೂ ಇತ್ತೀಚೆಗೆ ಜೈಲುವಾಸವನ್ನು ಕೂಡ ಅನುಭವಿಸಿ ಬಂದಿದ್ದಾರೆ.

ಮಾತ್ರವಲ್ಲದೆ ಇವರ ಮನೆಯವರು ಇವರ ಬೇಲ್ ಗಾಗಿ ಸಾಕಷ್ಟು ಅಲೆದಾಡಿದ್ದಾರೆ ಕೂಡ. ಇನ್ನು ಇವರು ಜೈಲಿನಿಂದ ಹೊರಬಂದ ಮೇಲೆ ಸಾಕಷ್ಟು ಸಾಮಾಜಿಕ ಕಾರ್ಯಗಳಲ್ಲಿ ಕೂಡ ತೊಡಗಿಕೊಂಡಿದ್ದರು. ಇನ್ನು ಈ ಕುರಿತಂತೆ ಮೊದಲು ಧ್ವನಿಯೆತ್ತಿದ್ದು ಬಿಗ್ ಬಾಸ್ ಖ್ಯಾತಿಯ ಪ್ರಶಾಂತ್ ಸಂಬರ್ಗಿ ಅವರು. ಇನ್ನು ಇತ್ತೀಚೆಗೆ ಕೂಡ ಪ್ರಶಾಂತ್ ಸಂಬರ್ಗಿ ಅವರು ಸ್ಯಾಂಡಲ್ ವುಡ್ ನಲ್ಲಿ ಇನ್ನೂ ಇಬ್ಬರು ನಟರು ಮಾ’ದಕ ದ್ರ’ವ್ಯ ಸೇವಿಸುತ್ತಾರೆ ಎಂಬ ಸ್ಟೇಟ್ ಮೆಂಟ್ ಅನ್ನು ನೀಡಿದ್ದರು. ಮತ್ತು ಆ ನಟರು ತಮ್ಮ ಫಾರ್ಮ್ ಹೌಸ್ ನಲ್ಲಿ ಸೇವಿಸುತ್ತಾರೆ ಎಂಬುದನ್ನು ಕೂಡ ಹೇಳಿದ್ದರು.

ಈಗ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ನಟರ ಅಭಿಮಾನಿಗಳು ಪ್ರಶಾಂತ್ ಸಂಬರ್ಗಿ ಅವರ ವಿರುದ್ಧ ಹೇಳೋದು ಆದರೆ ಡೈರೆಕ್ಟಾಗಿ ಹೇಳು ಎಂಬ ಅಸಮಾಧಾನಕರ ಮಾತುಗಳನ್ನು ಹೇಳಲು ಪ್ರಾರಂಭಿಸಿದರು. ಯಾಕೆಂದರೆ ಕನ್ನಡ ಚಿತ್ರರಂಗದಲ್ಲಿ ಫಾರ್ಮ್ ಹೌಸ್ ಗಳನ್ನು ಹೊಂದಿರುವ ನಟರಲ್ಲಿ ಪ್ರಮುಖರು ಚಾಲೆಂಜಿಂಗ್ ಸ್ಟಾರ್ ದರ್ಶನ್, ನಿಖಿಲ್ ಕುಮಾರ್ ಹಾಗೂ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ರವರ ಹೆಸರು ಸದಾ ಕೇಳಿ ಬರುತ್ತಿರುತ್ತದೆ. ಹೀಗಾಗಿ ಇವರ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಮುಂದಿನ ದಿನಗಳಲ್ಲಿ ಆ ನಟರು ಯಾರೆಂಬುದು ಸ್ವತಹ ಪ್ರಶಾಂತ್ ಸಂಬರ್ಗಿ ಅವರೇ ಹೇಳಬೇಕಾಗಿದೆ.