ಮೊದಲ ದಿನಗಳಲ್ಲಿಯೇ ಜನರ ಮನ ಗೆದ್ದಿರುವ ಹೊಸ ಧಾರವಾಹಿ ಹಿ.ಕಲ್ಯಾಣಕ್ಕೆ ಹೊಸ ಖ್ಯಾತ ನಟಿಯ ಎಂಟ್ರಿ, ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಮುಗಿದ ನಂತರ ಕಲರ್ಸ್ ಕನ್ನಡದಲ್ಲಿ 2 ಹೊಸ ಧಾರವಾಹಿಗಳು ಆರಂಭವಾಗಿದ್ದು ತುಂಬಾನೇ ಫೇಮಸ್ ಆಗ್ತಾ ಇದೆ. ಅದರಂತೆ ಜೀ ಕನ್ನಡದಲ್ಲಿಯೂ ಕೂಡ ಹೊಸ ಧಾರವಾಹಿಗಳು ಪ್ರಸಾರವಾಗುತ್ತಿವೆ. ಅದರಲ್ಲಿ ಇದೀಗ ಜನಮನ ಗೆದ್ದಿರುವ ಧಾರವಾಹಿ ಎಂದರೆ ‘ಹಿ.ಕಲ್ಯಾಣ’. ಜೀ ಕನ್ನಡದ ಟ್ ಆರ್ ಪಿ ಹೆಚ್ಚುವುದರಲ್ಲಿ ಈ ಧಾರಾವಾಹಿಯೂ ಕೂಡ ಒಂದು ಕಾರಣ ಎನ್ನಬಹುದು.

ಹೌದು ಸ್ನೇಹಿತರೇ, ಮೂರು ಮಗ ಸೊಸೆಯಂದಿರನ್ನು ಹೊಂದಿರುವ ಮಾವನೊಬ್ಬನಿಗೆ ಮರು ಮದುವೆ ಮಾಡಿಸುವ ಕಥೆ ಇದು. ಮುಖ್ಯಭೂಮಿಕೆಯಲ್ಲಿ ದಿಲೀಪ್ ರಾಜ್ ಅಭಿನಯಿಸುತ್ತಿದ್ದಾರೆ. ಹಾಗೆಯೇ ರಾಮ್ ನಿಗೆ ಜೋಡಿಯಾಗಿ ಲೀಲಾ ಪಾತ್ರದಲ್ಲಿ ಮಲೈಕಾ ಅಭಿನಯಿಸಿದ್ದಾರೆ. ಒಬ್ಬ ಮದುವೆಯಾಗಿ ಹೆಂಡತಿಯನ್ನು ಕಳೆದುಕೊಂಡ ವ್ಯಕ್ತಿಗೆ ಮಯೂ ಮದುವೆ ಮಾಡಿಸುವ ಎಪಿಸೋಡ್ ಈಗಾಗಲೇ ಶುರುವಾಗಿದೆ. ರಾಮ್ ಲೀಲಾ ಎಂಗೇಜ್ ಮೆಂಟ್ ನಡೆದು ಇನೇನು ಮೆಹೆಂದಿ ಶಾಸ್ತ್ರದ ಎಪಿಸೋಡ್ ಪ್ರಸಾರವಾಗಲಿದೆ. 2ರಿಂದ 3 ದಿನಗಳ ಕಾಲ ನಡೆಯುವ ಮೆಹೆಂದಿ ಎಪಿಸೋಡ್, ಅತ್ಯಂತ ವಿಜೃಂಭಣೆಯಿಂದ ನೆರವೇರಿಸಲಿದೆ ಹಿ.ಕಲ್ಯಾಣ ಧಾರಾವಾಹಿ ತಂಡ.

ತನಗಿಂತ ತುಂಬಾ ಅಧಿಕ ವಯಸ್ಸಿನ ವ್ಯಕ್ತಿಯನ್ನು ಮದುವೆಯಾಗುವ ಪರಿ ಟ್ರೆಂಡ್ ಆದಂತೆ ಅನ್ನಿಸುತ್ತಿದೆ. ಜೊತೆಜೊತೆಯಲಿ ಧಾರವಾಹಿಯಂತೆ ಹಿ.ಕಲ್ಯಾಣದಲ್ಲಿಯೂ ಲೀಲಾ ಚಿಕ್ಕ ಮಯಸ್ಸಿನ ಹುಡುಗಿ. ಇನ್ನು ಸಾಕಷ್ಟು ಟ್ವಿಸ್ಟ್ ಗಳನ್ನು ಒಳಗೊಂಡಿರುವ ಈ ಧಾರಾವಾಹಿ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲವನ್ನೂ ಹುಟ್ಟುಹಾಕಿದೆ. ಇನ್ನು ಮಲೈಕಾ ಮೊದಲನೇ ಬಾರಿಗೆ ಅಭಿನಯಿಸುತ್ತಿದ್ದರೂ ಕೂಡ ಅವರ ಅಭಿನಯದಲ್ಲಿ ಪ್ರೌಢತೆಯನ್ನು ಕಾಣಬಹುದು. ಹಾಗೆಯೇ ದಿಲೀಪ್ ರಾಜ್ ಎಂದಿನಂತೆ ಉತ್ತಮವಾಗಿಯೇ ಅಭಿಯಾಯಿಸುತ್ತಿದ್ದಾರೆ. ಹಿ.ಕಲ್ಯಾಣ ನಡೆಯಲಿದ್ದು ಮೆಹಂದಿ ಶಾಸ್ತ್ರದ ಎಪಿಸೋಡ್ ನಲ್ಕಿ ಓರ್ವ ಫೇಮಸ್ ಕಿರುತೆರೆಯ ನಟಿ ಗೆಸ್ಟ್ ಆಗಿ ಬರಲಿದ್ದಾರೆ. ಯಾರು ಗೊತ್ತಾ!? ಅವರೇ ನಾಗಿಣಿ 2 ಧಾರಾವಾಹಿಯ ಶಿವಾನಿ ಪಾತ್ರಧಾರಿ ನಮ್ರತಾ ಗೌಡ. ಹೌದು ಗ್ಲಾಮರಸ್ ಈಗಿರುವ ನಮ್ರತಾ ಸೋಶಿಯಲ್ ಮೀಡಿಯಾದಲ್ಲೂ ತುಂಬಾನೇ ಅಕ್ವಿಟ್. ಇದೀಗ ಹಿ.ಕಲ್ಯಾಣದಲ್ಲಿ ಪ್ರಸಾರವಾಗುವ ಮೆಹಂದಿ ಶಾಸ್ತ್ರದ ಎಪಿಸೋಡ್ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಅದರಲ್ಲಿ ಅವರ ಪಾತ್ರದ ಬಗ್ಗೆ ಧಾರವಾಹಿಯನ್ನು ನೋಡಿಯೇ ತಿಳಿದುಕೊಳ್ಳಬೇಕು.