ಆರ್ಸಿಬಿ ತಂಡಕ್ಕೆ ಹೊಸದಾಗಿ ಸೇರಿಕೊಂಡಿರುವ ಜಾರ್ಜ್ ಗಾರ್ಟನ್ ಯಾರು ಗೊತ್ತೇ?? ಈತನನ್ನು ಆರ್ಸಿಬಿ ಆಯ್ಕೆ ಮಾಡಲು ಕಾರಣವಾದರೂ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇಂಡಿಯನ್ ಪ್ರೀಮಿಯರ್ ಲೀಗ್ ಯಾನೆ ಐಪಿಎಲ್ ಗೆ ಬಂದಷ್ಟು ವಿಘ್ನಗಳು ಬೇರೆ ಯಾವ ಟೂರ್ನಿಗೂ ಬಂದಿಲ್ಲ. ಆದರೇ ಇದೇ ಮೊದಲ ಭಾರಿಗೆ ಐಪಿಎಲ್ ಇತಿಹಾಸದಲ್ಲಿ ಐಪಿಎಲ್ ಅರ್ಧಕ್ಕೆ ನಿಂತಿದ್ದಲ್ಲದೇ, ಉಳಿದರ್ಧ ಟೂರ್ನಿಯನ್ನು ಯು.ಎ.ಇ ಗೆ ಸ್ಥಳಾಂತರಿಸಲಾಗಿತ್ತು. ಈಗ ಆ ಸರಣಿ ಇದೇ ಸೆಪ್ಟೆಂಬರ್ 19 ರಿಂದ ಶುರುವಾಗಲಿದೆ.

ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ತಮ್ಮ ತಮ್ಮ ಆಟಗಾರರೊಂದಿಗೆ ದುಬೈನಲ್ಲಿ ಬೀಡುಬಿಟ್ಟಿವೆ. ಅದಲ್ಲದೇ ಕೆಲವು ವಿದೇಶಿ ಆಟಗಾರರೂ ಈ ಭಾರಿ ಯ ಐಪಿಎಲ್ ನಲ್ಲಿ ಪಾಲ್ಗೊಳ್ಳುತ್ತಿಲ್ಲ. ಆ ಕಾರಣದಿಂದಾಗಿ ಈಗಾಗಲೇ ಫ್ರಾಂಚೈಸೀಗಳು ಬದಲಿ ಆಟಗಾರರನ್ನ ಗುರುತಿಸಿ ತಂಡಕ್ಕೆ ಸೇರಿಸಿಕೊಂಡಿವೆ. ಆರ್ಸಿಬಿ ಸಹ ವನಿಂದು ಹಸರಂಗ, ದುಶ್ಯಂತ ಚಾಮೀರ, ಜಾರ್ಜ್ ಗಾರ್ಟನ್ ಮುಂತಾದವರನ್ನು ಬದಲಿ ಆಟಗಾರರನ್ನಾಗಿ ತಂಡಕ್ಕೆ ಸೇರಿಸಿಕೊಂಡಿದೆ. ಆದರೇ ಇದರಲ್ಲಿ ಜಾರ್ಜ್ ಗಾರ್ಟನ್ ರವರ ದಾಖಲೆಗಳು ಹಾಗೂ ಹಿನ್ನಲೆ ಅದ್ಭುತವಾಗಿದೆ. ಬನ್ನಿ ಅವರು ಯಾರೆಂದು ತಿಳಿಯೋಣ.

ಜಾರ್ಜ್ ಗಾರ್ಟನ್ ಇಂಗ್ಲೆಂಡ್ ನ ಏಡಗೈ ವೇಗದ ಬೌಲರ್. ಇತ್ತಿಚೆಗೆ ನಡೆದ ಹಂಡ್ರೇಡ್ ಲೀಗ್ ನಲ್ಲಿ ಹತ್ತು ವಿಕೇಟ್ ಪಡೆದು ಸದರ್ನ್ ಬ್ರೇವ್ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅದಲ್ಲದೆ ಬ್ಯಾಟಿಂಗ್ ನಲ್ಲಿಯೂ ಸಹ ಪಿಂಚ್ ಹಿಟ್ಟರ್ ಎಂದು ಗುರುತಿಸಿಕೊಂಡಿರುವ ಅಂತಿಮ ಓವರ್ ಗಳಲ್ಲಿ ಬಿಗ್ ಹಿಟ್ ಹೊಡೆಯುವ ಸಾಮರ್ಥ್ಯ ಸಹ ಹೊಂದಿದ್ದಾರೆ. ಘಂಟೆಗೆ 140 ಕೀ.ಮಿ ವೇಗದಲ್ಲಿ ಬೌಲಿಂಗ್ ಮಾಡುವ ಜಾರ್ಜ್ ಗಾರ್ಟನ್ ಚೆಂಡನ್ನ ಉತ್ತಮ ರೀತಿಯಲ್ಲಿ ಸ್ವಿಂಗ್ ಮಾಡುವ ಕೌಶಲ್ಯ ಹೊಂದಿದ್ದಾರೆ. ಈಗಾಗಲೇ ಆಡಿರುವ 23 ಪಂದ್ಯಗಳಲ್ಲಿ 53 ವಿಕೇಟ್ ಉರುಳಿಸಿದ್ದಾರೆ. ಆಸ್ಟ್ರೇಲಿಯಾದ ಏಡಗೈ ವೇಗಿ ಡ್ಯಾನಿಯಲ್ ಸ್ಯಾಮ್ಸ್ ಬದಲು ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಆರ್ಸಿಬಿ ಈ ಭಾರಿಯಾದರೂ ಕಪ್ ಗೆಲ್ಲಬಹುದೆಂಬ ಅಭಿಮಾನಿಗಳ ನೀರಿಕ್ಷೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕು.

ಹೊಸ ಆರ್ಸಿಬಿ ತಂಡ ಇಂತಿದೆ: ವಿರಾಟ್ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್ಸ್, ದೇವದತ್ ಪಡಿಕ್ಕಲ್, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಲ್, ಪವನ್ ದೇಶಪಾಂಡೆ, ಮೊಹಮ್ಮದ್ ಸಿರಾಜ್, ನವದೀಪ್ ಸೈನಿ, ಶಾಬಾಜ್ ಅಹ್ಮದ್, ವನಿಂದು ಹಸರಂಗ, ದುಷ್ಮಂತ ಚಮೀರಾ, ಗ್ಲೆನ್ ಮ್ಯಾಕ್ಸ್ ವೆಲ್, ಟಿಮ್ ಡೇವಿಡ್, ಕೈಲಿ ಜೇಮಿಸನ್, ಮೊಹಮ್ಮದ್ ಅಜರುದ್ದೀನ್, ರಜತ್ ಪಾಟೀದಾರ್, ಸಚಿನ್ ಬೇಬಿ, ಡೇನಿಯಲ್ ಕ್ರಿಶ್ಚಿಯನ್, ಹರ್ಷಲ್ ಪಟೇಲ್, ಜಾರ್ಜ್​ ಗಾರ್ಟನ್