ಅದ್ದೂರಿಯಾಗಿ ನಡೆದ ಸೀಮಂತ ಶಾಸ್ತ್ರದ ಸಮಾರಂಭದಲ್ಲಿ ನಿಖಿಲ್ ಪತ್ನಿ ರೇವತಿಗೆ ಕೊಟ್ಟ ಕೋಟಿ ಕೋಟಿ ಬೆಲೆಬಾಳುವ ಉಡುಗೊರೆ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಯುವರಾಜ ಎಂದೇ ಖ್ಯಾತರಾಗಿರುವ ನಿಖಿಲ್ ಕುಮಾರ್ ರವರು ಕಳೆದ ವರ್ಷ ಏಪ್ರಿಲ್ 17ರಂದು ರೇವತಿ ಅವರನ್ನು ವಿವಾಹವಾಗಿರುವುದು ನಿಮಗೆಲ್ಲ ಗೊತ್ತಿದೆ. ಹೌದು ಸ್ನೇಹಿತರೆ ಅದ್ದೂರಿಯಾಗಿ ಮದುವೆಯಾಗಬೇಕಿದ್ದ ನಿಖಿಲ್ ಕುಮಾರ್ ಹಾಗೂ ರೇವತಿ ಅವರು ಲಾಕ್ಡೌನ್ ಕಾರಣದಿಂದಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ಮದುವೆಯಾಗಿದ್ದರು. ನಂತರ ಅವರು ರಾಮನಗರದ ತೋಟದ ಮನೆಯಲ್ಲಿ ಸಂಸಾರವನ್ನು ಕಳೆಯುತ್ತಿದ್ದರು.

ದಿನಕಳೆದಂತೆ ಅಲ್ಲಿ ಕೃಷಿ ಕಾರ್ಯಗಳನ್ನು ಹಾಗೂ ರೇವತಿ ಅವರು ಆರ್ಕಿಟೆಕ್ಟ್ ಆಗಿದ್ದರಿಂದ ಹೊಸ ಮನೆಯನ್ನು ಕೂಡ ಕಟ್ಟಲು ಗುದ್ದಲಿ ಪೂಜೆ ಆರಂಭಿಸಿದರು. ನಂತರ ನಿಖಿಲ್ ಕುಮಾರ್ ರವರು ತಮ್ಮ ಮುಂದಿನ ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಇನ್ನು ಇತ್ತೀಚಿಗೆ ವಿವಾಹ ವಾರ್ಷಿಕೋತ್ಸವ ಸಂದರ್ಭದಲ್ಲಿ ತಮ್ಮ ಮಗುವಿನ ಆಗಮನದ ಸುದ್ದಿಯನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ಇಬ್ಬರಿಗೂ ಕೂಡ ಪಾಸಿಟಿವ್ ಇದ್ದ ಕಾರಣ ಹೆಚ್ಚಾಗಿ ಸುದ್ದಿಯನ್ನು ಮಾಡಲು ಹೋಗಲಿಲ್ಲ. ಈಗ ಇಬ್ಬರು ಸಂಪೂರ್ಣ ಗುಣಮುಖರಾಗಿದ್ದು ಮಗುವಿನ ನಿರೀಕ್ಷೆಯಲ್ಲಿ ದಂಪತಿ ಗಳಿಬ್ಬರು ಇದ್ದಾರೆ.

ಹೌದು ಸ್ನೇಹಿತರೆ ಇಂದು ನಿಖಿಲ್ ಕುಮಾರ್ ರವರು ತಮ್ಮ ಪತ್ನಿ ರೇವತಿ ಅವರ ಸೀಮಂತ ಶಾಸ್ತ್ರವನ್ನು ಎಚ್ಎಸ್ಆರ್ ಲೇಔಟ್ ನಲ್ಲಿರುವ ಮಾನ್ವಿ ಕನ್ವೆನ್ಷನ್ ಹಾಲ್ನಲ್ಲಿ ಅದ್ದೂರಿಯಾಗಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಹೆಂಡತಿಗೆ ಇಷ್ಟವಾಗಿರುವ ಎಲ್ಲಾ ವಿಷಯಗಳನ್ನು ಕೂಡ ಸೀಮಂತ ಶಾಸ್ತ್ರದಲ್ಲಿ ಗಂಡನಾಗಿ ನಿಖಿಲ್ ಕುಮಾರ್ ರವರು ಮಾಡಿದ್ದಾರೆ. ಇನ್ನು ನಿಖಿಲ್ ಕುಮಾರ್ ರವರು ಸೀಮಂತ ಶಾಸ್ತ್ರದ ಉಡುಗೊರೆಯಾಗಿ ಪತ್ನಿ ರೇವತಿ ಅವರಿಗೆ ಹೊಸ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಮಗು ಜನಿಸಿದ ಮೇಲೆ ಮೂವರು ಕೂಡ ಶಾಸ್ತ್ರೋಕ್ತವಾಗಿ ಮನೆಯ ಗೃಹ ಪ್ರವೇಶ ಮಾಡಲಿದ್ದಾರೆ ಎಂಬ ಸುದ್ದಿ ತಿಳಿದು ಬಂದಿದೆ. ಇನ್ನು ಈ ಸಂತೋಷದ ವಿಷಯದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.