ಕರ್ನಾಟಕ ರಾಜ್ಯದಲ್ಲಿ ಲೀಗಲ್ ಆಗಿ ಅತ್ಯಂತ ಶ್ರೀಮಂತ ರಾಜಕಾರಣಿ ಯಾರು ಗೊತ್ತೇ?? ನಿಮ್ಮ ನಾಯಕರು ಎಷ್ಟು ಆಸ್ತಿ ಇಟ್ಟಿದ್ದಾರೆ ನೋಡಿ.

ನಮಸ್ಕಾರ ಸ್ನೇಹಿತರೇ ರಾಜಕಾರಣಕ್ಕೆ ಸೇರಿದರೆ ಜನರ ಸೇವೆ ಜೊತೆಗೆ ತಮ್ಮ ಜೇಬಿನ ಸೇವೆ ಕೂಡ ಮಾಡಬಹುದು ಎಂಬುದು ಸಿನಿಮಾಗಳಲ್ಲಿ ನೋಡಿ ಎಲ್ಲರೂ ಅರ್ಥ ಮಾಡಿಕೊಂಡಿದ್ದಾರೆ. ಇಂದಿನ ವಿಷಯದಲ್ಲಿ ನಾವು ಕರ್ನಾಟಕದ ಅತ್ಯಂತ ಶ್ರೀಮಂತ ರಾಜಕಾರಣಿ ಯಾರು ಎಂಬುದರ ಕುರಿತಂತೆ ನಿಮಗೆ ಸವಿವರವಾಗಿ ಹೇಳಲು ಹೊರಟಿದ್ದೇವೆ.

ಶಾಂತಿನಗರ ಕ್ಷೇತ್ರದ ಅಭ್ಯರ್ಥಿಯಾಗಿರುವ ಹಾರಿಸ್ ರವರು ಹೋಟೆಲ್ ಉದ್ಯಮಿಯಾಗಿದ್ದು ಬರೋಬ್ಬರಿ 220 ಕೋಟಿ ರೂಪಾಯಿ ಆಸ್ತಿಯನ್ನು ಹೊಂದಿದ್ದಾರೆ. ಬೀದರ್ ಕ್ಷೇತ್ರದ ಅಭ್ಯರ್ಥಿಯಾಗಿರುವ ಅಶೋಕ್ ಖೇಣಿ ಅವರು ಬರೋಬ್ಬರಿ 200 ಕೋಟಿ ರೂಪಾಯಿ ಆಸ್ತಿಯನ್ನು ಹೊಂದಿದ್ದಾರೆ. ಬಸವನಗುಡಿ ಕ್ಷೇತ್ರದ ಅಭ್ಯರ್ಥಿ ಆಗಿರುವ ಕೆ ಬಾಗೇಗೌಡ ಅವರು ಬರೋಬ್ಬರಿ 320 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ವಿಜಯನಗರ ಕ್ಷೇತ್ರದ ಅಭ್ಯರ್ಥಿ ಆಗಿರುವ ಎಂ ಕೃಷ್ಣಪ್ಪರವರು ಬರೋಬ್ಬರಿ 250 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ‌.

ಕಬ್ಬಿಣದ ವ್ಯಾಪಾರದಲ್ಲಿ ಹಾಗೂ ಕರಟಗೆರೆ ಕ್ಷೇತ್ರದ ಅಭ್ಯರ್ಥಿಯಾಗಿರುವ ಸಂತೋಷ್ ಲಾಡ್ ರವರು 320 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಹೆಬ್ಬಾಳ ಕ್ಷೇತ್ರದ ಅಭ್ಯರ್ಥಿಯಾಗಿರುವ ಬೈರತಿ ಸುರೇಶ್ ರವರು ಬರೋಬ್ಬರಿ 400 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಕಬ್ಬಿಣ ಗಣಿಗಾರಿಕೆಯ ವ್ಯಾಪಾರಿಯಾಗಿರುವ ಹಾಗೂ ಬಳ್ಳಾರಿ ಕ್ಷೇತ್ರದ ಅಭ್ಯರ್ಥಿಯಾಗಿರುವ ಅನಿಲ್ ಲಾಡ್ ಅವರು ಬರೋಬ್ಬರಿ 400ಕೋಟಿ ಆಸ್ತಿಯನ್ನು ಹೊಂದಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕೇವಲ 6 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇವಲ 20 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ.

ಮತ್ತೊಬ್ಬ ಮಾಜಿ ಮುಖ್ಯಮಂತ್ರಿಯಾಗಿರುವ ಎಚ್ ಡಿ ಕುಮಾರಸ್ವಾಮಿ ಅವರು ಬರೋಬ್ಬರಿ 250 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಕನಕಪುರ ಕ್ಷೇತ್ರದ ಅಭ್ಯರ್ಥಿಯಾಗಿರುವ ಡಿಕೆ ಶಿವಕುಮಾರ್ ರವರು ಬರೋಬ್ಬರಿ 850 ಕೋಟಿ ರೂಪಾಯಿ ಆಸ್ತಿಯನ್ನು ಹೊಂದಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಗೋವಿಂದರಾಜನಗರ ಅಭ್ಯರ್ಥಿಯಾಗಿರುವ ಪ್ರಿಯಾಕೃಷ್ಣ ರವರು ಬರೋಬ್ಬರಿ 150 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಕೃಷಿಕ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಹೊಸಕೋಟೆ ಕ್ಷೇತ್ರದ ಅಭ್ಯರ್ಥಿಯಾಗಿರುವ ಎಂಟಿಬಿ ನಾಗರಾಜ್ ರವರು ಬರೋಬ್ಬರಿ 880 ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಇನ್ನು m.t.b. ಅವರ ಪತ್ನಿಯ ಹೆಸರಿನಲ್ಲಿ 1200 ಕೋಟಿಗೂ ಹೆಚ್ಚಿನ ಆಸ್ತಿ ಇದೆ ಎಂದು ಹೇಳಲಾಗುತ್ತಿದೆ.